ಇಂಧನ ಸಚಿವರ ವಿರುದ್ಧ ದೊರೆಗೆ ಪತ್ರ ಬರೆದ ದೊರೆಸ್ವಾಮಿ
ಬೆಂಗಳೂರು, ಜ.4-ನೂತನ ಇಂಧನ ಸಚಿವ ಡಿಕೆ ಶಿವಕುಮಾರ್ ಅವರಿಗೆ, ಅತ್ತ ಅವರದೇ ಪಕ್ಷದ ಕಿರಿಯ ಸಚಿವರೊಬ್ಬರು ಯಃಕಶ್ಚಿತ್ ಸಚಿವ ಕೊಠಡಿಗಾಗಿ ಕಿರಿಕಿರಿ ಉಂಟಾಮಾಡಿದ ಸಂದರ್ಭದಲ್ಲೇ ಅಲ್ಲೇ ವಿಧಾನಸೌಧದಲ್ಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸ್ವಾತಂತ್ರ್ಯ ಹೋರಾಟಗಾರರೊಬ್ಬರು ಪತ್ರ ಬರೆದು ಶಿವಕುಮಾರ್ ಅವರನ್ನು ಸಂಪುಟ ಸೇರ್ಪಡೆಯನ್ನು ಪ್ರಶ್ನಿಸಿದ್ದಾರೆ.
ತೆರೆದ ಅಂಚೆ ಕಾರ್ಡಿನಲ್ಲಿ ಪತ್ರ ಬರೆದಿರುವ ಅವರು, 100 ವರ್ಷಗಳ ಇತಿಹಾಸ ಹೊಂದಿರುವ ಆರ್ಯ ವಿದ್ಯಾ ಶಾಲೆಯ ಆಸ್ತಿ ಕಬಳಿಸಲು ಶಿವಕುಮಾರ್ ಹಾಗೂ ಅವರ ಸೋದರ ಡಿಕೆ ಸುರೇಶ್ ಅವರಿಬ್ಬರೂ ಪ್ರಯತ್ನಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಸಹಕಾರ ಇಲಾಖೆ ನಿಬಂಧಕರು ತನಿಖೆಗೆ ಮುಂದಾಗಿದ್ದರು. ಇದನ್ನು ರದ್ದುಗೊಳಿಸುವಂತೆ ಶಿವಕುಮಾರ್ ನ್ಯಾಯಾಲಯದಲ್ಲಿ ಅರ್ಜಿ ಹಾಕಿದ್ದಾರೆ.

ಈ ಮೂಲಕ ಸಂಪುಟ ವಿಸ್ತರಣೆಯಾದ ಮೂರೇ ದಿನಕ್ಕೇ ದೊರೆಸ್ವಾಮಿ ಅವರು ಪತ್ರ ಸಮರ ನಡೆಸುವಂತಾಗಿದೆ. ಆರು ತಿಂಗಳ ಹಿಂದೆ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಶಿವಕುಮಾರ್ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳುವ ಪ್ರಯತ್ನಗಳು ನಡೆದಾಗ ಅವರ ವಿರುದ್ಧ ನ್ಯಾಯಾಲಯಗಳಲ್ಲಿ ಪ್ರಕರಣಗಳು ಇರುವುದರಿಂದ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬಾರದು ಎಂದು ದೊರೆಸ್ವಾಮಿ ಅವರು ಸಿಎಂ ಸಿದ್ದುಗೆ ಪತ್ರ ಬರೆದು ಎಚ್ಚರಿಸಿದ್ದರು.
ಆದರೆ ಹಿರಿಯರ ಮಾತನ್ನು ಧಿಕ್ಕರಿಸಿ, ಶಿವಕುಮಾರ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ. ಜತೆಗೆ ಸಿಎಂ ಸಿದ್ದರಾಮಯ್ಯ ಅವರು 'ಶಿವಕುಮಾರ್ ಕಳಂಕಿತರಲ್ಲ' ಎಂದೂ ಸರ್ಟಿಫಿಕೇಟ್ ನೀಡಿದ್ದಾರೆ. ಹೀಗಾಗಿ ದೊರಸ್ವಾಮಿ ಅವರ ಪತ್ರ ಮತ್ತೆ ಸಂಚಲವನ್ನುಂಟುಮಾಡುವ ಸಾಧ್ಯತೆ ಇದೆ. ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಅವರು ಕಳಂಕಿತರನ್ನು ತೆಗೆದುಕೊಳ್ಳದೇ ದೊರೆಸ್ವಾಮಿಯವರಂತಹ ಹಿರಿಯರ ಮಾತನ್ನು ಗೌರವಿಸುವುದಾಗಿ ಭರವಸೆ ನೀಡಿದ್ದರು. ಆದರೆ ಈಗ...












Click it and Unblock the Notifications