ಪುಸ್ತಕ ಮರೆತರೆ ಪ್ರಪಂಚ ಮರೆತಂತೆ, ಪೋಷಕರು ಎಚ್ಚೆತ್ತುಕೊಳ್ಳಲಿ!
ಆಧುನಿಕ ಕಾಲದಲ್ಲಿ ಪುಸ್ತಕಗಳ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಮರೆಯಾಗುತ್ತಿದ್ದು, ಮೊಬೈಲ್ & ತಂತ್ರಜ್ಞಾನದ ಕಡೆ ಮಾತ್ರ ಗಮನ ಕೇಂದ್ರಿಕೃತವಾಗಿದೆ. ಹೀಗಾಗಿ ಇದು ಭವಿಷ್ಯದಲ್ಲಿ ಇಡೀ ಮನುಷ್ಯನ ಬದುಕಿಗೆ ಮಾರಕ ಎಂದು, ಕೆಪಿಸಿಸಿ ಪ್ರಚಾರ ಸಮಿತಿ ಸದಸ್ಯ ಕೆ. ವಾಸುದೇವ್ ರೆಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದರು.
ರಾಜಧಾನಿ ಬೆಂಗಳೂರಿನ, ಎಚ್‌ಎಸ್‌ಆರ್ ಬಡಾವಣೆಯಲ್ಲಿ ಆಯೋಜಿಸಿದ್ದ 'ಪುಸ್ತಕ ಸಂತೆ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಳೆದ 2 ದಿನಗಳಿಂದ ನಡೆದ ಕಾರ್ಯಕ್ರಮ ಸ್ಥಳೀಯರಲ್ಲಿ ಕನ್ನಡತನ & ಕನ್ನಡ ಪುಸ್ತಕಗಳ ಕುರಿತು ಜ್ಞಾನ ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಿತ್ತು ಈ 'ಪುಸ್ತಕ ಸಂತೆ' ಕಾರ್ಯಕ್ರಮ. ಈ ವೇಳೆ ವಿವಿಧ ಕ್ಷೇತ್ರಗಳ ಗಣ್ಯರು, ಸಾಹಿತಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆಗ ಕೆಪಿಸಿಸಿ ಪ್ರಚಾರ ಸಮಿತಿಯ ಸದಸ್ಯ & ಪ್ರಾಧ್ಯಾಪಕರಾದ ಕೆ. ವಾಸುದೇವ್ ರೆಡ್ಡಿ ಕೂಡ ಸಮಾರಂಭದಲ್ಲಿ ಪುಸ್ತಕ ಅಗತ್ಯತೆ ಬಗ್ಗೆ ಮಾತನಾಡಿದರು.

ಮಕ್ಕಳ ಆರೋಗ್ಯದ ಮೇಲೆ ಪರಿಣಾಮ
ಶಾಲೆ & ಟ್ಯೂಷನ್ ಹೊರತಾಗಿ ಮಕ್ಕಳು ಮನೆಗೆ ಬಂದರೆ ಬರೀ ಮೊಬೈಲ್‌ಗಳಲ್ಲಿ ಮುಳುಗಿ ಹೋಗುತ್ತಾರೆ. ಹೀಗಾದಾಗ ಅವರ ಆರೋಗ್ಯದ ಮೇಲೆ ಕೂಡ ದುಷ್ಪರಿಣಾಮ ಉಂಟಾಗುತ್ತೆ ಎಂಬುದು ಪೋಷಕರಿಗೆ ಅರಿವು ಇರಲಿ. ಹೀಗಾಗಿ ಮಕ್ಕಳಿಗೆ ಪುಸ್ತಕ ಓದುವ ಹವ್ಯಾಸ ಬೆಳೆಸಿ ಹಾಗೂ ಈ ಮೂಲಕ ಅವರ ಜ್ಞಾನವನ್ನೂ ವೃದ್ಧಿಸಬಹುದಾಗಿದೆ ಎಂದು ಕೆ. ವಾಸುದೇವ್ ರೆಡ್ಡಿ ಇದೇ ವೇಳೆ ಮಕ್ಕಳ ಪೋಷಕರಿಗೆ ಸಲಹೆ ನೀಡಿದರು. ಹಾಗೇ ಪುಸ್ತಕ ಮರೆತರೆ ಪ್ರಪಂಚ ಮರೆತಂತೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
150ಕ್ಕೂ ಹೆಚ್ಚು ಪ್ರಕಾಶಕರು ಭಾಗಿ
ಪುಸ್ತಕ ಸಂತೆಯಲ್ಲಿ ಕನ್ನಡ ನಾಡಿನ 150ಕ್ಕೂ ಹೆಚ್ಚು ಪ್ರಕಾಶಕರು ಭಾಗವಹಿಸಿದ್ದರು. ಸಿಎಂ & ಡಿಸಿಎಂ ಸಮೇತ ನೂರಾರು ಸಾಹಿತಿಗಳು, ಸಾವಿರಾರು ಓದುಗರು ಕೂಡ ಪುಸ್ತಕ ಸಂತೆಗೆ ಬಂದು ಕನ್ನಡತನ ಮೆರೆದರು. ಕನ್ನಡ ಓದುವ ಸಂಸ್ಕೃತಿ ಪಸರಿಸುವ ದೃಷ್ಠಿಯಿಂದಲೇ ಈ ಪುಸ್ತಕ ಸಂತೆ ಗಮನ ಸೆಳೆದಿದೆ. ವೀರಕಪುತ್ರ ಶ್ರೀನಿವಾಸ್ & ಅನಿಲ್ ರೆಡ್ಡಿ ಸಾರಥ್ಯದಲ್ಲಿ ಪುಸ್ತಕದ ಸಂತೆಯನ್ನು ಆಯೋಜನೆ ಮಾಡಲಾಗಿತ್ತು. ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಅವರು, ಈ ಪುಸ್ತಕ ಸಂತೆಗೆ ಮುಂದಾಳತ್ವ ವಹಿಸಿದ್ದರು. ಕನ್ನಡಿಗರ ಮೆಚ್ಚಿನ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಕೂಡ ಭಾಗವಹಿಸಿದ್ದರು.

ಬೆಂಗಳೂರಿನಲ್ಲಿ ಕನ್ನಡ ಕಲರವ
ಎಚ್‌ಎಸ್‌ಆರ್ ಬಡಾವಣೆಯಲ್ಲಿ 'ಪುಸ್ತಕ ಸಂತೆ' ಜೊತೆಗೆ ವಿವಿಧ ಕನ್ನಡ ಪರ ಕಾರ್ಯಕ್ರಮ ಕೂಡ ನಡೆದವು. ಈ ಮೂಲಕ ಮಕ್ಕಳ ಸಮೇತ, ಎಚ್‌ಎಸ್‌ಆರ್ ಬಡಾವಣೆ ಸುತ್ತಮುತ್ತಲು ವಾಸ ಮಾಡುವ ನಿವಾಸಿಗಳು ಈ ಪುಸ್ತಕ ಸಂತೆಗೆ ಬಂದು ಬುಕ್ ಖರೀದಿ ಮಾಡಿದರು. ಈ ವೇಳೆ ಸಿನಿಮಾ ಸ್ಟಾರ್‌ಗಳು ಕೂಡ ಪುಸ್ತಕ ಸಂತೆ ಕಾರ್ಯಕ್ರಮಕ್ಕೆ ಸಾಥ್ ನೀಡಿದ್ದರು. ಹೀಗೆ ವಾರಾಂತ್ಯದಲ್ಲಿ ಎಚ್‌ಎಸ್‌ಆರ್ ಲೇಔಟ್ ಕನ್ನಡತನ ಪಸರಿಸಲು ಸಾಕ್ಷಿಯಾಗಿತ್ತು.
ಒಟ್ನಲ್ಲಿ ಪುಸ್ತಕ ಸಂತೆ ಇಡೀ ಬೆಂಗಳೂರಿನ ಗಮನ ಸೆಳೆದಿದೆ. ನಿನ್ನೆ ಈ ಕಾರ್ಯಕ್ರಮದಲ್ಲಿ ಸ್ವತಃ ಸಿಎಂ ಭಾಗವಹಿಸಿದ್ದರು. ಅಲ್ಲದೆ ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿ ಅವರೂ, ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇಂದು ಕೊನೆಯ ದಿನವಾದ ಹಿನ್ನೆಲೆ, ಸ್ಥಳೀಯ ನಿವಾಸಿಗಳು ಸೇರಿದಂತೆ ವಿವಿಧ ಪ್ರದೇಶದಿಂದ ಜನ ಆಗಮಿಸಿ ಪುಸ್ತಕ ಸಂತೆಯಲ್ಲಿ ಪುಸ್ತಕದ ಖರೀದಿ ಮಾಡಿದರು.
-
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಮಾರ್ಚ್ 24ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಮಾರ್ಚ್ 23ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
Bengaluru: 50 ವಾರ್ಡ್ಗಳಲ್ಲಿ ಕಸ ವಿಲೇವಾರಿ ಸ್ಥಗಿತ; ವೇತನ ವಿಳಂಬಕ್ಕೆ ಮುನಿದು ಸಾಮೂಹಿಕ ರಜೆ ಹಾಕಿದ ಕಾರ್ಮಿಕರು -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಹಿಂದುಳಿದ, ದುರ್ಬಲ ವರ್ಗದ ಮಕ್ಕಳಿಗೆ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶೇ. 25 ರಷ್ಟು ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Bengaluru: ಬಿಡಿಎಗೆ 50ರ ಸಂಭ್ರಮ; ಹೊಸ ಲೋಗೋ, ಟ್ಯಾಗ್ಲೈನ್ ವಿನ್ಯಾಸ ಮಾಡಿ 1 ಲಕ್ಷ ರೂ. ಬಹುಮಾನ ಗೆಲ್ಲಿ








Click it and Unblock the Notifications