MBBS: ಕರ್ನಾಟಕದ ಎಲ್ಲ ಎಂಬಿಬಿಎಸ್ ಸೀಟುಗಳ ಭರ್ತಿ ಪ್ರಕ್ರಿಯೆ ಆರಂಭ
ಬೆಂಗಳೂರು, ನವೆಂಬರ್ 14: ಕರ್ನಾಟಕದಲ್ಲಿ ಈ ವರ್ಷ ಎಲ್ಲ ಕೋಟಾಗಳಡಿ ಎಂಬಿಬಿಎಸ್ ಮತ್ತು ಬಿಡಿಎಸ್ ಸೀಟುಗಳು ಲಭ್ಯ ಇವೆ. ಆದರೆ ಈ ವರ್ಷ ಇವೆರಡು ಕೋರ್ಸ್‌ಗಳ ಸೀಟುಗಳ ಸಂಖ್ಯೆಯಲ್ಲಿ ಇಳಿಕೆ ಆಗಲಿವೆ ಎಂದು ವೈದ್ಯಕೀಯ ನಿರ್ದೇಶನಕಾಲಯ ತಿಳಿಸಿದೆ.
ಹೀಗೆಂದು ವರದಿ ಶ್ರುತಿ ಸೂಸನ್ ಉಲ್ಲಾಸ್ ವರದಿ ಮಾಡಿದ್ದಾರೆ. ರಾಜ್ಯದಲ್ಲಿ ಲಭ್ಯವಿರುವ ಎಲ್ಲ ಎಂಬಿಬಿಎಸ್ ಸೀಟುಗಳು ಈ ವರ್ಷ ಕಡಿಮೆ ಆಗಲಿವೆ. ಖಾಲಿ ಇರುವ ಬ್ಯಾಚುಲರ್ ಆಫ್ ಡೆಂಟಲ್ ಸರ್ಜರಿ (ಬಿಡಿಎಸ್) ಸೀಟುಗಳ ಸಂಖ್ಯೆ ಕಳೆದ ವರ್ಷ 691 ಇದ್ದು, ಈ ವರ್ಷ 187ಕ್ಕೆ ಕುಸಿದಿವೆ ಎಂದು ವರದಿ ಮಾಡಿದ್ದಾರೆ ಎಂದು TOI ವರದಿ ಮಾಡಿದೆ.

ಪ್ರಸಕ್ತ ವರ್ಷ ಕರ್ನಾಟಕದಲ್ಲಿ ಒಟ್ಟು 11,595 ಎಂಬಿಬಿಎಸ್ ಮತ್ತು 3,405 ಬಿಡಿಎಸ್ ಸೀಟುಗಳು ಎಲ್ಲಾ ಕೋಟಾಗಳ ಮೂಲಕ ಲಭ್ಯವಿವೆ. ಭಾರತದಲ್ಲಿ ಖಾಲಿ ಇರುವ ಎಲ್ಲ MBBS, BDS ಮತ್ತು BSc ನರ್ಸಿಂಗ್ ಸೀಟುಗಳ ನೇಮಕಾತಿ ನಡೆಸಲು ಸುಪ್ರೀಂ ಕೋರ್ಟ್ 2023ರ ಆರಂಭದಲ್ಲಿ ಅನುಮತಿ ನೀಡಿತ್ತು.
ಖಾಲಿ ಇರುವ ಎಂಬಿಬಿಎಸ್ ಸೀಟು ಹಂಚಿಕೆ
ರಾಜ್ಯದಲ್ಲಿ ಇದೇ ನವೆಂಬರ್ 7 ರಿಂದ ವಿಶೇಷ ಸುತ್ತಿನಡಿ ಹುದ್ದೆಗಳಿಗೆ ಆನ್‌ಲೈನ್ ಕೌನ್ಸೆಲಿಂಗ್ ನಡೆಸಲಾಯಿತು ಮತ್ತು ಖಾಲಿ ಇರುವ ಎಲ್ಲ 152 ಎಂಬಿಬಿಎಸ್ ಸೀಟುಗಳನ್ನು ಹಂಚಿಕೆ ಮಾಡಲಾಗಿದೆ. ಅಖಿಲ ಭಾರತ ವಿಶೇಷ ಸುತ್ತಿನಲ್ಲಿ ಹಂಚಿಕೆಯಾಗಿದ್ದ ಒಂದು ಸ್ಥಾನವನ್ನು ಮರಳಿ ಪಡೆಯಲಾಯಿತು. ಮತ್ತೆ ಆ ಸೀಟನ್ನು ಸೋಮವಾರ ಹಂಚಿಕೆ ಮಾಡಲಾಗಿದೆ. ಒಟ್ಟು 40 ವಿದ್ಯಾರ್ಥಿಗಳು ಸ್ಪರ್ಧಿಸಿದ್ದರು. ಕಳೆದ ವರ್ಷ ಐದು ಎಂಬಿಬಿಎಸ್ ಸೀಟುಗಳು ಖಾಲಿ ಉಳಿದಿದ್ದವರು ಎಂದು ವರದಿ ಆಗಿದೆ.
ಮೂಲಗಳ ಪ್ರಕಾರ, 2022ರಲ್ಲಿ 2,810 ಸೀಟುಗಳ ಪೈಕಿ 691 ಬಿಡಿಎಸ್ ಸೀಟುಗಳನ್ನು ಮ್ಯಾನೇಜ್‌ಮೆಂಟ್‌ಗೆ ಹಿಂತರುಗಿವೆ. ಈ ವರ್ಷ, ಖಾಲಿ ಇರುವ ಸೀಟುಗಳ ಸಂಖ್ಯೆ 187 ಕ್ಕೆ ಕುಸಿದಿದೆ, ವಿಶೇಷ ಸುತ್ತಿನಲ್ಲಿ 33 ಸೀಟುಗಳನ್ನು ಕಡಿಮೆ ಮಾಡಲಾಗಿದೆ. ಇನ್ನೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮ್ಯಾನೇಜ್‌ಮೆಂಟ್ ಕೋಟಾದಡಿ ಸೇರಿ ಎಲ್ಲ ಕೋಟಾಗಳಡಿ ಎಂಬಿಬಿಎಸ್ ಮತ್ತು ಬಿಡಿಎಸ್ ಸೀಟುಗಳ ಹಂಚಿಕೆ ಮಾಡಲಾಗಿದೆ.

ಈ ವರ್ಷ ರಾಷ್ಟ್ರೀಯ ವೈದ್ಯಕೀಯ ಆಯೋಗ (NMC)ವು ಎಲ್ಲ ಸೀಟುಗಳಿಗೆ ಕೆಇಎ ಮೂಲಕ ಪ್ರವೇಶಾತಿ ಪಡೆಯುವ ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತಂದಿದೆ. ಮುಂದಿನ ವರ್ಷ, ವಿದ್ಯಾರ್ಥಿಗಳಿಗೆ ಅವರ ರಾಜ್ಯದ ಶ್ರೇಯಾಂಕಗಳು ಮತ್ತು ನಿರ್ದಿಷ್ಟ ಆಯ್ಕೆ ಸುತ್ತಿನಲ್ಲಿ ಭಾಗವಹಿಸುವ ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಮಾಹಿತಿ ಒದಗಿಸಲಾಗುವುದು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯಾ ಎಸ್ ತಿಳಿಸಿದರು.
ಹೆಚ್ಚು ಸುತ್ತಿನ ಕೌನ್ಸೆಲಿಂಗ್ ನಿಂದ ಸೀಟುಗಳ ಕುಸಿತ
ವೈದ್ಯಕೀಯ ಶಿಕ್ಷಣ ನಿರ್ದೇಶಕಿ ಸುಜಾತಾ ರಾಥೋಡ್ ಅವರು ರಾಜ್ಯದಲ್ಲಿ ಖಾಲಿ ಉಳಿದ ಬಿಡಿಎಸ್ ಸೀಟುಗಳ ಸಂಖ್ಯೆಯಲ್ಲಿನ ಕುಸಿತಕ್ಕೆ ಹೆಚ್ಚುವರಿ ಸುತ್ತಿನ ಕೌನ್ಸೆಲಿಂಗ್ ಕಾರಣವಾಗಿದೆ. ಸುಪ್ರೀಂ ಕೋರ್ಟ್ ನಿರ್ದೇಶನದ ನಂತರ ಹೆಚ್ಚಿನ ಸುತ್ತುಗಳಲ್ಲಿ ಕೌನ್ಸೆಲಿಂಗ್ ನಡೆಯುತ್ತಿವೆ ಎಂದು ವಿವರಿಸಿದರು.
ರಾಜ್ಯದಲ್ಲಿ ಯುಜಿ ಆಯುಷ್ ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ UGNEET-2023 ರಲ್ಲಿ ಆಯ್ಕೆ ಮಾಡಲು ಶೇಕಡಾ 5 ಅಂಕ ಕಡಿತಗೊಳಿಸುವುದಾಗಿ ಭಾರತೀಯ ವೈದ್ಯಕೀಯ ಪದ್ಧತಿಯ ರಾಷ್ಟ್ರೀಯ ಆಯೋಗವು ಘೋಷಿಸಿದೆ. ಕೋರ್ಸ್‌ಗಳ ಪ್ರವೇಶಾತಿ ಬಯಸುವವರು ನೋಂದಾಯಿಸಿಕೊಳ್ಳಬೇಕು ಎಂದು ಆಯೋಗ ತಿಳಿಸಿದೆ.












Click it and Unblock the Notifications