Namma Metro: ಆತ್ಮಹತ್ಯೆ ತಡೆಗೆ ಮತ್ತೆ ಆರಂಭವಾಯ್ತು PSD ಅಳವಡಿಕೆಯ ಚರ್ಚೆ
ಬೆಂಗಳೂರು, ಆಗಸ್ಟ್ 05: ಬೆಂಗಳೂರು ನಮ್ಮ ಮೆಟ್ರೋ ಆತ್ಮಹತ್ಯೆ, ಆತ್ಮಹತ್ಯೆ ಯತ್ನ ಪ್ರಕರಣಗಳಿಗೆ ಮೇಲಿಂದ ಮೇಲೆ ಸಾಕ್ಷಿಯಾಗುತ್ತಿದೆ. ಇಂತಹ ಘಟನೆಗಳು ವರದಿ ಆಗುತ್ತಿದ್ದಂತೆ ಮೆಟ್ರೋ ನಿಲ್ದಾಣಗಳಲ್ಲಿ ಪ್ಲಾಟ್‌ಫಾರ್ಮ್ ಸ್ಕ್ರೀನ್ ಡೋರ್ ವ್ಯವಸ್ಥೆ ಅಳವಡಿಕೆ (PSD) ಕುರಿತು ಚರ್ಚೆಗಳು ಮುನ್ನೆಲೆಗೆ ಬರುತ್ತವೆ.
ಆಗಸ್ಟ್ 03ರಂದು ನಮ್ಮ ಮೆಟ್ರೋ ದೊಡ್ಡಕಲ್ಲಸಂದ್ರ ನಿಲ್ದಾಣದಲ್ಲಿ ಮೆಟ್ರೋ ಹಳಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದು ಎರಡನೇ ಪ್ರಕರಣವಾಗಿದೆ. ಈಗ ಮೂಲತಃ ಉತ್ತರ ಪ್ರದೇಶದ ಮೂಲದವರಾಗಿದ್ದು, ಹಲವು ವರ್ಷಗಳಿಂದ ಬೆಂಗಳೂರಿನಲಿದ್ದಾರೆ. ನಾಗಸಂದ್ರ ಮತ್ತು ಸಿಲ್ಕ್‌ಬೋರ್ಡ್ ಮಧ್ಯದ ಮೆಟ್ರೋ ಹಸಿರು ಮಾರ್ಗದಲ್ಲಿ ಈ ಆತ್ಮಹತ್ಯೆ ಪ್ರಕರಣ ನಡೆದಿದೆ.

ಇದರ ಬೆನ್ನಲ್ಲೆ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಉದ್ದೇಶಿತ ಪಿಎಸ್‌ಡಿ ವ್ಯವಸ್ಥೆಯನ್ನು ಮೆಟ್ರೋ ನಿಲ್ದಾಣಗಳಲ್ಲಿ ಪರಿಣಾಮಕಾರಿಗೆ ಜಾರಿಗೆ ತರಬೇಕು ಎನ್ನುವ ಯೋಜನೆಗೆ ಮತ್ತಷ್ಟು ವೇಗ ದೊರೆತಿದೆ.
2 ಮಾರ್ಗದ ನಿಲ್ದಾಣಗಳಲ್ಲಿ ಪಿಎಸ್‌ಡಿ ವ್ಯವಸ್ಥೆ, ಟೆಂಡರ್
ಬಿಎಂಆರ್‌ಸಿಎಲ್ ಈಗಾಗಲೇ ಸಿದ್ಧವಾಗುತ್ತಿರುವ ಮೆಟ್ರೋ ಗುಲಾಬಿ ಮಾರ್ಗದ ನಿಲ್ದಾಣಗಳಲ್ಲಿ, ಮೆಟ್ರೋ ಎರಡನೇ ಹಂತದ 2ಎ ಯೋಜನೆಯಾದ ಸಿಲ್ಕಬೋರ್ಡ್-ಕೆಆರ್‌ಪುರ-ದೇವನಹಳ್ಳಿ ವಿಮಾನ ನಿಲ್ದಾಣ ವರೆಗಿನ ನೀಲಿ ಮಾರ್ಗ ಮೆಟ್ರೋ ನಿಲ್ದಾಣಗಳಲ್ಲಿ ಈ ಪಿಎಸ್‌ಡಿ ವ್ಯವಸ್ಥೆ ಅಳವಡಿಕೆಗೆ ಟೆಂಡರ್ ಕರೆದಿದೆ.
ಹಳದಿ ಮಾರ್ಗದಲ್ಲಿ ಪಿಎಸ್‌ಡಿ ಇರಲಿದೆಯೇ?
ಇನ್ನೂ ನಮ್ಮ ಮೆಟ್ರೋ ಹಳದಿ ಮಾರ್ಗವು (ಆರ್‌ವಿ ರಸ್ತೆ-ಬೊಮ್ಮಸಂದ್ರ) ಇದೇ ವರ್ಷ ಡಿಸೆಂಬರ್ ಅಂತ್ಯಕ್ಕೆ ವಾಣಿಜ್ಯ ಕಾರ್ಯಾಚರಣೆಗೆ ಮುಕ್ತವಾಗಲಿದೆ. ಈ ಮಾರ್ಗದಲ್ಲಿ ಚಾಲಕ ರಹಿತ ಮೆಟ್ರೋ ರೈಲುಗಳು ಆಗಮಿಸಿವೆ. ಆದರೂ ಸದ್ಯಕ್ಕೆ ಚಾಲಕ ಸಹಿತವಾಗಿ ರೈಲು ಓಡಿಸಲು ಬಿಎಂಆರ್‌ಸಿಎಲ್ ಪ್ಲಾನ್ ಮಾಡಿದೆ. ಈ ಮಾರ್ಗ ನಿಲ್ದಾಣಗಳಲ್ಲಿ ಪಿಎಸ್‌ಡಿ ವ್ಯವಸ್ಥೆ ಇರಲಿದೆ ಎಂದು ಹೇಳಲಾಗುತ್ತಿವೆ.

ಮಟ್ರೋ ಹಳಿಗೆ ಜಿಗಿಯುವ ಪ್ರಕರಣ ಹೆಚ್ಚಾಗಿದ್ದರಿಂದ ಇಂಡರ್‌ಚೇಂಜ್ ನಿಲ್ದಾಣ ನಾಡಪ್ರಭು ಕೆಂಪೇಗೌಡ ರೈಲು ನಿಲ್ದಾಣ ಮೆಜೆಸ್ಟಿಕ್ ನಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದೆ. ಹೆಚ್ಚುವರಿ ಸಿಬ್ಬಂದಿ ನಿಯೋಜಿಸುವ ಮೂಲಕ ಪ್ರಯಾಣಿಕರಿಗೆ ರಕ್ಷಣೆ ನೀಡಲಾಗುತ್ತಿ. ಟ್ರ್ಯಾಕ್‌ಗೆ ಜಿಗಿಯುವಂತಹ ಪ್ರಕರಣಗಳಿಗೆ ಕಡಿವಾಣ ಹಾಕಲು ಅಧಿಕಾರಿಗಳು ಮುಂದಾಗಿದ್ದಾರೆ.
ಅತ್ತಿಗುಪ್ಪೆಯಲ್ಲಿ ಆತ್ಮಹತ್ಯೆ ಮೊದಲ ಪ್ರಕರಣ
ಇದೇ ವರ್ಷ ಕಳೆದ ಮಾರ್ಚ್ ತಿಂಗಳಲ್ಲಿ ನಗರದ ಅತ್ತಿಗುಪ್ಪೆ ಮಟ್ರೋ ನಿಲ್ದಾಣದಲ್ಲಿ ಯುವಕ ಕಾನೂನು ವಿದ್ಯಾರ್ಥಿ ಕೇಂಗೇರಿ ಕಡೆಯಿಂದ ಬರುತ್ತಿದ್ದ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ. ಇದು ಮೊದಲ ಪ್ರಕರಣವಾಗಿದೆ. ಇದಾದ ಬಳಿಕ ರೈಲು ಸಂಚಾರದಲ್ಲಿ ವ್ಯತ್ಯಯವಾಗಿತ್ತು.
ಈ ಬಗ್ಗೆ ಕೂಲಂಕುಷವಾಗಿ ಅಧಿಕಾರಿಗಳು ಸಮಾಲೋಚನೆ ನಡೆಸಿದಾಗಿ ನಿಲ್ದಾಣಗಳನ್ನು ಪಿಎಸ್‌ಡಿ ವ್ಯವಸ್ಥೆ ಅಳವಡಿಕೆ, ತಂತ್ರಜ್ಞಾನ ಕುರಿತು ಮಾಹಿತಿ ಕಲೆ ಹಾಕಿದರು. ಭವಿಷ್ಯ ಎಲ್ಲ ಮಾರ್ಗದ ನಿಲ್ದಾಣಗಳಲ್ಲಿ ಪಿಎಸ್‌ಡಿ ಅಳವಡಿಕೆಗೆ ನಿರ್ಧರಿಸಲಾಯಿತು. ಇದ ಯಶಸ್ವಿಯಾಗುತ್ತಿದ್ದಂತೆ ಹಾಲಿ ಮೆಟ್ರೋ ನಿಲ್ದಾಣಗಳಲ್ಲಿ ಸಹ ಪಿಎಸ್‌ಡಿ ಜಾರಿಗೆ ತರಲು ಚಿಂತನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.












Click it and Unblock the Notifications