• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಲಾಕ್ ಡೌನ್ ವಿಸ್ತರಣೆ ಸಾಧ್ಯವೇ ಇಲ್ಲ ಎಂದ ಸಿಎಂ ಬಿಎಸ್ವೈ: ತಜ್ಞರು ನೀಡಿದ ಹೊಸ ಸಲಹೆ

|

ಬೆಂಗಳೂರು, ಜುಲೈ 18: ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಪ್ರಮಾಣ ಜಾಸ್ತಿಯಾಗುತ್ತಿರುವುದರಿಂದ, ಲಾಕ್ ಡೌನ್ ವಿಸ್ತರಣೆ ಮಾಡುವುದೇ ಸರಿಯಾದ ಮಾರ್ಗ ಎಂದು ತಜ್ಞರು ಸರಕಾರಕ್ಕೆ ಸಲಹೆಯನ್ನು ನೀಡಿದ್ದಾರೆ.

   Corona ಹೋರಾಟದಲ್ಲಿ ಭಾರತ ಮುಖ್ಯ ಪಾತ್ರ | Oneindia Kannada

   ರಾಜಧಾನಿಯ 198 ವಾರ್ಡ್ ಗಳ ಪೈಕಿ 196 ವಾರ್ಡ್ ಗಳಲ್ಲಿ ಸೋಂಕಿತರು ಇದ್ದಾರೆ. ಈ ವೇಳೆ, ಲಾಕ್ ಡೌನ್ ಸಡಿಲಿಸಿದರೆ, ಪರಿಸ್ಥಿತಿ ಕೈತಪ್ಪಿ ಹೋಗುತ್ತದೆ. ನಾವು, ಜಾಗರೂಕತೆಯಿಂದ ಇರಬೇಕಾದ ಸಮಯವಿದು. ಇಲ್ಲದಿದ್ದರೆ, ಜುಲೈ ಅಂತ್ಯದೊಳಗೆ ಕೇಸುಗಳು ಡಬಲ್ ಆಗಲಿದೆ ಎಂದು ತಜ್ಞರು ಎಚ್ಚರಿಕೆಯನ್ನು ನೀಡಿದ್ದಾರೆ.

   ಬೆಂಗಳೂರಿನಲ್ಲಿ ಮತ್ತೊಂದು ವಾರ ಲಾಕ್‌ಡೌನ್ ಮುಂದುವರಿಕೆ?

   ಆರ್ಥಿಕ ಕಾರಣದಿಂದ ಲಾಕ್ ಡೌನ್ ಮುಂದುವರಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ನೇರಾನೇರವಾಗಿ ಈಗಾಗಲೇ ಹೇಳಿದ್ದಾರೆ. ಲಾಕ್ ಡೌನ್ ಮುಂದುವರಿಸಲು ಸಾಧ್ಯವೇ ಆಗುವುದಿಲ್ಲ ಎನ್ನುವುದಾದರೆ, ಅದಕ್ಕೆ ತಜ್ಞರು ಪರ್ಯಾಯ ಮಾರ್ಗದ ಸಲಹೆಯನ್ನು ನೀಡಿದ್ದಾರೆ.

   ಲಾಕ್ ಡೌನ್ ಅನ್ನು ಇನ್ನು ಕನಿಷ್ಠ ಪಕ್ಷ ಒಂದು ವಾರವಾದರೂ ವಿಸ್ತರಣೆಯನ್ನು ಮಾಡಲಿ. ಅದು ಸಾಧ್ಯವೇ ಇಲ್ಲ ಎಂದಾದಲ್ಲಿ, ಹಾಟ್ ಸ್ಪಾಟ್ ಪ್ರದೇಶಗಳನ್ನಾದರೂ ಲಾಕ್ ಡೌನ್ ಮಾಡಿ ಎನ್ನುವ ಪರ್ಯಾಯ ಮಾರ್ಗವೇ ಸೂಕ್ತ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

   ಹಾಟ್ ಸ್ಪಾಟ್ ಗಳಲ್ಲಿ ಕಟ್ಟುನಿಟ್ಟಿನ ಕ್ರಮವನ್ನು ತೆಗೆದುಕೊಳ್ಳೋಣ, ಮತ್ತೆ ಲಾಕ್ ಡೌನ್ ವಿಸ್ತರಣೆ ಬೇಡ. ಈ ಬಗ್ಗೆ, ಇನ್ನೆರಡು ದಿನಗಳಲ್ಲಿ ನಾನೇ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇನೆ. ಯಾರೂ ಈ ಬಗ್ಗೆ ಹೇಳಿಕೆ ನೀಡಿ, ಗೊಂದಲ ಸೃಷ್ಟಿಸಬೇಡಿ ಎಂದು ಸಿಎಂ ಬಿಎಸ್ವೈ, ಸಚಿವರಿಗೆ ನಿರ್ದೇಶನ ನೀಡಿದ್ದಾರೆ.

   ಲಾಕ್ ಡೌನ್: ಬೆಂಗಳೂರಿಗರಿಗೆ ಕಾದಿದೆಯಾ ಶಾಕಿಂಗ್ ನ್ಯೂಸ್!?

   ''ಕೊವಿಡ್ ವಿರುದ್ಧ ಹೋರಾಡಲು ನಮಗೆ ಇನ್ನು ಸ್ವಲ್ಪ ಸಮಯ ಸಿಕ್ಕರೆ ಸೂಕ್ತ, ಹಾಗಾಗಿ ಇನ್ನೊಂದು ವಾರಗಳ ಲಾಕ್‌ಡೌನ್ ವಿಸ್ತರಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇವೆ'' ಎಂದು ಬೆಂಗಳೂರು ಮೇಯರ್ ಗೌತಂ ಕುಮಾರ್ ಹೇಳಿದ್ದರು.

   English summary
   If Lock Down Not Possible To Continue In Bengaluru, Hotspot Areas Should Lock Down: Experts Suggestion To CM Yediyurappa,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X