ಹುಚ್ಚಾ ವೆಂಕಟ್‌ಗೆ ಚುನಾವಣಾ ಆಯೋಗ ಕೊಟ್ಟಿರುವ ಚಿಹ್ನೆ ಇದು
Recommended Video

Karnataka Elections 2018 : ಹುಚ್ಚ ವೆಂಕಟ್ ಎಕ್ಕಡ ಗುರುತಿಗೆ ನಿಮ್ಮ ಮತ ಕೊಡಿ | Oneindia Kannada
ಬೆಂಗಳೂರು, ಏಪ್ರಿಲ್ 27: ನನ್ ಎಕ್ಕಡ, ನನ್ ಎಕ್ಕಡ ಅಂತಿದ್ದ ಹುಚ್ಚಾ ವೆಂಕಟ್‌ಗೆ ಚುನಾವಣಾ ಆಯೋಗ ಎಕ್ಕಡವನ್ನೇ ನೀಡಿದೆ.
ಹೌದು, ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಹುಚ್ಚಾ ವೆಂಕಟ್‌ಗೆ ಆಯೋಗವು ಚುನಾವಣಾ ನಿಹ್ನೆಯಾಗಿ ಚಪ್ಪಲಿಯನ್ನು ದಯಪಾಲಿಸಿದೆ. ಹುಚ್ಚಾ ವೆಂಕಟ್‌ಗೆ ಮತ ಹಾಕುವವರು ಎಕ್ಕಡದ ಗುರುತಿಗೆ ಮತ ಹಾಕಬೇಕು.
ಹುಚ್ಚಾ ವೆಂಕಟ್ ಅವರು ರಾಜರಾಜೇಶ್ವರಿ ನಗರ ಮತಕ್ಷೇತ್ರದಿಂದ ಪಕ್ಷೇತರವಾಗಿ ಚುನಾವಣೆಗೆ ನಿಂತಿದ್ದಾರೆ ಅವರ ಅಸಲಿ ಹೆಸರು ಎಲ್.ವೆಂಕಟರಾಮ್. ಅಲ್ಲಿನ ಹಾಲಿ ಶಾಸಕ ಕಾಂಗ್ರೆಸ್‌ನ ಮುನಿರತ್ನ ಅವರನ್ನು ಸೋಲಿಸುವ ಗುರಿಯೊಂದಿಗೆ ಚುನಾವಣಾ ಕಣಕ್ಕೆ ಇಳಿದಿದ್ದಾರಂತೆ.

ಚುನಾವಣಾ ನಾಮಪತ್ರ ಸಲ್ಲಿಸಿದ ಮೇಲೆ ಮಾತನಾಡಿದ್ದ ಹುಚ್ಚಾ ವೆಂಕಟ್ 'ನಾನು ಯಾರನ್ನೂ ಮತ ಕೇಳಲ್ಲ, ನಾನು ಶಾಸಕ ಆಗಬೇಕು ಅನ್ನೋ ಆಸೆ ಇದ್ರೆ ನೀವೆ ಮತ ಹಾಕಿ' ಅಂತ ತನ್ನದೇ ಸ್ಟೈಲ್‌ನಲ್ಲಿ ವಾರ್ನಿಂಗ್ ಕೂಡ ಮಾಡಿದ್ದರು.
ಬೈಯಲು ನನ್ ಎಕ್ಕಡ ಎನ್ನುತ್ತಿದ್ದ ಹುಚ್ಚಾ ವೆಂಕಟ್ ನಾಳೆಯಿಂದ ನನ್ ಎಕ್ಕಡಕ್ಕೆ ವೋಟ್ ಹಾಕಿ ಎನ್ನುತ್ತಾರೇನೋ ನೋಡಬೇಕು.












Click it and Unblock the Notifications