ಈದ್ಗಾ ಮೈದಾನ ವಿವಾದ, ಮುಸ್ಲಿಂ ಮುಖಂಡರ ಜೊತೆ ಶಾಂತಿ ಸಭೆ- ನಾಳೆ ಶುಭಸುದ್ದಿ ಎಂದ ಆರ್ ಅಶೋಕ್

ಬೆಂಗಳೂರು, ಆಗಸ್ಟ್ 10:ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಈದ್ಗಾ ಮೈದಾನ ವಿವಾದ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಆಸ್ತಿಯ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ವಿವಾದ ಉಂಟಾಗಿ ಕಡೆಗೇ ಕಂದಾಯ ಇಲಾಖೆಗೆ ಸೇರಿದ ಆಸ್ತಿ ಎಂದು ಬಿಬಿಎಂಪಿ ಹೇಳಿತ್ತು. ಇದೀಗ ಹಿಂದೂ ಸಂಘಟನೆಗಳು ಗಣೇಶ ಹಬ್ಬದ ಆಚರಣೆಗೆ ಮೈದಾನವನ್ನು ಕೇಳುತ್ತಿದ್ದು ಇದರಿಂದ ಕೋಮ ಸಾಮರಸ್ಯ ಹದಗೆಡುವ ಸಾಧ್ಯತೆಯಿದೆ ಎಂದು ಅರಿತ ಪೊಲೀಸ್ ಇಲಾಖೆ ಹಿಂದೂಗಳನ್ನು ಕರೆದು ಶಾಂತಿ ಸಭೆಯನ್ನು ಯಶಸ್ವಿಯಾಗಿ ನಡೆಸಿತ್ತು. ಮುಸ್ಲಿಂ ಮುಖಂಡರ ಜೊತೆ ಶಾಂತಿ ಸಭೆಯನ್ನು ಇಂದು (ಆಗಸ್ಟ್ 10ಕ್ಕೆ) ನಡೆಸಲಿದೆ.

ಈದ್ಗಾ ಮೈದಾನದಲ್ಲಿ ಹಿಂದೂ ಸಂಘಟನೆಗಳು ಗಣೇಶ ಹಬ್ಬ ನಡೆಸಲು ಲೇಸರ್ ಶೋ ಏರ್ಪಡಿಸಲು ಅನುಮತಿಯನ್ನು ಕೇಳುತ್ತಿದ್ದಾರೆ. ಇದರೊಂದಿಗೆ ಕಂದಾಯ ಇಲಾಖೆಗೆ ಈದ್ಗಾ ಮೈದಾನದಲ್ಲಿರುವ ಗೋಡೆ ತೆರವಿಗೆ ಮನವಿಯನ್ನು ಮಾಡಲಾಗುತ್ತಿದೆ. ಶಾಸಕ ಜಮೀರ್ ಅಹಮದ್ ಖಾನ್ ಸಹ ಸ್ವಾತಂತ್ರ್ಯೋತ್ಸವ , ಕನ್ನಡ ರಾಜ್ಯೋತ್ಸವ ಸೇರಿದಂತೆ ರಾಷ್ಟ್ರೀಯ ಹಬ್ಬಗಳ ಹೊರತು ಧಾರ್ಮಿಕ ಹಬ್ಬಗಳ ಆಚರಣೆಗೆ ಅವಕಾಶ ಮಾಡಿಕೊಡಲಾಗುವುದಿಲ್ಲ ಎಂದಿದ್ದರು. ಇದರಿಂದ ಹಿಂದೂ ಸಂಘಟನೆಗಳು ಕೆರಳಿದ್ದವು.

ಈದ್ಗಾ ಮೈದಾನ ಈ ಎಲ್ಲಾ ಕಾರಣದಿಂದಾಗ ಬೂದಿ ಮುಚ್ಚಿದ ಕೆಂಡದಂತಾಗಿದೆ. ಚಾಮರಾಜಪೇಟೆ ಪೊಲೀಸರು ಹಗಲು ರಾತ್ರಿ ಎನ್ನದೇ ಮೈದಾನದಲ್ಲಿ ಗಸ್ತು ಕಾಯುತ್ತಿದ್ದಾರೆ. ಈ ಕಾರಣದಿಂದಲೇ ಯಾವುದೇ ಕಾರಣಕ್ಕೂ ಕೋಮು ಸಾಮರಸ್ಯ ಹದಗೆಡಬಾರದು ಎಂದು ಹಿಂದೂ ಮುಖಂಡರು ಸಂಘಟನೆ ಜೊತೆ ಆಗಸ್ಟ್‌ 9ರ ರಂದು ಶಾಂತಿ ಸಭೆ ನಡೆಸಲಾಗಿತ್ತು. ಇಂದು (ಆಗಸ್ಟ್ 10)ಕ್ಕೆ ಪೊಲೀಸ್ ಇಲಾಖೆ ಮುಸ್ಲಿಂ ಮುಖಂಡರ ಜೊತೆ ಶಾಂತಿ ಸಭೆ ನಡೆಸಲು ಮುಂದಾಗಿದೆ.

 ಧಾರ್ಮಿಕ ಮುಖಂಡರು, ಸಂಘಟನೆಗೆ ಸಭೆಗೆ ಆಹ್ವಾನ

ಧಾರ್ಮಿಕ ಮುಖಂಡರು, ಸಂಘಟನೆಗೆ ಸಭೆಗೆ ಆಹ್ವಾನ

ಚಾಮರಾಜಪೇಟೆಯಲ್ಲಿ ಈದ್ಗಾ ಮೈದಾನ ವಿವಾದ ವಿಚಾರ ಸಂಘರ್ಷಕ್ಕೆ ಕಾರಣವಾಗಲಿದ್ಯಾ ಅನ್ನೋ ಅನುಮಾನ ಕಾಡಲಾರಂಭಿಸಿದೆ. ಇದಕ್ಕಾಗಿಯೇ ಪೊಲೀಸ್ ಇಲಾಖೆ ಮುಸ್ಲಿಂ ಮುಖಂಡರು, ಸಂಘಟನೆಗಳನ್ನು, ಮಾಜಿ ಪಾಲಿಕೆ ಸದಸ್ಯರನ್ನು ಶಾಂತಿ ಸಭೆಗೆ ಆಹ್ವಾನ ನೀಡಲಾಗಿದೆ.. ಇಂದು (ಆಗಸ್ಟ್ 10) ಸಂಜೆಗೆ ಖುದ್ದು ಹಾಜರಾಗುವಂತೆ ಸೂಚನೆಯನ್ನು ನೀಡಿದ್ದಾರೆ.

 ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಸೂಚನೆ

ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಸೂಚನೆ

ಈದ್ಗಾ ಮೈದಾನ ವಿಷಯಕ್ಕೆ ಸಂಬಂಧಿಸಿದಂತೆ ನಿನ್ನೆ (ಆಗಸ್ಟ್ 09) ಪೊಲೀಸ್ ಇಲಾಖೆಯಿಂದ ಶಾಂತಿ ಸಭೆಯನ್ನು ನಡೆಸಲಾಯಿತು.
ಒಂದು ಕಡೆ ಶಾಸಕ ಜಮೀರ್ ಹೇಳಿಕೆ ಖಂಡಿಸಿ ಹಿಂದು ಸಂಘಟನೆಗಳಿಂದ ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ, ಮತ್ತೊಂದು ಕಡೆ ಹಿಂದು ಸಂಘಟನೆಗಳಿಂದ ಗಣೇಶೋತ್ಸವ ಮಾಡುವ ನಿರ್ಧಾರ ಕೈಗೊಂಡಿದ್ದಾರೆ. ಇವೆರಡರ ನಡುವೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕಾದ ಜವಾಬ್ದಾರಿ ಪೊಲೀಸ್ ಇಲಾಖೆಯದ್ದು.ಈ ಹಿನ್ನೆಲೆಯಲ್ಲಿ ನಿನ್ನೆ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ ನಡೆಸಲಾಗುವುದು. ಸಂಜೆ 4.30 ಕ್ಕೆ ಶಾಂತಿ ಸಭೆಯನ್ನು ಕರೆಯಲಾಗಿತ್ತು. ಕನ್ನಡ ಪರ ಸಂಘಟನೆಗಳು, ಹಿಂದುಪರ ಸಂಘಟನೆಗಳು, ಚಾಮರಾಜಪೇಟೆ ನಾಗರಿಕ ವೇದಿಕೆ ಸೇರಿದಂತೆ ಹಲವು ಸಂಘಟನೆಯ ಮುಖಂಡರು ಭಾಗಿಯಾಗಿದ್ದರು. ಸಭೆ ನೇತೃತ್ವವನ್ನು ಸ್ಥಳೀಯ ಡಿಸಿಪಿ, ಎಸಿಪಿ, ಇನ್ ಸ್ಪೆಕ್ಟರ್ ವಹಿಸಲಿದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಇದರ ಜೊತೆಗೆ ಸೌಹಾರ್ದದಿಂದ ಈ ಬಾರಿ ಸ್ವಾತಂತ್ರ ದಿನಚಾರಣೆ ಆಚರಿಸಲು ಶಾಂತಿ ಸಭೆಯಲ್ಲಿ ಚರ್ಚೆ ಮಾಡಲಾಗಿದೆ.

 ಕಾನೂನು ಸುವ್ಯವಸ್ಥೆ ಮೀರಿದರೇ ಕಠಿಣ ಕ್ರಮ

ಕಾನೂನು ಸುವ್ಯವಸ್ಥೆ ಮೀರಿದರೇ ಕಠಿಣ ಕ್ರಮ

ಚಾಮರಾಜಪೇಟೆ ಠಾಣೆಯಲ್ಲಿ ಶಾಂತಿ ಸಭೆ ಬಳಿಕ ಪಶ್ಚಿಮ ವಿಭಾಗ ಡಿಸಿಪಿ ಲಕ್ಷ್ಮಣ್ ನಿಂಬರಗಿ "ಮೈದಾನ ಕಂದಾಯ ಇಲಾಖೆಯದ್ದು ಎಂದು ಆದೇಶ ಹೊರಬಿದ್ದಿದೆ. ಈ ಸಂಬಂಧ ಎರಡೂ ಸಮುದಾಯಗಳಿಂದ ವಿಭಿನ್ನ ಹೇಳಿಕೆ ಬರುತ್ತಿದ್ದವು. ಹೀಗಾಗಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರದಂತೆ ನಡೆದುಕೊಳ್ಳುವಂತೆ ಮನವರಿಕೆ ಮಾಡಲಾಗಿದೆ. ನಾಳೆ (ಆಗಷ್ಟ್10ಕ್ಕೆ) ಮತ್ತೊಂದು ಸಮುದಾಯದವರನ್ನ ಕರೆದು ಶಾಂತಿ ಸಭೆ ಕರೆಯಲಾಗುವುದು. ಸಭೆಯ ವಿಚಾರವನ್ನು ಹಿರಿಯ ಅಧಿಕಾರಿಗಳಿಗೆ ಮನವರಿಕೆ ಮಾಡಲಾಗುವುದು. ಕಿಡಿಗೇಡಿಗಳು ಕಾನೂನು ಉಲ್ಲಂಘನೆ ಮಾಡಿದರೇ ಕಠಿಣ ಕ್ರಮದ ಎಚ್ಚರಿಕೆ" ನೀಡಲಾಗಿದೆ ಎಂದು ತಿಳಿಸಿದರು.

 ಆರ್ ಅಶೋಕ್ ರಿಂದ ಸ್ಫಷ್ಟನೆ

ಆರ್ ಅಶೋಕ್ ರಿಂದ ಸ್ಫಷ್ಟನೆ

ಈದ್ಗಾ ಮೈದಾನ ಕಂದಾಯ ಇಲಾಖೆಗೆ ಸೇರಿದ್ದು ಎಂದು ಬಿಬಿಎಂಪಿ ಹೇಳಿತ್ತು. ಇದೀಗ ಕಂದಾಯ ಇಲಾಖೆಯು ಈದ್ಗಾ ಮೈದಾನ ತನ್ನ ಆಸ್ತಿ ಎಂದು ಹೇಳಿದೆ. "ಕಂದಾಯ ಇಲಾಖೆಗೆ ಈದ್ಗಾ ಮೈದಾನ ಸೇರಿದ್ದಾಗಿದೆ. ಮೈದಾನದಲ್ಲಿ ಸ್ವಾತಂತ್ರ್ಯೋತ್ಸವಕ್ಕಾಗಲಿ, ಗಣೇಶೋತ್ಸವಕ್ಕಾಗಲಿ ಯಾವುದೇ ಅರ್ಜಿ ಬಂದಿಲ್ಲ. ಈ ಬಗ್ಗೆ ನಾಳೆ (ಆಗಸ್ಟ್ 11)ಕ್ಕೆ ಶುಭ ಸುದ್ಧಿಯನ್ನು ನೀಡುತ್ತೇವೆ ಅಲ್ಲಿಯವರೆಗೂ ಕಾಯಿರಿ"ಎಂದು ಕಂದಾಯ ಸಚಿವ ಆರ್. ಆಶೋಕ್ ಹೇಳಿದ್ದಾರೆ.

Recommended Video

      Sanju , DK ಹಾಗು Ashwin ಅಭಿಮಾನಿಗಳಿಗೆ ಮನರಂಜನೆ ಕೊಟ್ಟಿದ್ದು ಹೀಗೆ | *Cricket |OneIndia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+