ಕನ್ನಡ ವ್ಯಾಕರಣದ ಬಗ್ಗೆ ನಿಮಗೆಷ್ಟು ಗೊತ್ತು?
ಬೆಂಗಳೂರು, ಏಪ್ರಿಲ್ 10: ಲೇಖಕ ವಸಂತ್ ಶೆಟ್ಟಿ ಅವರ ಮುನ್ನೋಟ ಮಳಿಗೆಯಲ್ಲಿ ಕನ್ನಡ ವ್ಯಾಕರಣದ ಬಗ್ಗೆ ನಿಮಗೆಷ್ಟು ಗೊತ್ತು ಎನ್ನುವ ಅರಿಮೆ ಕಾರ್ಯಕ್ರಮವನ್ನು ಏಪ್ರಿಲ್ 15 ರಂದು ಹಮ್ಮಿಕೊಂಡಿದೆ.
ಕನ್ನಡದ ವ್ಯಾಕರಣ ಎಂದು ಬರಹದಲ್ಲಿ ಕಲಿಸಲಾಗುವ ಇಂದಿನ ವ್ಯಾಕರಣ ನಿಜಕ್ಕೂ ಕನ್ನಡದ ಸ್ವರೂಪವನ್ನು ಸರಿಯಾಗಿ ಬಣ್ಣಿಸುತ್ತಿದೆಯೇ? ಈ ಬಗ್ಗೆ ಬಹಳ ಹಿಂದಿನಿಂದ ಸಂಶೋಧನೆ ಮಾಡುತ್ತಾ ಬಂದಿರುವ ಡಾ.ಡಿ. ಎನ್. ಶಂಕರ ಭಟ್ಟರು ಕನ್ನಡಕ್ಕೆ ಕನ್ನಡದ್ದೇ ವ್ಯಾಕರಣವನ್ನು ಬರೆಯುವ ಪ್ರಯತ್ನವನ್ನು 'ಕನ್ನಡ ಬರಹದ ಸೊಲ್ಲರಿಮೆ' ಎಂಬ ಹಲವು ಕಂತುಗಳ ಹೊತ್ತಗೆಯ ಮೂಲಕ ಮಾಡುತ್ತಿರುವರು. ಕಾರ್ಯಕ್ರಮ ಬೆಳಗ್ಗೆ 11.30ಕ್ಕೆ ಪ್ರಾರಂಭವಾಗಲಿದೆ.
ಈಗಾಗಲೇ ಈ ಹೊತ್ತಗೆಯ ಐದು ಕಂತುಗಳು ಹೊರಬಂದಿವೆ ಮತ್ತು ಇದೀಗ ಕನ್ನಡದಲ್ಲಿ ವಾಕ್ಯಗಳ ರಚನೆ ಕುರಿತು ಚರ್ಚಿಸಲಾಗಿರುವ ಆರನೇ ಕಂತು ಹೊರಬಂದಿದೆ.

ಕನ್ನಡಕ್ಕೆ ಕನ್ನಡದ್ದೇ ವ್ಯಾಕರಣದ ಅವಶ್ಯಕತೆಯ ಬಗ್ಗೆ ಮತ್ತು ಕನ್ನಡದ ವಾಕ್ಯಗಳ ಜೋಡಣೆಯಲ್ಲಿ ಎಂತಹ ಕಟ್ಟಲೆಗಳು ಒಪ್ಪಿತವಾಗುತ್ತವೆ ಎಂಬುದರ ಬಗ್ಗೆ ಈ ಹೊತ್ತಗೆಯಲ್ಲಿನ ವಾದಗಳ ಕುರಿತು ಒಂದು ಪರಿಚಯ ನೀಡುವ ಮಾತುಕತೆಯನ್ನು ಕನ್ನಡ ನುಡಿಯರಿಮೆಯ ಕುರಿತು ಆಳವಾದ ಓದು ಮತ್ತು ತಿಳುವಳಿಕೆ ಹೊಂದಿರುವ ಸಂದೀಪ್ ಕಂಬಿ ಅವರು ನಡೆಸಿಕೊಡಲಿದ್ದಾರೆ.
ಏನು-ಕನ್ನಡ ವ್ಯಾಕರಣದ ಬಗ್ಗೆ ನಿಮಗೆಷ್ಟು ಗೊತ್ತು?
ಎಲ್ಲಿ-ಮುನ್ನೋಟ, ನಂ.67, ಸೌತ್ ಅವೆನ್ಯೂ ಕಾಂಪ್ಲೆಕ್ಸ್, ಡಿವಿಜಿ ರಸ್ತೆ, ನಾಗಸಂದ್ರ ಸರ್ಕಲ್ ಬಳಿ, ಬಸವನಗುಡಿ
ಯಾವಾಗ-ಏಪ್ರಿಲ್ 15, ಭಾನುವಾರ ಬೆಳಗ್ಗೆ 11.30












Click it and Unblock the Notifications