ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಡೆಲ್ಟಾ ರೂಪಾಂತರಿಯ 2 ಪ್ರಭೇದಗಳು ಪತ್ತೆ, ಆತಂಕ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 09: ನಗರದಲ್ಲಿ ಕೊರೊನಾ ವೈರಸ್‌ನ ಡೆಲ್ಟಾ ರೂಪಾಂತರಿಯ ಎರಡು ಪ್ರಬೇಧಗಳು ಪತ್ತೆಯಾಗಿದ್ದು, ಆತಂಕ ಹೆಚ್ಚಾಗಿದೆ.

ಕೊರೊನಾ ವೈರಸ್ 3ನೇ ಅಲೆಯ ಭೀತಿ ನಡುವೆಯೇ ಇತ್ತ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಾರಕ ಡೆಲ್ಟಾ ರೂಪಾಂತರದ ಎರಡು ಉಪ-ವಂಶಾವಳಿ ವೈರಸ್ ಪ್ರಭೇದಗಳು ಪತ್ತೆಯಾಗಿವೆ.

ನಿಪಾ ವೈರಸ್ ಆತಂಕ:ರಸ್ತೆಬದಿ ವ್ಯಾಪಾರಿಗಳ ಮೇಲೆ ಬಿಬಿಎಂಪಿ ಕಣ್ಣುನಿಪಾ ವೈರಸ್ ಆತಂಕ:ರಸ್ತೆಬದಿ ವ್ಯಾಪಾರಿಗಳ ಮೇಲೆ ಬಿಬಿಎಂಪಿ ಕಣ್ಣು

ಸ್ಟ್ರಾಂಡ್ ಲೈಫ್ ಸೈನ್ಸಸ್ ಎನ್ನುವ ಸಂಸ್ಥೆಯ ಈ ವೈರಸ್ ಉಪ ವಂಶಾವಳಿಯ ಸೀಕ್ವೆನ್ಸಿಂಗ್ ಮಾಡಿದ್ದು, ಕೋವಿಡ್ ಟಾಸ್ಕ್ ಫೋರ್ಸ್ ಕರ್ನಾಟಕದಲ್ಲಿ ಜಿನೋಮ್ ಸೀಕ್ವೆನ್ಸಿಂಗ್ ಆರಂಭಿಸಲು ಆದೇಶ ಹೊರಡಿಸಿತ್ತು.

In Bengaluru Two New sub-Lineages Of Delta Variant

ಇದು ರಾಜ್ಯದ ರೂಪಾಂತರಗಳ ಟ್ರೆಂಡ್‌ಗಳನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ. ಈ ಅನುಕ್ರಮವು ಡೆಲ್ಟಾ AY4 ರೂಪಾಂತರದಲ್ಲಿ ಶೇ. 30 ರಷ್ಟು ರೂಪಾಂತರವನ್ನು ಬಹಿರಂಗಪಡಿಸಿತು. ಆದರೆ ಇದು AY12 ನಲ್ಲಿನ ರೂಪಾಂತರ ಕೇವಲ ಶೇ.3ರಷ್ಟಿತ್ತು.

ನಿತ್ಯದ ಸೋಂಕು ಪ್ರಕರಗಳಲ್ಲಿನ ಇಳಿಕೆ ಕುರಿತು ಕೋವಿಡ್-19 ಅಂಕಿಅಂಶಗಳ ಕುರಿತು ರಾಜ್ಯ ವಾರ್ ರೂಂನ ದಿನನಿತ್ಯದ ಬುಲೆಟಿನ್ ಕೊರೊನಾ ಕಡಿಮೆಯಾಗಿದೆ ಎನ್ನುವ ಧೈರ್ಯ ತುಂಬುತ್ತಿದೆ ಆದರೆ ಇನ್ನೊಂದೆ SARSCoV-2 ಡೆಲ್ಟಾ ರೂಪಾಂತರದ ಎರಡು ಉಪ-ವಂಶಾವಳಿಗಳಾದ-AY4 ಮತ್ತು AY12-ಬೆಂಗಳೂರಿನ ಮಾದರಿಗಳಲ್ಲಿ ಪತ್ತೆಯಾಗಿದ್ದು, ಬದಲಾಗುತ್ತಿರುವ ವೈರಸ್ ಬಗ್ಗೆ ತಜ್ಞರಲ್ಲಿ ಆತಂಕ ಮೂಡಿಸಿದೆ.

ಈ ಉಪ ವಂಶಾವಳಿಗಳು ಲಸಿಕೆಗಳ ಮೂಲಕ ಉತ್ಪತ್ತಿಯಾಗುವ ಪ್ರತಿಕಾಯಗಳನ್ನು ತಪ್ಪಿಸುವ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವ ಸಾಧ್ಯತೆ ಎಂದು ಹೇಳಲಾಗಿದೆ.

ಈ ಹಿಂದಿನ ಅಧ್ಯಯನಗಳ ಪ್ರಕಾರ, N439K ರೂಪಾಂತರವು ವೈರಸ್‌ನ ಫಿಟ್ನೆಸ್ ಅನ್ನು ಸುಗಮಗೊಳಿಸುತ್ತದೆ ಮತ್ತು ಪ್ರತಿಕಾಯ ರಕ್ಷಣೆಯನ್ನು ತಪ್ಪಿಸಲು ಅನುವು ಮಾಡಿಕೊಡುತ್ತದೆ. ಅಂದರೆ ಇವುಗಳು ವೈರಸ್‌ನ ನಡವಳಿಕೆಯನ್ನು ಬದಲಾಯಿಸಬಹುದು ಎನ್ನಲಾಗಿದೆ. ಇನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ ವರದಿಯು ಈ ರೂಪಾಂತರಗಳ ಆವರ್ತನದಲ್ಲಿ ಯಾವುದೇ ಹೆಚ್ಚಳವಾಗಿದೆಯೇ ಎಂದು ನೋಡಲು ಪ್ರಕರಣಗಳನ್ನು ಸೂಕ್ಷ್ಮವಾಗಿ ಗಮನಿಸಲು ಕೋರಿದೆ.

ಈ ಬಗ್ಗೆ ಮಾಹಿತಿ ನೀಡಿದ ಅವರು, 'ಸ್ವಲ್ಪಮಟ್ಟಿಗೆ ರೂಪಾಂತರವಾದರೂ, ಇವುಗಳಿಂದ ಉಂಟಾಗುವ ಪರಿಣಾಮಗಳ ಕುರಿತು ಯಾವುದೇ ಅಧ್ಯಯನಗಳು ನಡೆದಿಲ್ಲವಾದ್ದರಿಂದ ನಾವು ಸುಮ್ಮನಿರಲಾಗುವುದಿಲ್ಲ. ಈ ಕುರಿತ ಅಧ್ಯಯನಗಳು ಮುಂದುವರೆಯುತ್ತವೆ. ಇದು ಡೆಲ್ಟಾ ರೂಪಾಂತರಕ್ಕಿಂತ ಕಡಿಮೆ ರೂಪಾಂತರವಾಗಿದೆ ಎಂದು ಸಾಮಾನ್ಯ ವ್ಯಕ್ತಿಗಳು ಭಾವಿಸುತ್ತಾರೆ.

ಆದರೆ ವೈರಾಲಜಿಸ್ಟ್‌ಗಳು ಜಾಗತಿಕವಾಗಿ ಅದು ಸತ್ಯವಲ್ಲ , ಏಕೆಂದರೆ ಅದು ಅದರ ಸ್ವರೂಪವನ್ನು ಸ್ವಲ್ಪವಾದರೂ ಬದಲಾಯಿಸುತ್ತಿದೆ. ವೈರಸ್ ಬೇರೆ ಬೇರೆ ರೂಪಾಂತರಗಳನ್ನು ಪಡೆಯಲು ಸಹಾಯ ಮಾಡಬಹುದು.

ದೇಶದ SARS-CoV-2 ಜೀನೋಮಿಕ್ಸ್ ಕನ್ಸೋರ್ಟಿಯಂ (INSACOG) ನ ಇತ್ತೀಚಿನ ಬುಲೆಟಿನ್ ಪ್ರಕಾರ, AY12 ಉಪವರ್ಗವು ಇಸ್ರೇಲ್‌ನಲ್ಲಿ ಕೋವಿಡ್ -19 ಉಲ್ಬಣಕ್ಕೆ ಕಾರಣವಾಗಿದೆ, ಆ ದೇಶದ ಜನಸಂಖ್ಯೆಯ ಶೇಕಡಾ 60 ರಷ್ಟು ಲಸಿಕೆಯಿಂದ ಕೂಡಿದೆಯಾದರೂ ಅಲ್ಲಿ ಸೋಂಕು ಪ್ರಕರಣಗಳ ಹೆಚ್ಚಳಕ್ಕೆ AY12 ಉಪವರ್ಗ ಪ್ರಮುಖ ಕಾರಣವಾಗಿದೆ ಎಂದು ಹೇಳಿತ್ತು.

ಜಾಗತಿಕ ಅಧಿಕೃತ ದತ್ತಾಂಶಗಳ ಪಟ್ಟಿಯಲ್ಲಿ ಇವುಗಳ ಬಗ್ಗೆ ಇನ್ನೂ ವರದಿಯಾಗಿಲ್ಲ. N439K, N440Y/T/F, L441Y/S/G/A/C/D/V/I, D442I/V/Y/F , S443E/V/Y/W/F ಮತ್ತು K444F/N/V/T/S/V ಈ ಪ್ರಭೇಧಗಳು AY4 ಮತ್ತು AY12 ಡೆಲ್ಟಾ ರೂಪಾಂತರಗಳಲ್ಲಿ ಕಂಡುಬಂದಿರುವ ಉಪ ರೂಪಾಂತರಗಳಾಗಿವೆ.
ಇನ್ನು ಹೊಸ ವಂಶಾವಳಿಗಳನ್ನು ಒಕ್ಕೂಟವು ಸೂಕ್ಷ್ಮವಾಗಿ ಗಮನಿಸುತ್ತಿದೆ. ಕಳವಳಕಾರಿ ಸಂಗತಿಯೆಂದರೆ, ಹಲವು ರೂಪಾಂತರಗಳು ಇನ್ನೂ ಜಾಗತಿಕ ಮಟ್ಟದಲ್ಲಿ ವರದಿಯಾಗಿಯೇ ಇಲ್ಲ.

ಬಿಬಿಎಂಪಿ ವ್ಯಾಪ್ತಿಯಲ್ಲಿ 100% ಜನರಿಗೆ ಕೊರೊನಾ ಲಸಿಕೆಯ ಮೊದಲ ಡೋಸ್ ನೀಡುವ ಯೋಜನೆಯನ್ನು ಬಿಬಿಎಂಪಿ ಹಮ್ಮಿಕೊಂಡಿದೆ.

ಮುಂದಿನ 45 ದಿನಗಳಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಲಸಿಕೆ ಅಭಿಯಾನವನ್ನು ವೇಗಗೊಳಿಸಲು ಹಾಗೂ 100% ಮೊದಲ ಡೋಸ್ ಲಸಿಕೆ ಗುರಿಯನ್ನು ಸಾಧಿಸಲು ಕ್ರಿಯಾಯೋಜನೆ ಹೊರತಂದಿದೆ. ತನ್ನ ವ್ಯಾಪ್ತಿಯ ಶೇ 100ರಷ್ಟು ಮಂದಿಗೆ ಕೊರೊನಾ ಮೊದಲ ಡೋಸ್ ಲಸಿಕೆ ನೀಡಲು ಬಿಬಿಎಂಪಿ ಗುರಿ ಹೊಂದಿರುವುದಾಗಿ ತಿಳಿಸಿದೆ.

ಬೆಂಗಳೂರಲ್ಲಿ ಲಸಿಕೆ ಪಡೆಯುವವರಿಗೆ ಸಿಹಿಸುದ್ದಿಬೆಂಗಳೂರಲ್ಲಿ ಲಸಿಕೆ ಪಡೆಯುವವರಿಗೆ ಸಿಹಿಸುದ್ದಿ ಈ ಗುರಿ ಸಾಧಿಸಲು ಲಸಿಕೆ ನೀಡುವ ಸಮಯವನ್ನು ವಿಸ್ತರಿಸಿದ್ದು, ಸಂಜೆ 4ರಿಂದ ರಾತ್ರಿ 9 ಗಂಟೆವರೆಗೂ ಸಮಯ ವಿಸ್ತರಣೆ ಮಾಡಲಾಗಿದೆ.

ಪ್ರತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಎರಡು ಲಸಿಕಾ ಕೇಂದ್ರಗಳು ದಿನವೂ ಬೆಳಿಗ್ಗೆ 8ರಿಂದ ರಾತ್ರಿ 9ರವರೆಗೆ ಕಾರ್ಯನಿರ್ವಹಿಸಲಿರುವುದಾಗಿ ತಿಳಿಸಿದೆ.

Recommended Video

ನೌಕಾಪಡೆಯ ಅನ್ವೇಶ್ ಕ್ಷಿಪಣಿ ಸಮುದ್ರ ಪ್ರಯೋಗ ಶೀಘ್ರದಲ್ಲೇ ಕಾರ್ಯಾರಂಭ | Oneindia Kannada

ಈಗ ಪ್ರತಿದಿನ ಒಂದು ಲಕ್ಷ ಲಸಿಕೆ ಪೂರೈಕೆ ಲಭ್ಯವಿದೆ. ಮುಂದಿನ 45 ದಿನಗಳಲ್ಲಿ ಉದ್ದೇಶಿತ ಜನಸಂಖ್ಯೆಗೆ ಮೊದಲ ಡೋಸ್ ಲಸಿಕೆ ನೀಡಲು ಗುರಿ ಹೊಂದಲಾಗಿದೆ. ಈಗ ನಮಗೆ ಸಾಕಷ್ಟು ಲಸಿಕೆಗಳ ಲಭ್ಯವಿದೆ.

English summary
While the state war room’s daily bulletin on Covid-19 figures presents a reassuring picture, two sub-lineages of the SARSCoV- 2 Delta variant — the AY4 and AY12 — have been detected in samples from Bengaluru, raising concerns among experts about a changing virus and the possibility of it developing the capability to evade antibodies generated through vaccination.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X