ಬಿಬಿಎಂಪಿ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರಿಸುವುದು ಹೇಗೆ
ಬೆಂಗಳೂರು, ಸೆಪ್ಟೆಂಬರ್ 19 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅಕ್ಟೋಬರ್ 15ರ ತನಕ ಅವಕಾಶ ನೀಡಿದೆ. ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಲಾಗಿದೆ.
ಹೊಸ ಮತದಾರರು, ಮತದಾರರ ಪಟ್ಟಿಯಲ್ಲಿ ತಿದ್ದುಪಡಿ ಇರುವವರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. 2002ರ ಫೆಬ್ರವರಿಯಿಂದ 2003ರ ಜನವರಿ ತನಕ ಜನಿಸಿದವರು ಹೆಸರುಗಳನ್ನು ಸೇರಿಸಬಹುದಾಗಿದೆ.
ನಮೂನೆ 8ರಲ್ಲಿ ತಿದ್ದುಪಡಿಗಾಗಿ ಹೆಸರು/ತಂದೆಯ ಹೆಸರು/ ಲಿಂಗ/ಹುಟ್ಟಿದ ದಿನಾಂಕ/ಫೋಟೋ/ವಿಳಾಸ ಬದಲಾವಣೆಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ನಮೂನೆ 7ರಲ್ಲಿ ಸ್ಥಳ ಬದಲಾವಣೆಗಾಗಿ ಮತ್ತು ಮರಣ ಹೊಂದಿದ ವ್ಯಕ್ತಿಯ ಹೆಸರು ತೆಗೆದುಹಾಕಲು ಅರ್ಜಿಗಳನ್ನು ಸಲ್ಲಿಸಬಹುದು.
ನಮೂನೆ 6ರಲ್ಲಿ ಹುಟ್ಟಿದ ದಿನಾಂಕ/ ವಯಸ್ಸಿನ ದೃಢೀಕರಣ/ವಿಳಾಸ ದೃಢೀಕರಣಕ್ಕೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವಾಗ 2 ಪಾಸ್ ಪೋರ್ಟ್ ಅಳತೆಯ ಫೋಟೋಗಳನ್ನು ನೀಡಬೇಕು.
ಯಾವ-ಯಾವ ದಾಖಲೆಬೇಕು? : ಜನರು ಅರ್ಜಿಗಳನ್ನು ಸಲ್ಲಿಸುವಾಗ ಕೆಳಕಂಡ ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ತರಬೇಕಾಗುತ್ತದೆ.
* ಪಾಸ್ ಪೋರ್ಟ್
* ಡ್ರೈವಿಂಗ್ ಲೈಸೆನ್ಸ್
* ಆಧಾರ್ ಕಾರ್ಡ್
* ಪಡಿತರ ಚೀಟಿ
* ಸರ್ಕಾರಿ/ ಅರೆ ಸರ್ಕಾರಿ ನೌಕರರು ಹೊಂದಿರುವ ಗುರುತಿನ ಚೀಟಿ
* ಬ್ಯಾಂಕ್ ಪಾಸ್ ಪುಸ್ತಕ
* ರೈತರ ಗುರುತಿನ ಚೀಟಿ
* ಚುನಾವಣಾ ಆಯೋಗ ಅನುಮೋದಿಸಿರುವ ಯಾವುದೇ ಇತರ ದಾಖಲೆಗಳು
ಪರಿಷ್ಕರಣೆ ಎಲ್ಲೆಲ್ಲಿ? : ಜನರು ಮತದಾರರಪಟ್ಟಿಗೆ ಹೆಸರು ಸೇರಿಸುವುದು, ತಿದ್ದುಪಡಿಗಾಗಿ ಎಲ್ಲಿ ಅರ್ಜಿಗಳನ್ನು ಸಲ್ಲಿಸಬೇಕು.
* ಸಾಮಾನ್ಯ ಸೇವಾ ಕೇಂದ್ರ
* ಮತದಾರರ ನೋಂದಣಿ ಅಧಿಕಾರಿಗಳ ಕಚೇರಿಯ ಮತದಾರರ ಪೂರಕ ಕೇಂದ್ರ
* ಬೆಂಗಳೂರು ಒನ್
* ಕರ್ನಾಟಕ ಒನ್
* ಅಟಲ್ ಜನ ಸ್ನೇಹಿ ಕೇಂದ್ರ
* ಬಾಪೂಜಿ ಸೇವಾ ಕೇಂದ್ರ
* ಮತಗಟ್ಟೆ ಅಧಿಕಾರಿ (ಬಿ.ಎಲ್.ಒ)
ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ವೇಳೆ ಯಾವುದೇ ಪ್ರಶ್ನೆಗಳಿಗೆ ಉತ್ತರ ಬೇಕಾದಲ್ಲಿ 1950 ನಂಬರ್‌ಗೆ ಕರೆ ಮಾಡಬಹುದು. ಪರಿಷ್ಕರಣೆ ಪ್ರಕ್ರಿಯೆ ಅಕ್ಟೋಬರ್ 15, 2019 ರಂದು ಕೊನೆಗೊಳ್ಳುತ್ತದೆ.












Click it and Unblock the Notifications