ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಬ್ಬನ್‌ಪಾರ್ಕ್‌ನಲ್ಲಿ ಫೋಟೊಶೂಟ್ ಮಾಡಿದ್ರೆ ದಂಡ, ಕ್ಯಾಮರಾ ವಶಕ್ಕೆ

|
Google Oneindia Kannada News

ಬೆಂಗಳೂರು, ನವೆಂಬರ್ 12: ಕಬ್ಬನ್‌ ಪಾರ್ಕಿನಲ್ಲಿ ಫೋಟೊಶೂಟ್ ಮಾಡಬಾರದು ಎಂದು ತೋಟಗಾರಿಕಾ ಇಲಾಖೆ ಸೂಚನೆ ನೀಡಿದ್ದರೂ ಕೂಡ ಫೋಟೊಶೂಟ್ ನಡೆಯುತ್ತಿರುವುದರಿಂದ ಅದಕ್ಕೆ ಕಡಿವಾಣ ಹಾಕಲು ನಿರ್ಧರಿಸಲಾಗಿದೆ.

ಹಾಗಾಗಿ ಒಂದೊಮ್ಮೆ ಫೋಟೊ ಶೂಟ್ ಮಾಡಿದರೆ ಅವರ ಬಳಿ ಇರುವ ಕ್ಯಾಮರಾವನ್ನು ವಶಪಡಿಸಿಕೊಳ್ಳಲಾಗುತ್ತದೆ. ಈಗಾಗಲೇ ಕಬ್ಬನ್ ಪಾರ್ಕ್ ಮತ್ತು ಲಾಲ್ ಬಾಗ್ ನಲ್ಲಿ ಫೋಟೋ ಶೂಟ್ ನಿಷೇಧಗೊಂಡಿದೆ.

ಕಬ್ಬನ್ ಪಾರ್ಕ್ ಉಳಿವಿಗಾಗಿ ಹೋರಾಟಕ್ಕೆ ಆಮ್ ಆದ್ಮಿ ಪಕ್ಷದ ಸಂಪೂರ್ಣ ಬೆಂಬಲಕಬ್ಬನ್ ಪಾರ್ಕ್ ಉಳಿವಿಗಾಗಿ ಹೋರಾಟಕ್ಕೆ ಆಮ್ ಆದ್ಮಿ ಪಕ್ಷದ ಸಂಪೂರ್ಣ ಬೆಂಬಲ

ಆದರೂ ಈ ಆದೇಶಕ್ಕೆ ಕ್ಯಾರೇ ಅನ್ನದ ಜನರು, ಪ್ರಿ ವೆಡ್ಡಿಂಗ್ ಫೋಟೋ ಶೂಟ್ ನಡೆಸುವಾಗ ಎಲ್ಲೆಂದರಲ್ಲಿ ಬಟ್ಟೆ ಬದಲಾಯಿಸುತ್ತಾರೆ. ಇದರಿಂದ ವಾಯುವಿಹಾರಕ್ಕೆ ಬಂದವರಿಗೆ ಇರುಸುಮುರುಸು ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

If You Using Cubbon Park For PhotoShoot You May Lose Camera

ಕಳೆದ ಒಂದು ವರ್ಷದ ಹಿಂದೆ ಕಬ್ಬನ್‌ಪಾರ್ಕ್ ಹಾಗೂ ಲಾಲ್‌ಬಾಗ್‌ನಲ್ಲಿ ಫೋಟೊಶೂಟ್ ವಿಪರೀತವಾಗಿತ್ತು. ಅದು ಉದ್ಯಾನಕ್ಕೆ ಭೇಟಿ ನೀಡುವವವರಿಗೆ ಕಿರಿಕಿರಿ ಎನಿಸುತ್ತಿತ್ತು. ಹೀಗಾಗಿ ಸಾರ್ವಜನಿಕರು ಹಾಗೂ ಉದ್ಯಾನ ನಡೆಗೆದಾರರ ಸಂಘವು ವಿರೋಧ ವ್ಯಕ್ತಪಡಿಸಿತ್ತು.

ಸದ್ಯವೇ ಫೋಟೋ ಶೂಟ್ ಗೆ ಬಳಸುವ ಕ್ಯಾಮೆರಾಗಳನ್ನು ಸೀಜ್ ಮಾಡಿ ದಂಡ ಕಟ್ಟಿಸಿಕೊಳ್ಳುವ ಕಾಯ್ದೆಯನ್ನು ಪ್ರಯೋಗಿಸಲು ತೋಟಗಾರಿಕಾ ಇಲಾಖೆ ಸಿದ್ಧತೆ ನಡೆಸಿದೆ. ಅಲ್ಲದೇ ಜೊತೆಗೆ ಫೋಟೋ ಶೂಟ್ ಮಾಡಿದರೆ ದಂಡ ಕೂಡ ಹಾಕುವ ಹೊಸ ಕಾಯ್ದೆಯನ್ನು ಜಾರಿಗೆ ತರಲು ತೋಟಗಾರಿಕಾ ಇಲಾಖೆ ನಿರ್ಧಾರ ಮಾಡಿದೆ.

ಸಾಕಷ್ಟು ಜನರು ಈ ವಿಚಾರವಾಗಿ ಇಲಾಖೆಗೆ ದೂರು ಕೂಡ ನೀಡಿದ್ದಾರೆ. ಜೊತೆಗೆ ಹೈ ರೆಸ್ಯೂಲಷನ್ ಇರುವ ಕ್ಯಾಮೆರಾ ಬಳಕೆಯಿಂದ ಕಬ್ಬನ್ ಪಾರ್ಕಿನ ಪಕ್ಷಿ ಸಂಕುಲಕ್ಕೂ ತೊಂದರೆಯಾಗಲಿದೆ. ಆರಾಮವಾಗಿ ಉದ್ಯಾನದಲ್ಲಿ ಕಾಲಕಳೆಯಬೇಕು ಎಂದು ಬಂದವರಿಗೆ ನಿರಾಸೆಯಾಗುವುದನ್ನು ತಪ್ಪಿಸಲು ಈ ನಿರ್ಧಾರ ಮಾಡಲಾಗಿದೆ.

English summary
If You Using Cubbon Park For PhotoShoot You May Lose Camera, Professional photography and videography have been banned in Cubbon Park for close to two years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X