ಸ್ವಾಭಿಮಾನಕ್ಕೆ ಧಕ್ಕೆಯಾದರೆ ರಾಜೀನಾಮೆ ನೀಡುವೆ: ರೇಣುಕಾಚಾರ್ಯ

Recommended Video

      ರೇಣುಕಾಚಾರ್ಯರ ಸ್ವಾಭಿಮಾನಕ್ಕೆ ಧಕ್ಕೆಯಾದರೆ ಏನು ಮಾಡ್ತಾರೆ ? | Oneindia Kannada

      ಬೆಂಗಳೂರು, ಆಗಸ್ಟ್ 21: ನಾನು ಸಚಿವ ಸ್ಥಾನ ಆಕಾಂಕ್ಷಿಯಲ್ಲ, ಮಂತ್ರಿಗಿರಿ ಧಕ್ಕದಿದುದಕ್ಕೆ ಬೇಸರವೇನೂ ಇಲ್ಲ ಎಂದಿದ್ದ ರೇಣುಕಾಚಾರ್ಯ ಇಂದು ವರಸೆ ಬದಲಿಸಿದ್ದಾರೆ.

      ನನ್ನ ಸ್ವಾಭಿಮಾನಕ್ಕೆ ಧಕ್ಕೆ ಆದರೆ ಇಂದೇ ರಾಜೀನಾಮೆ ಕೊಟ್ಟು ಹೊರಡುತ್ತೇನೆ ಎಂದು ರೇಣುಕಾಚಾರ್ಯ ಧಮ್ಕಿ ಹಾಕಿದ್ದಾರೆ.

      ಲಕ್ಷ್ಮಣ ಸವಧಿಗೆ ಸಚಿವ ಸ್ಥಾನ ನೀಡಿದ್ದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿರುವ ಅವರು, ಲಕ್ಷ್ಮಣ ಸವಧಿಗೆ ಸಚಿವ ಸ್ಥಾನ ಅವಶ್ಯಕತೆ ಏನಿತ್ತು? ಗೆದ್ದವರಿಗೆ ನೀಡಬಹುದಾಗಿತ್ತು, ನನ್ನ ವಿರೋಧ ಇದ್ದರೆ ನೇರವಾಗಿ ಹೇಳುತ್ತೇನೆ ಎಂದು ರೇಣುಕಾಚಾರ್ಯ ಹೇಳಿದ್ದಾರೆ.

      I will resign if my self respect hurts: Renukacharya

      ರೇಣುಕಾಚಾರ್ಯ ಹೇಳಿಕೆಯನ್ನು ಅನುಮೋದಿಸಿರುವ ಉಮೇಶ್ ಕತ್ತಿ, 'ಸಚಿವ ಸ್ಥಾನ ಸಿಗಲಿಲ್ಲವೆಂದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗುತ್ತೇನೆ' ಎಂದು ಹೇಳಿದ್ದಾರೆ.

      ಶಾಸಕ ರಾಮಪ್ಪ ಲಮಾಣಿ ಸಹ ಅಸಮಾಧಾನ ಹೊರಹಾಕಿದ್ದು, ಸಚಿವ ಸ್ಥಾನ ಕೈತಪ್ಪಿದೆ ನಿಗಮ ಮಂಡಳಿ ಸ್ಥಾನ ದೊರೆಯುವ ವಿಶ್ವಾಸದಿಂದ ಇದ್ದೇನೆ, ಅದೂ ಇಲ್ಲವಾದರೆ ನಿರ್ಧಾರ ತೆಗೆದುಕೊಳ್ಳುತ್ತೇನೆ' ಎಂದಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+