ಬೆಂಗಳೂರಲ್ಲಿ ಮತ್ತೆ ರಾರಾಜಿಸುತ್ತಿದೆ ಫ್ಲೆಕ್ಸ್,ಬ್ಯಾನರ್‌ಗಳು
ಬೆಂಗಳೂರು, ಮೇ 31: ಹೈಕೋರ್ಟ್ ಚಾಟಿ ಬೀಸಿದ ನಂತರ ಅನಧಿಕೃತ ಫ್ಲೆಕ್ಸ್ ಹಾಗೂ ಬಂಟಿಂಗ್ಸ್‌ಗಳಿಗೆ ಬಿಬಿಎಂಪಿ ಬ್ರೇಕ್ ಹಾಕಿತ್ತು. ಆದರೆ ಚುನಾವಣೆ ಫಲಿತಾಂಶ ಬಂದ ಬಳಿಕ ಮತ್ತದೇ ಪರಿಪಾಠ ಆರಂಭವಾಗಿದೆ.
ಸಂಪತ್ ರಾಜ್ ಅವರು ಮೇಯರ್ ಆಗಿದ್ದ ಅವಧಿಯಲ್ಲಿ ಹೈಕೋರ್ಟ್ ನಿರ್ದೇಶನದ ಮೇರೆಗೆ ಅವರು ಖುದ್ದಾಗಿ ನಗರ ಸಂಚರಿಸಿ ಅನಧಿಕೃತ ಬ್ಯಾನರ್, ಫ್ಲೆಕ್ಸ್‌ಗಳನ್ನು ತೆರವುಗೊಳಿಸಿದ್ದರು. ಈಗಿನ ಮೇಯರ್ ಗಂಗಾಂಬಿಕೆಯವರು ಈ ಕುರಿತು ಗಂಭೀರವಾಗಿ ಆಲೋಚಿಸಬೇಕಿದೆ.
ಆಗಸ್ಟ್ನಲ್ಲಿಯೇ ಅನಧಿಕೃತ ಫ್ಲೆಕ್ಸ್, ಬ್ಯಾನರ್, ಹೋರ್ಡಿಂಗ್ಸ್‌ಗಳನ್ನು ತೆರವುಗೊಳಿಸಲಾಗಿತ್ತು. ಆದರೆ ಮತ್ತಿಕೆರೆ, ಮಾಗಡಿ ರಸ್ತೆ, ಯಶವಂತಪುರ,ವಿಜಯನಗರದಲ್ಲಿ ಮತ್ತೆ ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ. ಪಾದಚಾರಿ ಮಾರ್ಗ ಅತಿಕ್ರಮಣ, ಅಪಘಾತ ಪ್ರಮಾಣ ಹೆಚ್ಚಾಗಿದ್ದ ಕಾರಣ ಈ ನಿರ್ಧಾರ ತೆಗೆದುಕೊಳ್ಳಲಾಗಿತ್ತು.

ವಿಜಯನಗರದಲ್ಲಿ 123, ಹೀರೋಹಳ್ಳಿಯಲ್ಲಿ 72, ಕೊಟ್ಟಿಗೆಪಾಳಯದಲ್ಲಿ 73, ಜ್ಞಾನಭಾರತ ಬಳಿ 129 ಅನಧಿಕೃತ ಹೋರ್ಡಿಂಗ್‌ಗಳಿವೆ ಎಂದು ಸಾಮಾಜಿಕ ಕಾರ್ಯಕರ್ತರೊಬ್ಬರು ಮಾಹಿತಿ ನೀಡಿದ್ದಾರೆ.











Click it and Unblock the Notifications