'ಬಾಳಸಂಗಾತಿ' ನಿರ್ವಹಣೆಗೆ ಅನಂತ್‌ಕುಮಾರ್ ಸಲಹೆ
ಬೆಂಗಳೂರು, ಆ.4: ನಮ್ಮ ಜೀವನ ಶೈಲಿಯ ನಿಯಂತ್ರಣದಿಂದ ಮಾತ್ರವೇ ಮಧುಮೇಹ ನಿಯಂತ್ರಣ ಸಾಧ್ಯ ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಅನಂತ್ ಕುಮಾರ್ ಹೇಳಿದ್ದಾರೆ.
ಜೆಪಿ ನಗರದ ಸಮತ್ವ ಟ್ರಸ್ಟ್‌ನಡಿಯ ಜ್ಞಾನ ಸಂಜೀವಿನಿ ಆಸ್ಪತ್ರೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಮಧುಮೇಹ ಪೀಡಿತರಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ನೀಡುತ್ತಿರುವ ಜ್ಞಾನ ಸಂಜೀವಿನಿ ಆಸ್ಪತ್ರೆಯ ಕೆಲಸವನ್ನು ಸಚಿವರು ಶ್ಲಾಘಿಸಿದರು.

"ಮಧುಮೇಹ" ಬಾಳಸಂಗಾತಿಗಿಂತಲೂ ಬಾಳಸಂಗತಿ ಎಂಬ ಮಾತಿದೆ. ಇಂದಿನ ದಿನಗಳಲ್ಲಿ ಸೈಲೆಂಟ್ ಕಿಲ್ಲರ್ ಎಂದೇ ಕರೆಯಲ್ಪಡುವ ಮಧುಮೇಹದ ಬಗ್ಗೆ ಅರಿವು, ನಿಯಂತ್ರಣ ಹಾಗೂ ಚಿಕಿತ್ಸೆಗಗಾಗಿ ಜ್ಞಾನ ಸಂಜಿವಿಸನಿ ಆಸ್ಪತ್ರೆ ಕೈಗೊಂಡಿರುವ ಕಾರ್ಯವನ್ನು ರಾಜ್ಯಕ್ಕೆ , ದೇಶಕ್ಕೆ ವಿಸ್ತರಿಸಬೇಕಿದೆ. ಇದೇ ಮಾದರಿಯ ಯೋಜನೆ ರೂಪುಗೊಳ್ಳುವ ದಿಸೆಯಲ್ಲಿ ತಾವು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳೊಂದಿಗೆ ಇದನ್ನು ಪ್ರಸ್ತಾಪಿಸುವುದಾಗಿ ತಿಳಿಸಿದರು.
ಇತ್ತೀಚೆಗೆ ಜನ ಸಾಮಾನ್ಯರ ವೈದ್ಯಕೀಯ ಖರ್ಚಿನ ಹೊರೆ ತಗ್ಗಿಸಲು ಮಧುಮೇಹ ಹಾಗೂ ಹೃದಯ ರೋಗಕ್ಕೆ ಸಂಬಂಧಿಸಿದ 108 ಔಷಧಿಗಳ ಬೆಲೆಯನ್ನು ಕೇಂದ್ರ ಸರ್ಕಾರ ಶೇ.50ರಷ್ಟು ಇಳಿಸಿದೆ ಎಂದು ಅನಂತ್‌ಕುಮಾರ್ ಹೇಳಿದರು.












Click it and Unblock the Notifications