ಕುಮಾರಸ್ವಾಮಿ ಸರ್ಕಾರಕ್ಕೆ ಬೆನ್ನೆಲುಬಾಗಿ ಇರ್ತೀನಿ: ಡಿಕೆ ಶಿವಕುಮಾರ್
Recommended Video

ಬೆಂಗಳೂರು, ಆಗಸ್ಟ್ 27: ಐದು ವರ್ಷ ಕುಮಾರಸ್ವಾಮಿ ಸರ್ಕಾರಕ್ಕೆ ಬೆನ್ನೆಲುಬಂತೆ ಇದ್ದು ಕಾಪಾಡುತ್ತೇನೆ ಎಂದು ಜನಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಮುಂಚೆ ಸಿದ್ದರಾಮಯ್ಯ ಸರ್ಕಾರ ಇದ್ದಾಗ ಆ ಸರ್ಕಾರಕ್ಕೂ ಬಂಡೆಗಲ್ಲಿನಂತೆ ನಿಂತು ಕಾಪಾಡಿದ್ದೆ. ಈಗಲೂ ಕುಮಾರಸ್ವಾಮಿಗೆ ಬೆಂಬಲವಾಗಿ ನಿಲ್ಲುತ್ತೇನೆ ಎಂದು ಹೇಳಿದ್ದಾರೆ.
ಸಮ್ಮಿಶ್ರ ಸರ್ಕಾರವನ್ನು ಉರುಳಿಸುವುದು ಸರಳವಲ್ಲ. ಸರ್ಕಾರವನ್ನು ಒಡೆದುಹಾಕಲು ಅದು ಮಡಕೆಯೂ ಅಲ್ಲ, ಎಂದು ಬಿಜೆಪಿಗೆ ಟಾಂಗ್ ನೀಡಿದ ಅವರು, ಸಮ್ಮಿಶ್ರ ಸರ್ಕಾರ ಐದು ವರ್ಷ ಪೂರೈಸುತ್ತದೆ ಎಂದು ಹೇಳಿದರು.

ಸಿದ್ದರಾಮಯ್ಯ ಅವರು ಸಿಎಂ ಆಗುತ್ತೇನೆ ಎಂದ ಹೇಳಿಕೆ ಬಗ್ಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಗೊಂದಲ ಸೃಷ್ಠಿ ಮಾಡುತ್ತಿಲ್ಲ. ಕಾರ್ಯಕರ್ತರನ್ನು ಹುರಿದುಂಬಿಸಲು ಹಾಗೆ ಹೇಳಿದ್ದಾರೆ ಅಷ್ಟೆ ಎಂದು ಹೇಳಿದರು.
ಸಿದ್ದರಾಮಯ್ಯ ಅವರು ಎಜುಕೇಟೆಡ್ ರಾಜಕಾರಣಿ. ಸರ್ಕಾರ ಬೀಳಿಸಬಾರದು ಎಂಬ ಅರಿವು ಅವರಿಗಿದೆ. ಅವರು ನಮ್ಮ ಪಕ್ಷದ ಹಿರಿಯ ರಾಜಕಾರಣಿ ಅವರು ಸರ್ಕಾರಕ್ಕೆ ಕಂಟಕ ತರುವ ಕೆಲಸ ಮಾಡಲ್ಲ ಎಂದರು.












Click it and Unblock the Notifications