ಬೆಂಗಳೂರು-ವಾರಣಾಸಿ ವಿಮಾನ ನಿಲ್ದಾಣಗಳಲ್ಲಿ ಡಿಜಿ ಯಾತ್ರಾ ಯೋಜನೆ ಜಾರಿ
ಬೆಂಗಳೂರು, ಜುಲೈ, 19: ಫೇಶಿಯಲ್ ಪರಿಶೀಲನೆ ತಂತ್ರಜ್ಞಾನವನ್ನು ಬಳಸಿ ಪ್ರಯಾಣಿಕರಿಗೆ ಚೆಕ್-ಇನ್ ಮಾಡಲು ಬೆಂಗಳೂರು ಮತ್ತು ವಾರಣಾಸಿಯ ವಿಮಾನ ನಿಲ್ದಾಣಗಳಲ್ಲಿ ಡಿಜಿ ಯಾತ್ರಾ ಯೋಜನೆ ಪ್ರಾರಂಭವಾಗಲಿದೆ ಎಂದು ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಸೋಮವಾರ ತಿಳಿಸಿದ್ದಾರೆ.
ಮೊದಲ ಹಂತವು ಆಗಸ್ಟ್ 15 ರಂದು ಪ್ರಾರಂಭವಾಗಲಿದ್ದು, ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ವಿವಿಧ ಚೆಕ್ ಪಾಯಿಂಟ್‌ಗಳ ಮೂಲಕ ಕಾಗದರಹಿತ ಮತ್ತು ಕಾಂಟ್ಯಾಕ್ಟ್‌ಲೆಸ್ ಪ್ರಕ್ರಿಯೆಯ ಮೂಲಕ ಒಳಗಡೆ ಹೋಗಬಹುದು. ಬೋರ್ಡಿಂಗ್ ಪಾಸ್‌ಗೆ ಲಿಂಕ್ ಮಾಡಲಾದ ಗುರುತನ್ನು ಸ್ಥಾಪಿಸಲು ಮುಖದ ರೀತಿಯಯಲ್ಲಿ ಗುರುತನ್ನು ಬಳಸಲಾಗುತ್ತದೆ.
ಈ ಯೋಜನೆಯ ಕುರಿತು ಸೋಮವಾರ ಸಲಹಾ ಸಮಿತಿಯನ್ನು ಮಾಡಲಾಗಿದ್ದು, ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮಾಹಿತಿ ನೀಡಿದ್ದಾರೆ. ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಪರಿಶೀಲನೆ ನಡೆಸುವ ಡಿಜಿಟಲೀಕರಣದ ಮೊದಲ ಯೋಜನೆ ಇದಾಗಿದೆ. ಬೆಂಗಳೂರು ಮತ್ತು ವಾರಣಾಸಿ ವಿಮಾನ ನಿಲ್ದಾಣಗಳಲ್ಲಿ ಮೊದಲನೇ ಹಂತವನ್ನು ಪ್ರಾರಂಭಿಸಲಾಗುವುದು ಎಂದು ಹೇಳಿದರು. ಈ ಯೋಜನೆಯಲ್ಲಿ ಸಮಸ್ಯೆಗಳು ಆಗದಂತೆ ಕಾಳಜಿ ವಹಿಸಲಾಗಿದೆ ಎಂದು ತಿಳಿಸಿದ್ದಾರೆ.

ನಾಗರಿಕ ವಿಮಾನಯಾನ ಸಚಿವಾಲಯವು ಡಿಜಿ ಯಾತ್ರಾ ಯೋಜನೆಯಲ್ಲಿ ಮೊಬೈಲ್ ವ್ಯಾಲೆಟ್ ಆಧಾರಿತ ಗುರುತಿನ ಸೌಲಭ್ಯವನ್ನು ಕಲ್ಪಿಸಿದೆ. ಈ ಯೋಜನೆ ಫೌಂಡೇಶನ್ ಪ್ಯಾನ್ ಇಂಡಿಯಾದ ಘಟಕವಾಗಿದ್ದು, ಗೌಪ್ಯತೆ ಮತ್ತು ಡೇಟಾ ರಕ್ಷಣೆಯನ್ನು ಮಾಡುತ್ತದೆ.
ಸ್ಥಳೀಯ ವಿಮಾನ ನಿಲ್ದಾಣ ವ್ಯವಸ್ಥೆಗಳಿಗೆ ಅನುಗುಣವಾಗಿ ಮಾನದಂಡಗಳನ್ನು ಹೊಂದಿದ್ದು, ನಿಯಮಿತ ಲೆಕ್ಕಪರಿಶೋಧನೆಗಳನ್ನು ನಡೆಸುತ್ತದೆ. ಮುಂದಿನ ವರ್ಷ ಮಾರ್ಚ್ ತಿಂಗಳ ವೇಳೆಗೆ ಪುಣೆ, ವಿಜಯವಾಡ, ಕೋಲ್ಕತ್ತಾ, ದೆಹಲಿ ಮತ್ತು ಹೈದರಾಬಾದ್‌ನ ವಿಮಾನ ನಿಲ್ದಾಣಗಳಲ್ಲಿ ಈ ಯೋಜನೆಯನ್ನು ಪ್ರಾರಂಭಿಸಲಾಗುವುದು ಎಂದು ಸಚಿವಾಲಯ ತಿಳಿಸಿದೆ. ಈ ವ್ಯವಸ್ಥೆ ಮೊದಲನೇ ಬಾರಿಗೆ ಜಾರಿಗೆ ಬರಲಿದ್ದು, ಪ್ರಯಾಣಿಕರಿಗೂ ಹಾಗೂ ಪರಿಶೀಲನೆ ನಡೆಸುವವರಿಗೂ ಸಹಾಯವಾಗಲಿದೆ.

ವಿಮಾನ ನಿಲ್ದಾಣಗಳಲ್ಲಿ ಮೊಟ್ಟ ಮೊದಲ ಬಾರಿಗೆ ಈ ವ್ಯವಸ್ಥೆಯನ್ನು ತರಲಾಗಿದ್ದು, ಬೆಂಗಳೂರಿನಲ್ಲಿ ಆಗಸ್ಟ್ 15ರಂದು ಜಾರಿಗೆ ಬರಲಿದೆ. ಇನ್ನಿತರ ವಿಮಾನ ನಿಲ್ದಾಣಗಳಲ್ಲೂ ಜಾರಿಗೆ ತರುವುದಾಗಿ ವಿಮಾನಯಾನ ಸಚಿವಾಲಯ ಮಾಹಿತಿ ನೀಡಿದೆ. ದತ್ತಾಂಶಗಳು ಲೀಕ್ ಆಗದಂತೆ ತಡೆಗಟ್ಟುವ ಕಾರ್ಯ ಇದರದ್ದಾಗಿದ್ದು, ಪ್ರಯಾಣಿಕರಿಗೂ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಸಾಮಾನ್ಯವಾಗಿ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ಡೇಟಾಗಳು ಲೀಕ್ ಆಗಿರುವ ಪ್ರಕರಣಗಳು ದಾಖಲಾಗುತ್ತಿರುವುದನ್ನು ನೋಡಿದ್ದೇವೆ. ಇದಕ್ಕೆಲ್ಲ ನಾಂದಿ ಆಡಲು ವಿಮಾನಯಾನ ಸಚಿವಾಲಯ ಈ ಮಹತ್ವದ ಯೋಜನೆ ಜಾರಿ ಮಾಡಲು ಮುಂದಾಗಿದೆ..












Click it and Unblock the Notifications