• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಎಚ್ಎಸ್ಎಲ್ಎನ್ ಶಾಲೆಯಲ್ಲಿ ಸಿಂಗಪುರ ಮಾದರಿ ಕಲಿಕಾ ವ್ಯವಸ್ಥೆ

|

ಬೆಂಗಳೂರು, ಮೇ. 09: ಕೊರೊನಾ ಸೋಂಕಿನಿಂದ ಮಕ್ಕಳು ಶಿಕ್ಷಣದಿಂದ ದೂರ ಉಳಿಯುತ್ತಿದ್ದಾರೆ. ತಂತ್ರಜ್ಞಾನ ಆಧಾರಿತ ಶಿಕ್ಷಣ ವ್ಯವಸ್ಥೆ ಅಳವಡಿಸಿಕೊಳ್ಳದ ಶಾಲೆಗಳ ಸ್ಥಿತಿಯಂತೂ ಹೇಳತೀರಲಾಗದು. ಕೊರೊನಾ ಸೋಂಕು ಸಂಕಷ್ಟ ಕಾಲದಲ್ಲೂ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಹೆಸರು ಗಳಿಸಿರುವ ಎಚ್‌ಎಸ್ಎಲ್ಎನ್ ಗ್ಲೋಬಲ್ ಸ್ಮಾರ್ಟ್ ಸ್ಕೂಲ್ ಇದೀಗ ಮತ್ತೊಂದು ಹೊಸತನಕ್ಕೆ ನಾಂದಿ ಹಾಡಿದೆ.

ಸಿಂಗಪುರ ಮಾದರಿಯ ತಂತ್ರಜ್ಞಾನ ಆಧಾರಿತ ಕಲಿಕಾ ವ್ಯವಸ್ಥೆಯನ್ನು ಪರಿಚಯಿಸಿರುವ ಎಚ್‌ಎಸ್ಎಲ್ಎನ್ ಗ್ಲೋಬಲ್ ಸ್ಮಾರ್ಟ್ ಸ್ಕೂಲ್ ಈ ಸಂಬಂಧ ಮುಂಬೈ ಮೂಲದ ಲೀಡರ್‌ಶಿಪ್ ಬುಲವಾರ್ಡ್ ಪ್ರೆ. ಲಿ. ಜತೆ ಒಡಂಬಡಿಕೆ ಮಾಡಿಕೊಂಡಿದೆ. ಈ ಮೂಲಕ ಹೆಸರಘಟ್ಟದಲ್ಲಿ ಲೀಡ್ ಅಕಾಡೆಮಿಕ್ ಎಕ್ಸಲೆನ್ಸ್ ಸಿಸ್ಟಮ್‌ ಅನ್ನು ಅಳವಡಿಸಿಕೊಂಡ ಏಕೈಕ ಶಾಲೆಯಾಗಿದೆ.

ಲೀಡರ್ ಶಿಪ್ ಬುಲವಾರ್ಡ್ ಪ್ರೆ. ಲಿ. ಕರ್ನಾಟಕ ಪ್ರತಿನಿಧಿ ಸುನೀಲ್ ಹಾಗೂ ಎಚ್ಎಸ್ಎಲ್ಎನ್ ಗ್ಲೋಬಲ್ ಸ್ಮಾರ್ಟ್ ಶಾಲೆ ಪ್ರಾಂಶುಪಾಲೆ ಲಿಖಿತಾಗೌಡ ಆನ್‌ಲೈನ್ ಮೂಲಕವೇ ವಿನೂತನ ಕಲಿಕಾ ಪದ್ಧತಿ ಒಡಂಬಡಿಕೆಗೆ ಸಹಿ ಮಾಡಿ, ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಪ್ರಾಂಶುಪಾಲೆ ಲಿಖಿತಾಗೌಡ

ಈ ವೇಳೆ ಮಾತನಾಡಿದ ಪ್ರಾಂಶುಪಾಲೆ ಲಿಖಿತಾಗೌಡ

ಈ ವೇಳೆ ಮಾತನಾಡಿದ ಪ್ರಾಂಶುಪಾಲೆ ಲಿಖಿತಾಗೌಡ, ತಂತ್ರಜ್ಞಾನದಿಂದ ಶಿಕ್ಷಣರಂಗವೇ ಬದಲಾಗುತ್ತಿದೆ. ತಂತ್ರಜ್ಞಾನಕ್ಕೆ ಅನುಗುಣವಾಗಿ ಶಿಕ್ಷಣ ರಂಗವೂ ಬದಲಾಗಬೇಕಿದೆ. ಈ ನಿಟ್ಟಿನಲ್ಲಿ ಎಚ್‌ಎಸ್ಎಲ್ಎನ್ ಹೊಸ ಪರ್ವಕ್ಕೆ ನಾಂದಿ ಹಾಡಿದೆ. ಲೀಡ್ ಅಕಾಡೆಮಿಕ್ಸ್ ಎಕ್ಸಲೆನ್ಸ್ ಸಿಸ್ಟಮ್‌ನ್ನು ಅಳವಡಿಸಿಕೊಂಡಿದೆ. ಶೈಕ್ಷಣಿಕ ವ್ಯವಸ್ಥೆಯಲ್ಲಿ ವಿಶ್ವದ ಅಗ್ರ ಶ್ರೇಯಾಂಕಿತ ರಾಷ್ಟ್ರಗಳಾದ ಫಿನ್ ಲ್ಯಾಂಡ್ ಮತ್ತು ಸಿಂಗಪುರ ಮಾದರಿ ತಂತ್ರಜ್ಞಾನ ಆಧಾರಿತ ಕಲಿಕಾ ಪದ್ಧತಿ ಎಚ್‌ಎಸ್ಎಲ್ಎನ್ ಶಾಲೆಯಲ್ಲಿ 2021-22 ನೇ ಸಾಲಿನಲ್ಲಿ ಅಳವಡಿಸಿಕೊಳ್ಳಲಾಗಿದೆ ಎಂಬುದನ್ನು ಹೇಳಲು ಹೆಮ್ಮೆಯಾಗುತ್ತದೆ ಎಂದರು.

ಕೋಡಿಂಗ್ ತರಗತಿಗಳನ್ನು ಪರಿಚಯಿಸಿದ್ದೇವೆ

ಕೋಡಿಂಗ್ ತರಗತಿಗಳನ್ನು ಪರಿಚಯಿಸಿದ್ದೇವೆ

ತಂತ್ರಜ್ಞಾನದ ಜತೆಗೆ ಮಕ್ಕಳು ಬೆಳೆಯಬೇಕು. ಹೀಗಾಗಿ ಕೋಡಿಂಗ್ ತರಗತಿಗಳನ್ನು ಪರಿಚಯಿಸಿದ್ದೇವೆ. ಪ್ರತಿ ಅಧ್ಯಾಯವನ್ನು ಕಾರ್ಯಚಟುವಟಿಕೆ ಆಧಾರಿತವಾಗಿ ಬೋಧನೆ ಮಾಡಲಾಗುತ್ತದೆ. ಈ ಕೊರೊನಾ ಸಂಕಷ್ಟದಲ್ಲಿ ವಿದ್ಯಾರ್ಥಿಗಳು ಶಾಲೆಗೆ ಬಾರದಿದ್ದರೂ ಮನೆಯಲ್ಲಿಯೇ ಕೂತು ಶಾಲೆಯಲ್ಲಿ ಕಲಿಯುವ ಮಾದರಿಯಲ್ಲಿಯೇ ಕಲಿಸಲು ಲೀಡ್ ಅಕಾಡೆಮಿಕ್ ಎಕ್ಸಲೆನ್ಸ್ ಸಿಸ್ಟಮ್‌ ನೆರವಾಗಲಿದೆ. ಪ್ರತಿ ಅಧ್ಯಾಯ ಬೋಧನೆ, ಮಗುವಿನ ಕಲಿಕೆ, ಕಲಿಕೆ ಪ್ರಮಾಣವನ್ನು ಪರೀಕ್ಷೆಗೆ ಒಳಪಡಿಸುವ ಬಹು ಆಯ್ಕೆ ಪ್ರಶ್ನೆ ಪತ್ರಿಕೆ, ಕಾರ್ಯಚಟುವಟಿಕೆ ಬೋಧನೆ ಮಾಡಲಾಗುತ್ತದೆ. ಕೊರೊನಾ ಸಾಂಕ್ರಾಮಿಕ ರೋಗ ಹರಡುವ ಈ ಭೀತಿಯ ಕಾಲದಲ್ಲಂತೂ ವಿದ್ಯಾರ್ಥಿಗಳಿಗೆ ಈ ವಿನೂತನ ಕಲಿಕಾ ಪದ್ಧತಿ ತುಂಬಾ ಸಹಕಾರಿಯಾಗಲಿದೆ.

ತಂತ್ರಜ್ಞಾನ ಆಧಾರಿತ ಈ ಕಲಿಕಾ ವ್ಯವಸ್ಥೆ

ತಂತ್ರಜ್ಞಾನ ಆಧಾರಿತ ಈ ಕಲಿಕಾ ವ್ಯವಸ್ಥೆ

ಇಂಗ್ಲೀಷ್ ಭಾಷೆ ಮಾತನಾಡುವುದನ್ನೇ ಒಂದು ವಿಷಯವನ್ನಾಗಿ ಪರಿಚಯಿಸುತ್ತಿದ್ದೇವೆ. ಕೋಡಿಂಗ್, ವಿಷ್ಯುವಲ್ ಆರ್ಟ್, ಯೋಗ, ಡ್ರಾಮಾ ಕೂಡ ಕಲಿಸಲಾಗುತ್ತದೆ. ಆನ್‌ಲೈನ್, ಆಫ್‌ಲೈನ್ ಎರಡು ಮಾದರಿಯಲ್ಲೂ ತಂತ್ರಜ್ಞಾನ ಆಧಾರಿತ ಈ ಕಲಿಕಾ ವ್ಯವಸ್ಥೆಯಿಂದ ಮಕ್ಕಳ ಉತ್ತಮ ಭವಿಷ್ಯ ರೂಪಿಸಲು ಸಹಕಾರಿಯಾಗಲಿದೆ ಎಂದು ಹೇಳಿದರು.

ಲೀಡರ್ ಶಿಪ್ ಬೋಲವಾರ್ಡ್ ಪ್ರೆ. ಲಿ ಪ್ರತಿನಿಧಿ ಸುನೀಲ್

ಲೀಡರ್ ಶಿಪ್ ಬೋಲವಾರ್ಡ್ ಪ್ರೆ. ಲಿ ಪ್ರತಿನಿಧಿ ಸುನೀಲ್

ಲೀಡರ್ ಶಿಪ್ ಬೋಲವಾರ್ಡ್ ಪ್ರೆ. ಲಿ ಪ್ರತಿನಿಧಿ ಸುನೀಲ್ ಮಾತನಾಡಿ, ಲೀಡ್ ಸಿಸ್ಟಮ್ ತಾಂತ್ರಿಕ ಡೇಟಾ ಮೂಲಕ ಮಕ್ಕಳ ಕಲಿಕೆ ಅವಶ್ಯಕತೆಯನ್ನು ಗುರುತಿಸುತ್ತದೆ. ಇದನ್ನಾಧರಿಸಿ ಶಿಕ್ಷಕರು ಪ್ರತಿ ಮಗುವಿನ ಅನುಗುಣವಾಗಿ ಪರಿಹಾರ ಸೂಚಿಸಿತ್ತಾರೆ. ಆಧುನಿಕ ತಂತ್ರಜ್ಞಾನ ಆಧಾರಿತ ಕಲಿಕಾ ಪದ್ಧತಿ. ಲೀಡ್ ಅಕಾಡೆಮಿಕ್ಸ್ ಎಕ್ಸಲೆನ್ಸಿ ಕಲಿಕಾ ಪದ್ಧತಿಯಲ್ಲಿ ವಿದ್ಯಾರ್ಥಿಗಳ ಕೌಶಲ್ಯ ಬೆಳವಣಿಗೆ ಬದಲಾವಣೆಯನ್ನು ಒಂದು ವರ್ಷದಲ್ಲಿ ಪೋಷಕರು ಗುರುತಿಸಬಹುದಾಗಿದೆ.

  ಸ್ವಂತ ಖರ್ಚಿನಲ್ಲಿ ಆಕ್ಸಿಜನ್ ವ್ಯವಸ್ಥೆ ! | Oneindia Kannada
  ಇಡೀ ಜಗತ್ತನ್ನೇ ತಂತ್ರಜ್ಞಾನ ಆಳ್ವಿಕೆ ಮಾಡುತ್ತಿರುವ ಕಾಲ

  ಇಡೀ ಜಗತ್ತನ್ನೇ ತಂತ್ರಜ್ಞಾನ ಆಳ್ವಿಕೆ ಮಾಡುತ್ತಿರುವ ಕಾಲ

  ಇಡೀ ಜಗತ್ತನ್ನೇ ತಂತ್ರಜ್ಞಾನ ಆಳ್ವಿಕೆ ಮಾಡುತ್ತಿರುವ ಕಾಲ. ಭವಿಷ್ಯದ ಉದ್ಯೋಗಗಳು ತಂತ್ರಜ್ಞಾನ ಆಧಾರ ಪಟ್ಟಿರುತ್ತವೆ. ಈ ತಂತ್ರಜ್ಞಾನದ ಹಿನ್ನೆಲೆಯ ಮಕ್ಕಳಿಗೆ ಚಿಕ್ಕಂದಿನಿಂದಲೇ ಕಲಿಸಿದ್ದಲ್ಲಿ, ಅವರು ಅದರಲ್ಲಿ ಉತ್ತಮ ಭವಿಷ್ಯ ಕಂಡುಕೊಳ್ಳಲು ಸಹಕಾರಿಯಾಗುತ್ತದೆ. ಇದನ್ನು ಗಮನದಲ್ಲಿಟ್ಟಕೊಂಡು ಲೀಡ್ ಸಂಸ್ಥೆ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಕಂಪ್ಯೂಟರ್ ಕೋಡಿಂಗ್ ಕಲಿಕೆಯನ್ನು ಪರಿಚಯಿಸಿದೆ. ಅಂತಾರಾಷ್ಟ್ರೀಯ ಗುಣಮಟ್ಟದ ಶಾಲೆಗಳಲ್ಲಿ ಇರುವ ಈ ಕೋಡಿಂಗ್ ಎಚ್‌ಎಸ್ಎಲ್ಎನ್ ಶಾಲೆಯಲ್ಲಿ ಪ್ರಾರಂಭವಾಗಿದೆ. ಇದರಿಂದ ಮಕ್ಕಳು ಗೇಮ್ ಆಡುವುದಿಲ್ಲ, ಬದಲಿಗೆ ಗೇಮ್, ವೆಬ್ ಸೈಟ್, ಆಪ್ಲಿಕೇಷನ್ ಕ್ರಿಯೇಟ್ ಮಾಡುವ ಕೌಶಲ್ಯ ಗಳಿಸುತ್ತಾರೆ ಎಂದು ಹೇಳಿದರು.

  English summary
  HSLN Global smart school introducing Lead academic excellence system based education model for rural students know more.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X