ಬೆಂಗಳೂರು ಕೆರೆಯಲ್ಲಿ ಮಹಿಳೆ ಶವ, ಕೊಲೆ ಶಂಕೆ, ಪತಿ ಬಂಧನ

ಬೆಂಗಳೂರು, ಫೆಬ್ರವರಿ 14: ನಗರದ ಕೈಕೊಂಡ್ರಹಳ್ಳಿ ಕೆರೆಯಲ್ಲಿ ಮಹಿಳೆಯ ಶವ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯ ತಾಯಿ ಪತಿಯ ವಿರುದ್ಧ ದೂರು ನೀಡಿದ್ದಾರೆ.

ಕೀರ್ತನಾ(ಮೃತ ಮಹಿಳೆ) ಮಾಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು, ಕೆಲವು ದಿನಗಳಿಂದ ಬೆಳ್ಳಂದೂರು ಹತ್ತಿರವಿರುವ ಪಿಜಿಯಲ್ಲಿ ವಾಸವಿದ್ದರು. ಪತಿ ಆಕೆಗೆ ತುಂಬಾ ಹಿಂಸೆ ಕೊಡುತ್ತಿದ್ದ ಎಂದು ಪಾಲಕರು ದೂರಿರುವ ಹಿನ್ನೆಲೆಯಲ್ಲಿ ಪತಿ ನಾಗೇಂದ್ರನನ್ನು ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ.

ಫೆಬ್ರವರಿ 2ರಿಂದ ಕೀರ್ತನಾ ಕಾಣೆಯಾಗಿದ್ದರು. ಆಕೆಗೆ ಅದಕ್ಕೂ ಮೊದಲು ಕರೆ ಮಾಡಿದಾಗ ಹೆದರಿ ಮಾತನಾಡುತ್ತಿದ್ದಳು. ಬಳಿಕ ಮತ್ತೆ ಕರೆ ಮಾಡಿದಾಗ ಕಾಲ್ ರಿಸೀವ್ ಮಾಡಿರಲಿಲ್ಲ, ನಾಗೇಂದ್ರನನ್ನು ಕೇಳಿದಾಗ ತನಗೇನು ಗೊತ್ತೇ ಇಲ್ಲ ಎಂದಿದ್ದ.

Husband held after wife’s body is found

ಕೀರ್ತನಾ ಹಾಗೂ ನಾಗೇಂದ್ರಮೂಲತಃ ಮೈಸೂರಿನವರಾಗಿದ್ದು 2016ರಲ್ಲಿ ಮದುವೆಯಾಗಿದ್ದರು. ಕೀರ್ತನಾ ಮಾಲ್‌ನಲ್ಲಿ ಕೆಲಸ ಮಾಡುತ್ತಿದ್ದಳು, ನಾಗೇಂದ್ರ ನಗರದಲ್ಲಿರುವ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಕೀರ್ತನಾ ಹಾಗೂ ಆಕೆಯ ಪೋಷಕರು ಎರಡು ಬಾರಿ ನಾಗೇಂದ್ರನ ವಿರುದ್ಧ ದೂರು ನೀಡಿದ್ದರು.ಹಾಗಾಗಿ ಮಗಳ ಸಾವಿನ ಹಿಂದೆ ಅಳಿಯನ ಕೈವಾಡವಿದೆ ಎಂದು ಕೀರ್ತನಾ ತಾಯಿ ದೂರು ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+