• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಆನ್ಲೈನ್ ನಲ್ಲಿ ಪಾಸ್ ಪೋರ್ಟ್ ಗಾಗಿ ಅರ್ಜಿ ಹಾಕುವುದು ಹೇಗೆ?

By Mahesh
|

ಬೆಂಗಳೂರು, ಮೇ 11: ಆನ್ ಲೈನ್ ನಲ್ಲಿ ಪಾಸ್ ಪೋರ್ಟ್ ಅರ್ಜಿ ಸಲ್ಲಿಸುವುದು, ಸಂದರ್ಶನಕ್ಕೆ ನೋಂದಣಿ ಮಾಡಿಕೊಳ್ಳುವ ಸುಲಭ ವಿಧಾನಗಳನ್ನು ಇಲ್ಲಿ ವಿವರಿಸಲಾಗಿದೆ. ಕೇಂದ್ರ ಸರ್ಕಾರ, ವಿದೇಶಾಂಗ ಸಚಿವಾಲಯ ನಿರ್ವಹಣೆಯ ಅಧಿಕೃತ ವೆಬ್ ತಾಣದ ಮೂಲಕ ಸರಳ ಕ್ರಮದಲ್ಲಿ ಪಾಸ್ ಪೋರ್ಟ್ ಗೆ ಅರ್ಜಿ ಹಾಕಬಹುದು.

ಹೊಚ್ಚ ಹೊಸ ಪಾಸ್ ಪೋರ್ಟ್ ಪಡೆಯಲು ಅಧಿಕೃತ ವೆಬ್ ತಾಣಕ್ಕೆ ಭೇಟಿ ಕೊಟ್ಟು, ಪಾಸ್ ಪೋರ್ಟ್ ಸೇವಾ ಆನ್ ಲೈನ್ ಪೋರ್ಟಲ್ ನಲ್ಲಿ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ. ನಂತರ ಹೊಸ ಲಾಗ್ ಇನ್ ಐಡಿ ಹಾಗೂ ಪಾಸ್ ವರ್ಡ್ ಮೂಲಕ ಲಾಗಿನ್ ಆಗಿ ಹೊಸ ಪಾಸ್ ಪೋರ್ಟ್ ಗೆ ಅಥವಾ ಮರು ನವೀಕರಣಕ್ಕಾಗಿ ಕ್ಲಿಕ್ ಮಾಡಬಹುದು. [ಆನ್ ಲೈನ್ ನಲ್ಲೇ ಪಾಸ್ ಪೋರ್ಟ್ ವೇರಿಫಿಕೇಷನ್!]

* ಈ ಲಿಂಕ್ ಕ್ಲಿಕ್ ಮಾಡಿ

* ನೋಂದಣಿ ಅರ್ಜಿಯನ್ನು ತುಂಬಿ, ನಿಮ್ಮ ಪಾಸ್ ಪೋರ್ಟ್ ಕಚೇರಿ ಆಯ್ಕೆ ಮಾಡಿಕೊಳ್ಳಿ(ಉದಾ: ಬೆಂಗಳೂರು)

* ನಿಮ್ಮ ಪೂರ್ಣ ಹೆಸರು ನಮೂದಿಸಿ (ಮೊದಲ ಹೆಸರು+ ಕೊನೆ ಹೆಸರು; ಉದಾ: ರಾಮಪ್ಪ ಭೀಮಪ್ಪ) [ಸೂಚನೆ ಹೆಸರಿನ ಮುಂದೆ Dr, Col, ಇತ್ಯಾದಿ ಬಳಸಬೇಡಿ]

* ಸರ್ ನೇಮ್ ನಮೂದಿಸಿ [ಉದಾ: ದೊಡ್ಡಮನಿ]

* ಹುಟ್ಟಿದ ದಿನಾಂಕ, ತಿಂಗಳು, ವರ್ಷ ಆಯ್ಕೆ ಮಾಡಿಕೊಳ್ಳಿ

* ನಿಮ್ಮ ಚಾಲ್ತಿಯಲ್ಲಿರುವ ಇಮೇಲ್ ಐಡಿ ನೀಡಿ

* ಮೇಲ್ಕಂಡ ಇಮೇಲ್ ಐಡಿಗೆ ಲಾಗಿನ್ ವಿವರ ಕಳಿಸಲಾಗುತ್ತದೆ. ಬೇರೆ ಇಮೇಲ್ ಐಡಿ ನೀಡಲು ಕೂಡಾ ಆಯ್ಕೆ ನೀಡಲಾಗಿದೆ.

* ನಿಮ್ಮ ಇಮೇಲ್ ಗೆ ಬಂದಿರುವ ಲಾಗಿನ್ ವಿವರಗಳನ್ನು ಪಡೆದುಕೊಂಡು ಪುನಃ ಇದೇ ಪುಟಕ್ಕೆ ಬನ್ನಿ

* ಲಾಗ್ ಐಡಿ, ಪಾಸ್ ವರ್ಡ್ ಹಾಕಿ, ಸುಳಿವು ಪ್ರಶ್ನೆ, ಉತ್ತರ ಆಯ್ಕೆ ಮಾಡಿ, captcha ಹಾಕಿ ನೋಂದಣಿ ಮಾಡಿಕೊಳ್ಳಿ.

ನೋಂದಣಿಯಾದ ಮೇಲೆ ಏನು ಮಾಡಬೇಕು?

* ನೋಂದಣಿಯಾದ ಮೇಲೆ ಪಾಸ್ ಪೋರ್ಟ್ ಸೇವಾ ಆನ್ ಲೈನ್ ಪೋರ್ಟಲ್ ಗೆ ಬಂದು ನೋಂದಾಯಿಸಿದ ಲಾಗಿನ್ ಐಡಿ ಬಳಸಿ, ಲಾಗಿನ್ ಆಗಿ.

* Apply for Fresh Passport/Re-issue of Passport ಆಯ್ಕೆ ಮಾಡಿಕೊಳ್ಳಿ.

* ವಿವರಗಳನ್ನು ತುಂಬಿ, Pay and Schedule Appointment ಕ್ಲಿಕ್ ಮಾಡಿ ಸಂದರ್ಶನದ ಸಮಯ ನಿಗದಿ ಮಾಡಿಕೊಳ್ಳಿ.

ಆನ್ ಲೈನ್ ಶುಲ್ಕ ಪಾವತಿ: [ಪಾಸ್ ಪೋರ್ಟ್ : ಪೊಲೀಸರ ಲಂಚಾವತಾರ ಬಿಚ್ಚಿಟ್ಟ ಎನ್ ಜಿಒ]

* ಕ್ರೆಡಿಟ್ ಕಾರ್ಡ್/ ಡೆಬಿಟ್ ಕಾರ್ಡ್(ಮಾಸ್ಟರ್ ಕಾರ್ಡ್ ಹಾಗೂ ವೀಸಾ)

* ಇಂಟರ್ನೆಟ್ ಬ್ಯಾಂಕಿಂಗ್ (ಎಸ್ ಬಿಐ ಹಾಗೂ ಸಂಬಂಧಿಸಿದ ಬ್ಯಾಂಕ್)

* ಎಸ್ ಬಿಐ ಬ್ಯಾಂಕ್ ಚಲನ್ ಮೂಲಕ ಮಾಡಬಹುದು.

* Print Application Receipt ಕ್ಲಿಕ್ ಮಾಡಿ ಅರ್ಜಿಯ ಗುರುತು ಸಂಖ್ಯೆ/ಸಂದರ್ಶನ ಸಂಖ್ಯೆಯನ್ನು ಪಡೆದುಕೊಳ್ಳಿ

* ನಿಗದಿತ ದಿನದಂದು ಸಂದರ್ಶನಕ್ಕೆ ಹಾಜರಾಗಿ ಸೂಕ್ತ ದಾಖಲೆ ಒದಗಿಸಿ ಪಾಸ್ ಪೋರ್ಟ್ ಪಡೆದುಕೊಳ್ಳಿ. (ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
How to register Passport Online Form and Submit through Passport Seva website maintained by Ministry of External Affairs, Government of India
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more