ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಮತಾ ಬ್ಯಾನರ್ಜಿ ಸಿಟ್ಟಾಗಲು ರಾಜ್ಯಪಾಲರೇ ಕಾರಣ!

By Manjunatha
|
Google Oneindia Kannada News

ಬೆಂಗಳೂರು, ಮೇ 24: ನಿನ್ನೆ ಕುಮಾರಸ್ವಾಮಿ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಬಂದಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಹಳ ಸಿಟ್ಟಾಗಿದ್ದರು, ದೇವೇಗೌಡ, ಕುಮಾರಸ್ವಾಮಿ ಅವರ ಬಳಿಯೂ ತಮ್ಮ ಅಸಮಾಧಾನ ತೋಡಿಕೊಂಡಿದ್ದರು ಅದಕ್ಕೆ ಕಾರಣ ಈಗ ತಿಳುದುಬಂದಿದೆ.

ಟ್ರಾಫಿಕ್ ಸಮಸ್ಯೆಯಿಂದಾಗಿ ಅವರು ವಿಧಾನಸೌಧಕ್ಕೆ ನಡೆದುಕೊಂಡು ಬರಬೇಕಾದದ್ದು ಅವರ ಸಿಟ್ಟಿಗೆ ಕಾರಣ. ಆದರೆ ಹಾಗೆ ಟ್ರಾಫಿಕ್ ಜಾಮ್ ಉಂಟಾಗಿ ಅವರ ವಾಹನ ಸಿಕ್ಕಿಕೊಳ್ಳಲು ಕಾರಣವಾಗಿದ್ದು ರಾಜ್ಯಪಾಲ ವಜುಭಾಯಿ ವಾಲಾ ಅಂತೆ.

ಭದ್ರತಾ ಲೋಪ: ಮಮತಾ ಬ್ಯಾನರ್ಜಿ ಆಕ್ರೋಶಕ್ಕೆ ಎಚ್ಡಿಕೆ ಕಸಿವಿಸಿ! ಭದ್ರತಾ ಲೋಪ: ಮಮತಾ ಬ್ಯಾನರ್ಜಿ ಆಕ್ರೋಶಕ್ಕೆ ಎಚ್ಡಿಕೆ ಕಸಿವಿಸಿ!

ಟ್ರಾಫಿಕ್ ಸಮಸ್ಯೆಯಿಂದಾಗಿ ಮಮತಾಬ್ಯಾನರ್ಜಿ ಅವರ ಕಾರು ವಿಧಾನಸೌಧದಕ್ಕಿಂತಲೂ ಕೆಲವು ಮೀಟರ್‌ಗಳ ಹಿಂದೆಯೇ ಸಿಕ್ಕಿಹಾಕಿಕೊಂಡು ಬಿಟ್ಟಿತು ಹಾಗಾಗಿ ಅವರು ನಡೆದುಕೊಂಡೇ ವಿಧಾನಸೌಧಕ್ಕೆ ಬಂದರು. ಇದು ಅವರ ಸಿಟ್ಟಿಗೆ ಕಾರಣವಾಗಿತ್ತು.

IG Neelamani Raju gives clarification to CM about Mamata Banerjees displeasure

ಪ್ರಮಾಣ ವಚನ ಕಾರ್ಯಕ್ರಮದ ವೇದಿಕೆಗೆ ಬಂದ ಮಮತಾ ಬ್ಯಾನರ್ಜಿ ಅವರು ಐಜಿ ನೀಲಮಣಿ ರಾಜು ಅವರನ್ನು ತರಾಟೆಗೆ ತೆಗೆದುಕೊಂಡರು, ದೇವೇಗೌಡ, ಕುಮಾರಸ್ವಾಮಿ ಅವರ ಬಳಿಯೂ ಸಿಟ್ಟು ಹೊರಹಾಕಿದರು. ಅದನ್ನು ಗಂಭೀರವಾಗಿ ಪರಿಗಣಿಸಿದ ಕುಮಾರಸ್ವಾಮಿ ನೀಲಮಣಿ ರಾಜು ಅವರಿಗೆ ಸ್ಪಷ್ಟನೆ ನೀಡುವಂತೆ ಸೂಚಿಸಿದ್ದರು.

ಆಕಾಶ ಭೂಮಿ ಒಂದು ಮಾಡಿದ ಮಮತಾನೇ ನೀಲಮಣಿ ಕ್ಷಮೆ ಕೇಳಲಿ!ಆಕಾಶ ಭೂಮಿ ಒಂದು ಮಾಡಿದ ಮಮತಾನೇ ನೀಲಮಣಿ ಕ್ಷಮೆ ಕೇಳಲಿ!

ಇಂದು ಬೆಳಿಗ್ಗೆ ಮುಖ್ಯಮಂತ್ರಿಗಳ ನಿವಾಸಕ್ಕೆ ಭೇಟಿ ನೀಡಿದ ನೀಲಮಣಿ ರಾಜು ಅವರು, ಮಮತಾ ಬ್ಯಾನರ್ಜಿ ಅವರಿಗೆ ತೊಂದರೆ ಆಗಲು ರಾಜ್ಯಪಾಲರು ಕಾರಣ ಎಂದು ಹೇಳಿದ್ದಾರೆ.

"ನೀಲಮಣಿ ರಾಜು ನಮ್ಮ ಹೆಮ್ಮೆ! ದೀದಿಯದ್ದು ದುರಹಂಕಾರ!"

ಮಮತಾ ಬ್ಯಾನರ್ಜಿ ಅವರು ಆಗಮಿಸುವ ವೇಳೆಗೆ ಸರಿಯಾಗಿ ರಾಜ್ಯಪಾಲರೂ ವಿಧಾನಸೌಧಕ್ಕೆ ಆಗಮಿಸಿದ ಕಾರಣ ರಾಜ್ಯಪಾಲರ ವಾಹನಕ್ಕೆ ಟ್ರಾಫಿಕ್ ಫ್ರೀ ಮಾಡುವ ಭರದಲ್ಲಿ ಮಮತಾ ಬ್ಯಾನರ್ಜಿ ಅವರ ವಾಹನ ಟ್ರಾಫಿಕ್‌ನಲ್ಲಿ ಸಿಕ್ಕಿಕೊಂಡಿದೆ ಎಂದು ನೀಲಮಣಿ ರಾಜು ಅವರು ಸ್ಪಷ್ಟನೆ ನೀಡಿದ್ದಾರೆ.

ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಜೆಡಿಎಸ್ ರಾಷ್ಟ್ರಾಧ್ಯಕ್ಷ ದೇವೇಗೌಡ ಅವರು ನಿನ್ನೆ ನಡೆದ ಘಟನೆಯನ್ನು ಗಂಭೀರ ಭದ್ರತಾ ಲೋಪ ಎಂದೇ ಪರಿಗಣಿಸಿದ್ದು ನೀಲಮಣಿ ರಾಜು ವಿರುದ್ಧ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.

English summary
IG Nellamani Raju gives clarification about yesterday's West Bengal CM Mamata Banerjee's issue. Yesterday Mamata Banerjee suffer from traffic problem near the Vidhan Soudha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X