• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನೇರಳೆ ಮಾರ್ಗದ ಮೆಟ್ರೋದಲ್ಲಿ ಪ್ರಯಾಣಿಕರ ದಟ್ಟಣೆ ತಗ್ಗಿಸಲು ಮಾಸ್ಟರ್ ಪ್ಲ್ಯಾನ್

|

ಬೆಂಗಳೂರು, ಆಗಸ್ಟ್ 20: ಇನ್ನುಮುಂದೆ ನೇರಳೆ ಮಾರ್ಗದಲ್ಲಿ ಎಲ್ಲಾ ಮೆಟ್ರೋ ರೈಲುಗಳನ್ನೂ ಆರು ಬೋಗಿಯ ರೈಲುಗಳನ್ನಾಗಿ ಮಾರ್ಪಡಿಸಲಾಗುತ್ತದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.

ಮೆಟ್ರೋ ನೇರಳೆ ಮಾರ್ಗ ಮೈಸೂರು ರಸ್ತೆ-ಬೈಯಪ್ಪನಹಳ್ಳಿ ಎಲ್ಲಾ 18 ರೈಕುಗಳನ್ನು ಆರು ಬೋಗಿ ರೈಲಾಗಿ ಪರಿವರ್ತಿಸಲಾಗುತ್ತಿದೆ.

ನಮ್ಮ ಮೆಟ್ರೋ ಸ್ಮಾರ್ಟ್ ಕಾರ್ಡ್ ಆನ್‌ಲೈನ್ ರೀಚಾರ್ಜ್ ಮತ್ತೆ ಆರಂಭ

ಮೆಟ್ರೋ ಒಂದನೇ ಹಂತದಲ್ಲಿ 50 ರೈಲುಗಳು ಲಭ್ಯವಿದೆ. ಈ ಪೈಕಿ 18 ರೈಲುಗಳನ್ನು ನೇರಳೆ ಮಾರ್ಗದಲ್ಲಿ ಹಾಗೂ 11-15 ರೈಲುಗಳನ್ನು ನಾಗಸಂದ್ರ-ಯಲಚೇನಹಳ್ಳಿ ಹಸಿರು ಮಾರ್ಗದಲ್ಲಿ ಕಾರ್ಯಾಚರಿಸಲಾಗುತ್ತಿದೆ.

ಸೆಪ್ಟೆಂಬರ್ ನಲ್ಲಿ ಎಲ್ಲಾ ರೈಲುಗಳನ್ನು ಆರು ಬೋಗಿ ರೈಲಾಗಿಸುವ ಗುರಿ ಹೊಂದಲಾಗಿತ್ತು. ಆದರೆ ಬಿಇಎಂಎಲ್‌ನಿಂದ ಬೋಗಿ ಪೂರೈಕೆ ತಡವಾಗುತ್ತಿದೆ. ಎಲ್ಲಾ ರೈಲುಗಳನ್ನು ಆರು ಬೋಗಿಯಾಗಿಸುವ ಗಡುವನ್ನು 2020 ರ ಮಾರ್ಚ್ ಗೆ ವಿಸ್ತರಿಸಲಾಗಿದೆ.

ಪ್ರಯಾಣಿಕರ ಸಂಖ್ಯೆ ನೋಡಿಕೊಂಡು ಹೆಚ್ಚುವರಿ ರೈಲನ್ನು ಸಂಚಾರಕ್ಕಿಳಿಸಲಾಗುತ್ತದೆ. ಹಸಿರು ಮಾರ್ಗದಲ್ಲಿ ಕಾರ್ಯಾಚರಿಸುತ್ತಿದ್ದ ಒಂದು ರೈಲನ್ನು ಮಾತ್ರ ಆರು ಬೋಗಿಯ ರೈಲಾಗಿ ಪರಿವರ್ತಿಸಲಾಗಿದೆ.

ಈ ಮಾರ್ಗದಲ್ಲಿ ದಟ್ಟಣೆಯನ್ನು ಕಡಿಮೆ ಮಾಡಲು ನೇರಳೆ ಬಣ್ಣದ ಮತ್ತು ಆರು ಬೋಗಿ ರೈಲನ್ನು ನೇರಳೆ ಮಾರ್ಗದಲ್ಲಿ ಪ್ರಯಾಣಿಕರ ಅತಿಯಾದ ದಟ್ಟಣೆ ಕಂಡುಬರುತ್ತಿಲ್ಲ.

1421 ಕೋಟಿ ರೂ ವೆಚ್ಚದಲ್ಲಿ ಬೋಗಿಗಳನ್ನು ಖರೀದಿಸಲಾಗುತ್ತಿದೆ. ನೇರಳೆ ಮಾರ್ಗದಲ್ಲಿ ಆರು ಬೋಗಿಯ ರೈಲುಗಳೇ ಇರುವುದರಿಂದ ಮೊದಲ ಬೋಗಿಯಲ್ಲಿ ಪೂರ್ಣವಾಗಿ ಮಹಿಳಾ ಮೀಸಲು ಜಾರಿ ಮಾಡಲಾಗಿದೆ.

English summary
BMRCL said that In Purple Lane All Metro Rail Becomes six coaches By 2020 March.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X