ನಿಗಮ ಮಂಡಳಿಗಳೆಲ್ಲ ಬೇಡ, ಸಚಿವ ಸ್ಥಾನವೇ ಬೇಕು: ಬಿಸಿ ಪಾಟೀಲ್
ಬೆಂಗಳೂರು, ಜು.24: ಕೊಟ್ಟರೆ ಸಚಿವ ಸ್ಥಾನವೇ ಬೇಕು, ನಿಗಮವೂ ಬೇಡ, ಮಂಡಳಿಗಳೂ ಬೇಡ ಎಂದು ಶಾಸಕ ಬಿ.ಸಿ. ಪಾಟೀಲ್ ಸಚಿವ ಸ್ಥಾನಕ್ಕೆ ಪಟ್ಟು ಹಿಡಿದಿದ್ದಾರೆ.
ಆಷಾಢ ಮಾಸದಲ್ಲಿ ಯಾರೂ ಒಳ್ಳೆಯ ಕೆಲಸ ಮಾಡುವುದಿಲ್ಲ ಹಾಗಾಗಿಯೇ ಸಂಪುಟ ವಿಸ್ತರಣೆ ಮುಂದೆ ಹೋಗಿದೆ, ನಾನು ಸಚಿವ ಸ್ಥಾನ ಪ್ರಭಲ ಆಕಾಂಕ್ಷಿಯಾಗಿದ್ದೇನೆ, ಲಿಂಗಾಯತ ವೀರಶೈವ ಸಾದರ ಸಮಾಜಕ್ಕೆ ಮಂತ್ರಿ ಮಂಡಲದಲ್ಲಿ ಅವಕಾಶ ನೀಡಿಲ್ಲ, ಸಂಪುಟ ವಿಸ್ತರಣೆಯಲ್ಲಿ ನನ್ನ ಹೆಸರನ್ನು ಪರಿಗಣಿಸಬೇಕು ಎಂದು ಒತ್ತಾಯಿಸಿದರು.

ಕೋಳಿವಾಡ ಅವರು ವಿಧಾನ ಸಭೆಯ ಪೀಠೋಪಕರಣಗಳನ್ನು ಖಾಸಗಿ ಮನೆಯಲ್ಲಿ ಇಟ್ಟುಕೊಂಡಿರುವುದು ಸರಿಯಲ್ಲ, ಯಾರೇ ತಪ್ಪು ಮಾಡಿದರೂ ಅದು ತಪ್ಪೇ, ನನಹಗೆ ಈ ಕುರಿತು ಸ್ಪಷ್ಟ ಮಾಹಿತಿ ಇಲ್ಲ, ನಿಜವಾಗಿದ್ದರೆ ಅದು ಸರಿಯಾದುದ್ದಲ್ಲ, ಮುಂದಿನ ಸಚಿವ ಸಂಪುಟ ವಿಸ್ತರಣೆ ವೇಳೆ ನನ್ನ ಹೆಸರನ್ನು ಕೂಡ ಪರಿಗಣಿಸಬೇಕು, ತಾನೂ ಕೂಡ ಸಚಿವ ಸ್ಥಾನದ ಆಕಾಂಕ್ಷಿ ಎಂದರು.












Click it and Unblock the Notifications