Traffic Warden Bengaluru: ಬೆಂಗಳೂರಿನಲ್ಲಿ ಟ್ರಾಫಿಕ್ ವಾರ್ಡನ್ ಆಗಬೇಕೆ? ಅರ್ಜಿ ಸಲ್ಲಿಕೆ ಹೇಗೆ? ಅರ್ಹತೆ ಏನು? ಪರಿಶೀಲಿಸಿ

ಬೆಂಗಳೂರು, ಜುಲೈ 13: ಬೆಂಗಳೂರು ಮಹಾನಗರ ಟ್ರಾಫಿಕ್‌ ಸಮಸ್ಯೆಯಿಂದ ಬಳಲುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದನ್ನು ನಿಯಂತ್ರಿಸಲು ಬೆಂಗಳೂರು ನಗರ ಪೊಲೀಸ್ ಟ್ರಾಫಿಕ್ ವಾರ್ಡನ್ ಆರ್ಗನೈಸೇಶನ್ (BCPTWO) ಹೊಸ ಪ್ರಕ್ರಿಯೆ ಆರಂಭಿಸಿದೆ. ಟ್ರಾಫಿಕ್ ವಾರ್ಡನ್ ಆಗಲು ಬಯಸುವವರಿಗಾಗಿ ಅರ್ಜಿಯನ್ನು ಆಹ್ವಾನಿಸಿದೆ.

BCPTWO ಎಂಬುದು ನಗರ ಪೊಲೀಸರಿಗೆ ಸಹಾಯ ಮಾಡಲು 1985 ರಲ್ಲಿ ಸ್ಥಾಪಿಸಲಾದ ಸ್ವಯಂಸೇವಾ ಸಂಸ್ಥೆಯಾಗಿದೆ. ಪ್ರಸ್ತುತ, BCPTWO ನಲ್ಲಿ 900 ವಾರ್ಡನ್‌ಗಳಿದ್ದು, ಅವರು ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲು ಪೊಲೀಸರಿಗೆ ಸಹಾಯ ಮಾಡುತ್ತಾರೆ.

How to Become traffic Warden In Bengaluru? How to Apply, Eligibility Criteria

ಟ್ರಾಫಿಕ್ ವಾರ್ಡನ್ ಆಗಲು ಅರ್ಜಿ ಸಲ್ಲಿಸಬೇಕಾದ ವಿಧಾನ ಇಲ್ಲಿದೆ...

ಅರ್ಹತೆ ಏನು?

ಪೊಲೀಸರ ಪ್ರಕಾರ, ಟ್ರಾಫಿಕ್ ವಾರ್ಡನ್ ಆಗಲು 25 ರಿಂದ 55 ವರ್ಷ ವಯಸ್ಸಿನ ಒಳಗಿರಬೇಕು. ಪಿಯುಸಿ ಪಾಸ್ ಪ್ರಮಾಣ ಪತ್ರವನ್ನು ಹೊಂದಿರಬೇಕು.

ಅರ್ಹತೆ ಪಡೆಯಲು, ಅರ್ಜಿದಾರರು ಯಾವುದೇ ಕ್ರಿಮಿನಲ್ ಪ್ರಕರಣಗಳ ಹಿನ್ನೆಲೆಯನ್ನು ಹೊಂದಿರಬಾರದು. ಅರ್ಜಿದಾರರು ಬೆಂಗಳೂರಿನ ನಿವಾಸಿಯಾಗಿರಬೇಕು.

ಯಾವ ದಾಖಲೆಗಳು ಬೇಕಾಗುತ್ತವೆ?

ಅರ್ಜಿ ಸಲ್ಲಿಸಲು ಬಯಸುವವರು ಆಧಾರ್ ಕಾರ್ಡ್, ಶಿಕ್ಷಣ ಪ್ರಮಾಣಪತ್ರ, ವೋಟರ್‌ ಐಡಿ ಅಥವಾ ಚಾಲಕರ ಪರವಾನಗಿ ಮತ್ತು ಮೂರು ಪಾಸ್‌ಪೋರ್ಟ್ ಗಾತ್ರದ ಫೋಟೋಗಳನ್ನು ಸಲ್ಲಿಸಬೇಕು.

How to Become traffic Warden In Bengaluru? How to Apply, Eligibility Criteria

ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಪ್ರಕ್ರಿಯೆ ಏನು?

ಆಸಕ್ತರು +91 9900024950 ಗೆ ಸಂದೇಶವನ್ನು ಕಳುಹಿಸಬೇಕು. ಅರ್ಹತೆಯನ್ನು ಹೊಂದಿನ ನಂತರ, ಸಂದರ್ಶನ ಮತ್ತು ಪೊಲೀಸ್ ಪರಿಶೀಲನೆ ಇರುತ್ತದೆ. ನಂತರ ತರಬೇತಿ ನೀಡಲಾಗುತ್ತದೆ. ಕೊನೆಯದಾಗಿ, ಟ್ರಾಫಿಕ್ ವಾರ್ಡನ್ ಆಗಲು ಪ್ರಮಾಣ ಪತ್ರ ನೀಡಲಾಗುತ್ತದೆ.

ಬೆಂಗಳೂರು ಸಂಚಾರ ಪೊಲೀಸರ ಪ್ರಕಾರ, ವಾರ್ಡನ್‌ಗಳು ವಾರಕ್ಕೆ ಕನಿಷ್ಠ ನಾಲ್ಕು ಗಂಟೆಗಳ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಭಾನುವಾರದಂದು ತಿಂಗಳಿಗೊಮ್ಮೆ (ಎರಡು ಗಂಟೆಗಳ) ಪರೇಡ್‌ಗೆ ಹಾಜರಾಗಬೇಕಾಗತ್ತದೆ. ವಲಯ ಮತ್ತು ವಿಭಾಗ ಸಭೆಗಳಿಗೆ ಹಾಜರಾಗಬೇಕಾಗುತ್ತದೆ.

How to Become traffic Warden In Bengaluru? How to Apply, Eligibility Criteria

ಪೊಲೀಸ್ ಆಯುಕ್ತರು ಟ್ರಾಫಿಕ್ ವಾರ್ಡನ್ ಸಂಸ್ಥೆಯ ಮುಖ್ಯ ಪೋಷಕರಾಗಿದ್ದಾರೆ. ಸಂಸ್ಥೆಯಲ್ಲಿ ವೈದ್ಯರು, ಇಂಜಿನಿಯರ್‌ಗಳು, ವಕೀಲರು, ಶಿಕ್ಷಕರು, ಬ್ಯಾಂಕ್ ಉದ್ಯೋಗಿಗಳು, ಸರ್ಕಾರಿ ನೌಕರರು, ಉದ್ಯಮಿಗಳು, ಕೈಗಾರಿಕೋದ್ಯಮಿಗಳು, ಐಟಿ ಮತ್ತು ಬಿಟಿ ವೃತ್ತಿಪರರು ಮುಂತಾದವರಿದ್ದಾರೆ.

ಸಂಸ್ಥೆಗೆ ಮತ್ತು ಸಾರ್ವಜನಿಕರಿಗೆ ಸೇವೆ ಸಲ್ಲಿಸುವ ಏಕೈಕ ಆಸಕ್ತಿಯಿಂದ ಸ್ವಯಂಪ್ರೇರಣೆಯಿಂದ ಈ ಸಂಸ್ಥೆಯನ್ನು ಸೇರಿದ್ದಾರೆ. ಈ ಟ್ರಾಫಿಕ್ ವಾರ್ಡನ್‌ಗಳು ವಾರದಲ್ಲಿ ಎರಡು ಬಾರಿ ತಮ್ಮ ಪ್ರದೇಶದಲ್ಲಿ ಕರ್ತವ್ಯಗಳನ್ನು ನಿರ್ವಹಿಸುತ್ತಾರೆ. ವಾರವಿಡೀ ಅವರಲ್ಲಿ ಕೆಲವರು ಟ್ರಾಫಿಕ್ ಪೊಲೀಸರಿಗೆ ಸಹಾಯ ಮಾಡುತ್ತಾರೆ. ಅವರು ಕ್ರಿಕೆಟ್ ಪಂದ್ಯ, ಏರ್ ಶೋ, ಧಾರ್ಮಿಕ ಕಾರ್ಯಕ್ರಮಗಳಂತಹ ವಿಶೇಷ ಕರ್ತವ್ಯಗಳಲ್ಲಿ ಭಾಗವಹಿಸುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+