ಬೆಂಗಳೂರಿನ ಈ ಏರಿಯಾದಲ್ಲಿ ಮನೆ ಖರೀದಿ ಫುಲ್‌ ದುಬಾರಿ; ಬೆಲೆ ಕೇಳಿದ್ರೆ ಬೆಚ್ಚಿ ಬೀಳ್ತೀರ!

ಸಿಲಿಕಾನ್‌ ಸಿಟಿ ಬೆಂಗಳೂರು ಅತಿ ವೇಗವಾಗಿ ಡೆವಲಪ್‌ ಆಗುತ್ತಿರುವ ನಗರಗಳಲ್ಲಿ ಮುಂಚೂಣಿಯಲ್ಲಿದೆ. ದೇಶದ ನಾನಾ ಭಾಗಗಳಿಂದ ಜನ ಬೆಂಗಳೂರಿಗೆ ಬಂದು ನೆಲೆಸುತ್ತಿದ್ದಾರೆ. ಅದರಂತೆ ಬೆಂಗಳೂರಿನ ಅಭಿವೃದ್ಧಿಯೂ ವೇಗವಾಗಿ ಸಾಗಿದೆ. ಹೀಗಾಗಿ ಇಂತಹ ಬೆಂಗಳೂರಿನಲ್ಲಿ ಒಂದು ಮನೆ ಖರೀದಿಸಬೇಕು ಎನ್ನೋದು ಎಷ್ಟೋ ಜನರ ಕನಸು ಅಂತಾನೇ ಹೇಳಬಹುದು. ಯಾಕಂದ್ರೆ ಬೆಂಗಳೂರಲ್ಲಿ ಮನೆ ಮಾಡೋದು ಅಷ್ಟು ಸುಲಭದ ಮಾತೇನಲ್ಲ.

ಅದರಲ್ಲೂ ಮಧ್ಯಮವರ್ಗದ ಜನರೆಲ್ಲ ಬೆಂಗಳೂರಿನಲ್ಲಿ ಒಂದು ಮನೆ ಮಾಡಿಕೊಂಡರೆ ಸಾಕು ಅನ್ನೋ ಕನಸಲ್ಲೇ ದಿನಕಳೆಯುತ್ತಿರುತ್ತಾರೆ. ಉದ್ಯಾನನಗರಿಯ ಬಹುತೇಕ ಪ್ರದೇಶಗಳು ಕ್ಷಿಪ್ರಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿದ್ದು, ಈ ಪೈಕಿ ಕೆಲವು ಏರಿಯಾಗಳಲ್ಲಿ ಮನೆ ಬೆಲೆ ಗಗನಕ್ಕೇರಿದೆ. ಕಳೆದ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಬೆಂಗಳೂರಿನ ಕೆಲವೇ ಏರಿಯಾಗಳಲ್ಲಿ ಮನೆ ಖರೀದಿ ದರಗಳು ದುಬಾರಿಯಾಗಿದೆ ಎಂದು ವರದಿಯೊಂದು ಹೇಳಿದೆ.

In Some Areas Of Bengaluru House Prices Have Risen The Highest In India

ರಿಯಲ್‌ ಎಸ್ಟೇಟ್‌ ಸಲಹಾ ಸಂಸ್ಥೆ ಅನರಾಕ್‌ ಪ್ರಕಾರ, ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪವಿರುವ ಬಾಗಲೂರು ಪ್ರದೇಶದಲ್ಲಿ ಮನೆಗಳ ಬೆಲೆ ಇಡೀ ದೇಶದಲ್ಲೇ ಅತಿ ಹೆಚ್ಚಾಗಿದೆ ಎಂದು ಹೇಳಿದೆ. ಬಾಗಲೂರಿನಲ್ಲಿ 2020ರ ಬಳಿಕ ಮನೆಗಳ ಸರಾಸರಿ ಬೆಲೆಯಲ್ಲಿ ಶೇ 90ರಷ್ಟು ಹೆಚ್ಚಳವಾಗಿದ್ದು, ದೇಶದ ಗಮನ ಸೆಳೆದಿದೆ.

ಅನರಾಕ್‌ ಸಂಸ್ಥೆಯು ಬೆಂಗಳೂರು ಸೇರಿದಂತೆ ದೇಶದ ಏಳು ಪ್ರಮುಖ ನಗರಗಳಲ್ಲಿ ಈ ಬಗ್ಗೆ ಅಧ್ಯಯನ ನಡೆಸಿತ್ತು. ಕಳೆದ ಐದು ವರ್ಷಗಳಲ್ಲಿ ಮನೆಗಳ ಬೆಲೆ ಏರಿಕೆ ವಿಚಾರದಲ್ಲಿ ಬೆಂಗಳೂರು ಮುಂಚೂಣಿಯಲ್ಲಿದ್ದು, ಬಾಗಲೂರು ಮೊದಲ ಸ್ಥಾನ ಪಡೆದರೆ, ವೈಟ್‌ಫೀಲ್ಡ್‌ ಮೂರನೇ ಸ್ಥಾನ ಹಾಗೂ ಸರ್ಜಾಪುರ ರಸ್ತೆಯು ಐದನೇ ಸ್ಥಾನದಲ್ಲಿದೆ.

In Some Areas Of Bengaluru House Prices Have Risen The Highest In India

ಬೆಂಗಳೂರಲ್ಲಿ ಮನೆ ಬೆಲೆ ಎಷ್ಟಿದೆ?: 2019ರಲ್ಲಿ ಬಾಗಲೂರಿನಲ್ಲಿ ಮನೆಗಳ ಸರಾಸರಿ ಬೆಲೆ ಒಂದು ಚದರ ಅಡಿಗೆ 4,300 ರೂಪಾಯಿ ಇತ್ತು. ಈ ವರ್ಷದ ಪ್ರತಿ ಚದರ ಅಡಿಗೆ ಸರಾಸರಿ ಬೆಲೆ 8,151 ರೂಪಾಯಿ ಎನ್ನಲಾಗಿದೆ. ಹಾಗಾಗಿ ಇಡೀ ದೇಶದಲ್ಲೇ ಬಾಗಲೂರು ಅತಿ ಹೆಚ್ಚು ದರ ಏರಿಕೆ ಕಂಡಿರುವ ಪ್ರದೇಶ ಎನಿಸಿಕೊಂಡಿದೆ.

ಇತ್ತ ವೈಟ್‌ಫೀಲ್ಡ್‌ನಲ್ಲಿ ಮನೆಗಳ ದರ ಶೇ 80ರಷ್ಟು ಏರಿದರೆ, ಸರ್ಜಾಪುರ ರಸ್ತೆಯಲ್ಲಿ ಶೇ 58ರಷ್ಟು ಹೆಚ್ಚಳವಾಗಿದೆ. ಬೆಂಗಳೂರಿನ ರಿಯಲ್‌ ಎಸ್ಟೇಟ್‌ ಗಗನಕ್ಕೇರುತ್ತಿದ್ದು, ಬೆಂಗಳೂರು ನಾರ್ಥ್‌, ವೈಟ್‌ಫೀಲ್ಡ್ ಮತ್ತು ಸರ್ಜಾಪುರ ರಸ್ತೆಯಲ್ಲಿ ಮನೆಗಳ ಬೆಲೆಯಲ್ಲಿ ನಿರಂತರವಾಗಿ ಏರುತ್ತಿರುವುದಕ್ಕೆ ಈ ಏರಿಯಾಗಳು ವೇಗವಾಗಿ ಮೂಲಸೌಕರ್ಯಗಳ ಅಭಿವೃದ್ಧಿಯಾಗುತ್ತಿರುವುದೇ ಕಾರಣ ಎನ್ನಲಾಗಿದೆ.

ಒಟ್ಟಾರೆ ಬೆಂಗಳೂರಿನಲ್ಲಿ ಮನೆಗಳ ಬೆಲೆ ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ 28ರಷ್ಟು ಹೆಚ್ಚಳವಾಗಿದೆ. ಕಳೆದ ವರ್ಷ ಪ್ರತಿ ಚದರ ಅಡಿಗೆ 8,688 ರೂಪಾಯಿ ಇದ್ದ ದರವು ಈ ವರ್ಷದ ಮೊದಲ ತ್ರೈಮಾಸಿಕದ ವೇಳೆಗೆ 11,161 ರೂಪಾಯಿಗೆ ಏರಿಕೆಯಾಗಿದೆ ಎಂದು ವರದಿಯಾಗಿದೆ. ಬೆಂಗಳೂರಿನ ಬಾಗಲೂರು, ವೈಟ್‌ಫೀಲ್ಡ್‌, ಸರ್ಜಾಪುರ ರಸ್ತೆ, ಹೈದರಾಬಾದ್‌ನ ಕೋಕಾಪೇಟ್‌, ಬಾಚುಪಲ್ಲಿ, ತೆಲ್ಲಾಪುರ್‌, ನವದೆಹಲಿಯ ದ್ವಾರಕಾ ಎಕ್ಸ್‌ಪ್ರೆಸ್‌ವೇ ಈ ಪ್ರದೇಶಗಳಲ್ಲಿ ಮನೆಗಳ ದರ ದುಬಾರಿಯಾಗಿದೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+