ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಪೊಲೀಸರ ಲಂಚಾವತಾರ ಬಿಚ್ಚಿಟ್ಟ ಎನ್ ಜಿಒ

By Mahesh
|
Google Oneindia Kannada News

ಬೆಂಗಳೂರು, ಏಪ್ರಿಲ್ 27: ಬೆಂಗಳೂರಿನಲ್ಲಿ ಪಾಸ್ ಪೋರ್ಟ್ ಪರೀಶೀಲನೆಗಾಗಿ ಲಂಚ ಸ್ವೀಕರಿಸುವ ಟಾಪ್ 5 ಪೊಲೀಸ್ ಠಾಣೆಗಳ ವಿವರವನ್ನು ಸರ್ಕಾರೇತರ ಸಂಸ್ಥೆಯೊಂದು ಇತ್ತೀಚೆಗೆ ಬಹಿರಂಗಪಡಿಸಿದೆ.

ಬೆಂಗಳೂರಿನ ಜನಾಗ್ರಹ ಸಂಸ್ಥೆಯ ಐಪೇಯ್ಡ್ ಬ್ರೈಬ್ ಮಾಹಿತಿ ಸಮೀಕ್ಷೆ -ಜನ ಮಾಹಿತಿ ವರದಿಯಂತೆ ಕೋರಮಂಗಲ ಪೊಲೀಸ್ ಠಾಣೆ ಅತ್ಯಂತ ಭ್ರಷ್ಟತನಕ್ಕೆ ತುತ್ತಾಗಿದ್ದು, ಪಾಸ್ ಪೋರ್ಟ್ ಪರಿಶೀಲನೆ ವೇಳೆಯಲ್ಲಿ ಇತರೆ ಠಾಣೆಗಳಿಗೆ ಹೋಲಿಸಿದರೆ ಅತಿ ಹೆಚ್ಚು ಲಂಚ ಪಡೆಯುತ್ತಿರುವ ಠಾಣೆ ಎಂದು ತಿಳಿದು ಬಂದಿದೆ. [ಸರ್ಕಾರಿ ಕಚೇರಿಗಳಲ್ಲಿ ಲಂಚ ಕೇಳಿದರೆ ಕರೆ ಮಾಡಿ]

ಐಪಿಎಬಿ ಮಾಹಿತಿ ಪ್ರಕಾರ ಟಾಪ್ 5 ಭ್ರಷ್ಟತನದಿಂದ ಕೂಡಿದ ಠಾಣೆಗಳು ಇಂತಿವೆ: ಕೋರಮಂಗಲ, ಎಚ್ ಎಸ್ ಆರ್ ಲೇಔಟ್, ಎಚ್ಎಎಲ್, ಕಾಡುಗೊಡಿ ಹಾಗೂ ಮಹದೇವಪುರ ಪೊಲೀಸ್ ಠಾಣೆ.

I Paid a Bribe report

ಪ್ರತಿ ಪಾಸ್ ಪೋರ್ಟ್ ಪರಿಶೀಲನೆ ಪಡೆಯಲು ಸರಾಸರಿ 553 ರು ನಂತೆ ಪಡೆಯಲಾಗುತ್ತಿದೆ ಎಂದು ವರದಿಯನ್ನು ಬಹಿರಂಗ ಪಡಿಸಿದ ನಿಕಟ ಪೂರ್ವ ಲೋಕಾಯುಕ್ತ ಎನ್ ಸಂತೋಷ್ ಹೆಗ್ಡೆ ಹೇಳಿದರು. [ಭ್ರಷ್ಟರ ವಿರುದ್ಧ ಜನಾಗ್ರಹ ವೆಬ್ ಹೋರಾಟ]

ಭ್ರಷ್ಟಾಚಾರದ ಬಗ್ಗೆ ವರದಿ ಬಂದು, ವ್ಯಕ್ತಿಯೊಬ್ಬ ತಪ್ಪು ಮಾಡಿದ್ದು ತಿಳಿದ ಆರು ತಿಂಗಳೊಳಗೆ ಅತನಿಗೆ ಶಿಕ್ಷೆಯಾದ್ರೆ ವ್ಯವಸ್ಥೆಯಲ್ಲಿ ಬದಲಾವಣೆ ಸಾಧ್ಯ ಎಂದು ಹೆಗ್ಡೆ ಅವರು ಟೈಮ್ಸ್ ಆಫ್ ಇಂಡಿಯಾಕ್ಕೆ ಹೇಳಿದ್ದಾರೆ.

ಬೆಂಗಳೂರಿನ ಟಾಪ್ 5 ಭ್ರಷ್ಟ ಪೊಲೀಸ್ ಠಾಣೆಗಳು

ಬೆಂಗಳೂರಿನ ಟಾಪ್ 5 ಭ್ರಷ್ಟ ಪೊಲೀಸ್ ಠಾಣೆಗಳು

ಬೆಂಗಳೂರಿನ ಟಾಪ್ 5 ಭ್ರಷ್ಟ ಪೊಲೀಸ್ ಠಾಣೆಗಳು

ಬೆಂಗಳೂರಿನ ಟಾಪ್ 5 ಭ್ರಷ್ಟ ಪೊಲೀಸ್ ಠಾಣೆಗಳು


2011ರಿಂದ ಇಲ್ಲಿ ತನಕ ಬೆಂಗಳೂರಿನ ನಿವಾಸಿಗಳು 1,149 ಕೇಸುಗಳಲ್ಲಿಅ 38,17,821 ರು ಪೊಲೀಸರ ಕೈಗೆ ನೀಡಿದ್ದಾರೆ.

2010ರಿಂದ ಇಲ್ಲಿ ತನಕ ದೇಶದ 600ಕ್ಕೂ ಅಧಿಕ ನಗರಗಳಲ್ಲಿ 75,000ಕ್ಕೂ ಅಧಿಕ ಲಂಚ ಪ್ರಕರಣಗಳು ಕಂಡು ಬಂದಿದ್ದು 290ಕೋಟಿ ರು ಗೂ ಅಧಿಕ ಮೊತ್ತ ಅಧಿಕಾರಿಗಳ ಕೈ ಸೇರಿದೆ ಎಂದು ಐಪಿಎಬಿ ದಾಖಲೆ ಹೇಳುತ್ತಿವೆ.

English summary
I Paid a Bribe report: The 5 top corrupt police stations in Bengaluru for passport verification. Koramangala, HSR Layout, HAL, Kadugodi and Mahadevapura police stations are the top 5 bribe-taking police stations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X