Karnataka Weather: ಹವಾಮಾನ ಇಲಾಖೆಯ ಮೈಲಿಗಲ್ಲು ಹೆಜ್ಜೆಗೆ ತೊಡಕು
ಬೆಂಗಳೂರು, ಮೇ 14: ಬೆಂಗಳೂರು ಹಾಗೂ ಕರ್ನಾಟಕದ ಹವಾಮಾನ ಮುನ್ಸೂಚನೆಯ ಚಿತ್ರಣ ಕೊಡುಗೆ ಭಾರತೀಯ ಹವಾಮಾನ ಇಲಾಖೆ ಅಧಿಕಾರಿಗಳು ಈ ವಲಯದಲ್ಲಿ ಮತ್ತೊಂದು ಮೈಲಿಗಲ್ಲು ಸಾಧನೆಗೆ ಮುಂದಾಗಿದೆ. ಆದರೆ ಇದಕ್ಕೆ ಸಣ್ಣ ತೊಡಕು ಉಂಟಾಗಿದೆ.
ಬೆಂಗಳೂರು ಸೇರಿದಂತೆ ಕರ್ನಾಟಕದ ಹವಾಮಾನ ವರದಿಯನ್ನು ತಿಳಿಸಲು ರಾಜ್ಯ ಮತ್ತು ಭಾರತೀಯ ಹವಾಮಾನ ಸಂಸ್ಥೆಗಳು (IMD) ಇವೆ. ಮುಂದಿನ ಮೂರು ದಿನದಿಂದ ಹಿಡಿದು ಐದು ದಿನಗಳ ಹವಾಮಾನ ಮುನ್ಸೂಚನೆ ಖಚಿತತೆಯನ್ನು ಹಾಲಿ ಸಂಸ್ಥೆಗಳು ನೀಡುತ್ತಿವೆ.

ಇದೀಗ ಇನ್ನು ಒಂದು ಹೆಜ್ಜೆ ಮುಂದೆ ಹೋಗಿರುವ ಐಎಂಡಿ ಹವಾಮಾನ ತಜ್ಞರು, ಹವಾಮಾನ ವೈಪರಿತ್ಯ, ಮಳೆ, ತಾಪಮಾನ ಇನ್ನಿತರ ವಿಷಯಗಳ ಮತ್ತಷ್ಟು ನಿಖರ ಮಾಹಿತಿಗೆ ಬೆಂಗಳೂರಿನಲ್ಲಿ 'ಡಾಪ್ಲರ್ ವೆದರ್ ರಾಡಾರ್ (DWR)' ಅಳವಡಿಕೆಗೆ ಮುಂದಾಗಿದೆ. ಆದರೆ ಈ ಸಾಧನ ಅಳವಡಿಕೆಗೆ ಹಿನ್ನಡೆ ಆಗಿದೆ ಎಂದು ವರದಿ ಆಗಿದೆ.
ಸರ್ಕಾರಿ-ಖಾಸಗಿ ಕಟ್ಟಡದವರ ಜತೆ ಮಾತುಕತೆ
'ಡಾಪ್ಲರ್ ವೆದರ್ ರಾಡಾರ್ (DWR)' ಅನ್ನು ಅತೀ ಎತ್ತರದ ಕಟ್ಟಡದ ಮೇಲೆ ಅಳವಡಿಕೆಗೆ ಐಎಂಡಿ ಯೋಜಿಸಿದೆ. ಈ ಬಗ್ಗೆ ಸರ್ಕಾರಿ ಮತ್ತು ಖಾಸಗಿ ಕಟ್ಟಡದ ಮೇಲೆ ಅಳಡಿಕೆಗೆ ಮುಂದಾಗಿದ್ದು, ಮಾಲೀಕರ ಜತೆ ಮಾತುಕತೆ ನಡೆಸಿದೆ. ಅದರೆ ನಗರದಲ್ಲಿ ಎಲ್ಲೂ ಅದಕ್ಕೆ ಸೂಕ್ತ ಜಾಗ ಸಿಕ್ಕಿಲ್ಲ. ಹೀಗಾಗಿ ಮಹತ್ವದ ಯೋಜನೆಗೆ ತಾತ್ಕಲಿಕವಾಗಿ ಹಿನ್ನಡೆ ಆಗಿದೆ.
ಕೆಲವೇ ದಿನಗಳಲ್ಲಿ ಮುಂಗಾರು ಮಳೆ ಆರಂಭವಾಗಲಿದೆ. ಮಳೆಗಾಲ ಹಿನ್ನೆಲೆಯಲ್ಲಿ ಈ ರಾಡಾರ್ ಅಳಡವಿಕೆ ಭಾರೀ ಮಹತ್ವ ಪಡೆದಿದೆ. ಈಗಾಗಲೇ ಇದೇ ಐಎಂಡಿಯು ಗೋವಾ ಹಾಗೂ ತಮಿಳುನಾಡಿನಲ್ಲಿ ಯಶಸ್ವಿಯಾಗಿ ಅಳವಡಿಕೆ ಮಾಡಿದೆ.

ಎರಡು ಸ್ಥಳ ಪರಿಶೀಲನೆ
ಅದೇ ರೀತಿ ಬೆಂಗಳೂರಿನಲ್ಲಿ ಅಳವಡಿಕೆಗೆ ಐಎಂಡಿ ಮುಂದಾಗಿದೆ. ಈಗಾಗಲೇ ಹೆಸರಘಟ್ಟ, ಬೆಂಗಳೂರು ಕೃಷಿ ವಿದ್ಯಾಲಯ (ಜಿಕೆವಿಕೆ) ಭಾಗದಲ್ಲಿ ಪರಿಶೀಲಿಸಿರುವ ಅಧಿಕಾರಿಗಳು ಅಲ್ಲಿನ ಸ್ಥಳ ಈ ರಾಡಾರ್ ಅಳವಡಿಕೆಗೆ ಯೋಗ್ಯವಾಗಿಲ್ಲ ಎಂದು ಹೇಳಿದೆ. ಅಲ್ಲದೇ ಖಾಸಗಿ ಮತ್ತು ಸರ್ಕಾರ ಬೃಹತ್ ಕಟ್ಟಡಗಳ ಮಾಲೀಕರ ಜೊತೆಗೆ ಐಎಂಡಿ ಅಧಿಕಾರಿಗಳು ಮಾತುಕತೆ ನಡೆಸಿದ್ದಾರೆ.
ಈ ರಾಡಾರ್ ಅನ್ನು ಸುಮಾರು 25 ಅಂತಸ್ತಿನ ಕಟ್ಟಡಗಳ ಮೇಲೆ ಅಳವಡಿಸಬೇಕಿದೆ. ರಾಡಾರ್ ಇರುವ ಕಟ್ಟಡದ ಸುತ್ತಮುತ್ತ ಸುಮಾರು 40 ಮೀಟರ್ ವ್ಯಾಪ್ತಿಯಲ್ಲಿ ರಾಡಾರ್‌ಗೆ ಬರುವ ಎಲೆಕ್ಟ್ರಾನಿಕ್ ಸಿಗ್ನಲ್ ಬರುತ್ತವೆ. ಹೀಗಾಗಿ ಈ ವ್ಯಾಪ್ತಿಯಲ್ಲಿ ಯಾವುದೇ ಅಡೆತಡೆಗಳು ಇರಬಾರದು. ಅಂತಹ ಕಟ್ಟಡಗಳನ್ನು ಐಎಂಡಿ ಅಧಿಕಾರಿಗಳು ಹುಡುಕುತ್ತಿದ್ದಾರೆ. ಸದ್ಯಕ್ಕೆ ಸಿಕ್ಕಿಲ್ಲ ಎಂದು ತಿಳಿದು ಬಂದಿದೆ.
ರಾಡಾರ್ ನಿಂದ ಗಂಟೆ ಗಂಟೆಯ ಖಚಿತ ಮಾಹಿತಿ
ಐಎಂಡಿಯು ಈ ರಾಡಾರ್ ಅಳವಡಿಕೆ ಮಾಡಿದ ನಂತರ ಮೋಡಗಳು, ಸಿಡಿಲು, ಗಾಳಿಯ ಮಾದರಿ ಕುರಿತು ಸಂಪೂರ್ಣ ಅಧ್ಯಯನ ನಡೆಸಲಿದೆ. ಪ್ರತಿ ಗಂಟೆಯ ವ್ಯತ್ಯಾಸದಲ್ಲಿ ನಡೆಯುವ ಹವಾಮಾನ ವೈಪರಿತ್ಯಗಳ ಸ್ಪಷ್ಟತೆ ಬಗ್ಗೆ ಖಚತಿ ಮಾಹಿತಿ ನೀಡಲು, ಅಧ್ಯಯನ ಮಾಡಲು ಅನುಕೂಲವಾಗುತ್ತದೆ.
ಪ್ರಸ್ತುತದಲ್ಲಿ ಉತ್ತರ ಒಳನಾಡಿನಲ್ಲಿ ಭೂಮಿ ಮೇಲ್ಮೈನಲ್ಲಿ ಸ್ಟ್ರಫ್ ಏರ್ಪಟ್ಟಿದೆ. ಇದನ್ನು ಹವಾಮಾನ ಇಲಾಖೆ ಸುಮಾರು ನಾಲ್ಕು ದಿನಗಳ ಹಿಂದೆಯೇ ಮುನ್ಸೂಚನೆ ನೀಡಿದೆ. ಇದರಿಂದಲೇ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಭಾರೀ ಮಳೆ ಬರುತ್ತಿದೆ. ಉತ್ತರ ಕರ್ನಾಟಕ ಹಾಗೂ ಇನ್ನಿತರ ಭಾಗದಲ್ಲಿ ಸಾಧಾರಣ ಮಳೆ ಆಗುತ್ತಿದೆ.












Click it and Unblock the Notifications