ಈ ಶನಿವಾರ 'ಇಲ್ಲ ಅಂದ್ರೆ ಇದೆ!' ನಾಟಕ ಪ್ರದರ್ಶನ

ಸ್ತ್ರೀವಾದವೆಂದರೆ ಪುರುಷದ್ವೇಷ ಎಂಬ ತಪ್ಪು ಕಲ್ಪನೆಯಲ್ಲಿರುವ ಇಂದಿನ ಸಮಾಜಕ್ಕೆ, ಹಾಸ್ಯದ ಮೂಲಕ ಸ್ತ್ರೀಯರ ಮನದಾಳದ ಮಾತುಗಳನ್ನು ಮನಮುಟ್ಟಿಸುವ ನಾಟಕವಿದು. ಶೈಲೇಶ್ ಕುಮಾರ್ ಎಂ.ಎಂ ಅವರು ರಚಿಸಿ-ನಿರ್ದೇಶಿಸಿರುವ ನಾಟಕವು ಈಗಾಗಲೇ 54 ಪ್ರದರ್ಶನಗಳನ್ನು ಕಂಡಿದ್ದು, ಹಲವಾರು ರಾಷ್ಟ್ರೀಯ ನಾಟಕೋತ್ಸವಗಳಲ್ಲಿ, ಹೊರರಾಜ್ಯಗಳಲ್ಲಿ ಪ್ರದರ್ಶನಗೊಂಡಿದೆ. ಈ ನಾಟಕ ಈ ಶನಿವಾರ ಬೆಂಗಳೂರಿನ ಎನ್.ಆರ್.ಕಾಲೋನಿಯ ಪ್ರಭಾತ್ ಕಲಾಪೂರ್ಣಿಮದಲ್ಲಿ ಪ್ರದರ್ಶನ ಆಗುತ್ತಿದೆ.

ನಾಟಕ: ಇಲ್ಲ..ಅಂದ್ರೆ..ಇದೆ!
ರಚನೆ ಮತ್ತು ನಿರ್ದೇಶನ: ಶೈಲೇಶ್ ಕುಮಾರ್ ಎಂ.ಎಂ
ತಂಡ : ಸೈಡ್‍ವಿಂಗ್ (ರಿ)
ಸ್ಥಳ: ಪ್ರಭಾತ್ ಕಲಾಪೂರ್ಣಿಮ. ಎನ್.ಆರ್.ಕಾಲೋನಿ
ದಿನಾಂಕ: 2ನೇ ಫೆಬ್ರವರಿ 2019
ಸಮಯ: ಸಂಜೆ 5ಕ್ಕೆ ಮತ್ತು 7:30ಕ್ಕೆ

 illa andre ide kannada play will be held tomorrow february 2nd

'ಇಲ್ಲ ಅಂದ್ರೆ ಇದೆ!' ನಾಟಕದ ಮತ್ತೊಂದು ವಿಶೇಷ ಅಂದರೆ, ಇದೊಂದು ದ್ವಿವ್ಯಕ್ತಿ ಪ್ರದರ್ಶನದ ನಾಟಕ. ಇಡೀ ನಾಟಕದಲ್ಲಿ ಇಬ್ಬರೇ ಕಲಾವಿದರು ಇರಲಿದ್ದು, ಲತಾ ಸರ್ವೇಶ್ ಹಾಗೂ ನಿತ್ಯಾ ಜೋಶಿ ನಾಟಕದಲ್ಲಿ ಅಭಿನಯಿಸಿದ್ದಾರೆ.

ನಿರ್ದೇಶಕ: ಶೈಲೇಶ್ ಕುಮಾರ್ ಎಂ.ಎಂ.

ಉದ್ಯಮಿಯಾಗಿರುವ ಶೈಲೇಶ್ ಕುಮಾರ್ ಅವರು ರಂಗಭೂಮಿಯ ಸೆಳೆತಕ್ಕೆ ಒಳಗಾಗಿ, ರಂಗಭೂಮಿಯಲ್ಲಿ ಒಂದು ವರ್ಷದ ಡಿಪ್ಲೋಮಾ ಮುಗಿಸಿ ನಂತರ 'ಸೊಂಡಲ್ ಮ್ಯಾನ್', 'ಸಲಿಲ', 'ಕಾಡ್ನಲ್ಲೊಂದೂರಿತ್ತಂತೆ' ಹೀಗೆ ಹಲವಾರು ಮಕ್ಕಳ ನಾಟಕಗಳನ್ನು ರಚಿಸಿ ನಿರ್ದೇಶಿಸಿದ್ದಾರೆ. ಇವರು ರಚಿಸಿರುವ ದ್ವಿವ್ಯಕ್ತಿ ಪ್ರದರ್ಶನ 'ಇಲ್ಲ.. ಅಂದ್ರೆ.. ಇದೆ !' ನಾಟಕವು ಯಶಸ್ವಿ 54 ಪ್ರದರ್ಶನಗಳನ್ನು ಹವಾರು ನಾಟಕೋತ್ಸವಗಳಲ್ಲಿ ಕಂಡು, ರಂಗಭೂಮಿಯಲ್ಲಿ ಒಳ್ಳೆಯ ಪ್ರತಿಕ್ರಿಯೆ ಗಳಿಸಿದೆ.

ತಂಡ: ಸೈಡ್‍ವಿಂಗ್ (ರಿ)
ನಿರಂತರವಾಗಿ ರಂಗ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ, ಸಮಾನಮನಸ್ಕರು ಸೇರಿ ಆರಂಭಿಸಿರುವ ರಂಗತಂಡ 'ಸೈಡ್‍ವಿಂಗ್'. ಇದು ಹೊಸ ತಂಡವಾಗಿದ್ದುಈಗಾಗಲೇ ಐದು ಬೀದಿನಾಟಕಗಳನ್ನು ಹಾಗೂ 'ಇಲ್ಯಾಡ್ಗಣ್ಣ', 'ಎ ಮಿಡ್ ಸಮ್ಮರ್ ಡೇ ಡ್ರೀಮ್ಸ್', 'ಸಡನ್ನಾಗ್ ಸತ್ತೋದ್ರೆ?', 'ಇಲ್ಲ..ಅಂದ್ರೆ.. ಇದೆ !', 'ಸರ್ಗ' ಈ ಸಿದ್ಧ ನಾಟಕಗಳು ಉತ್ತಮ ಪ್ರತಿಕ್ರಿಯೆ ಪಡೆದು ರಾಜ್ಯದ ವಿವಿಧೆಡೆಗಳಲ್ಲಿ ಪ್ರದರ್ಶನಗಳನ್ನು ಕಾಣುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+