ಚುನಾವಣಾ ಆಯೋಗ: ಹೋಟೆಲ್, ಮಾಲ್ ಮಾಲೀಕರ ಜತೆಗಿನ ಸಭೆ ರದ್ದು
ಬೆಂಗಳೂರು, ಮಾರ್ಚ್ 31: ಮತದಾನ ಮಾಡಿರಿ ಹೋಟೆಲ್ ಹಾಗೂ ಮಾಲ್ ನಲ್ಲಿ ರಿಯಾಯಿತಿ ಪಡೆಯಿರಿ ಈ ವಿಷಯ ಕುರಿತು ಚುನಾವಣಾ ಆಯೋಗವು ಹೋಟೆಲ್ ಮಾಲಿಕರೊಂದಿಗೆ ಹಮ್ಮಿಕೊಂಡಿದ್ದ ಸಭೆ ರದ್ದಾಗಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು
ಮತದಾನ ನಡೆಯುವುದು ತಿಂಗಳ ಎರಡನೇ ಶನಿವಾರ ಆಗಿದ್ದು ಸಾಕಷ್ಟು ಕಚೇರಿಗಳಿಗೆ ರಜೆ ಇರುತ್ತದೆ.ಹಾಗಾಗಿ ಹೆಚ್ಚು ಜನರು ಮತದಾನ ಮಾಡಲು ಬರುವುದಕ್ಕೆ ಹಿಂಜರಿಯುತ್ತಾರೆ ಎಂದು ಭಾವಿಸಿ ಚುನಾವಣಾ ಆಯೋಗವು ಮತದಾನ ಮಾಡಿ ಹೋಟೆಲ್ ಮತ್ತು ಮಾಲ್ ಗಳಲ್ಲಿ ರಿಯಾಯಿತಿ ಪಡೆಯಿರಿ ಎಂದು ಘೋಷಣೆ ಹೊರಹಾಕಿದ್ದರು.
ಮಾಲ್ ಮತ್ತು ಹೋಟೆಲ್‌ಗಳಲ್ಲಿ ಮತದಾನದ ದಿನ ಮತ ಚಲಾಯಿಸಿದವರು ಹೆಬ್ಬೆಟ್ಟಿನ ಶಾಯಿ ತೋರಿಸಿದವರಿಗೆ ರಿಯಾಯ್ತಿ ನೀಡಲು ಮನವಿ ಮಾಡುವ ಬಗ್ಗೆ ಚಿಂತನೆ ನಡೆಸಿತ್ತು. ಅದರಂತೆ ಮಾಲಿಕರೊಂದಿಗೆ ಸಭೆ ನಡೆಸಲು ತೀರ್ಮಾನಿಸಲಾಗಿತ್ತು.

ಶನಿವಾರ ಐಟಿಪಿ ಸಭಾಂಗಣದಲ್ಲಿ ನಡೆಯಬೇಕಿದ್ದ ಸಭೆಯನ್ನು ಯಾವುದೋ ಹೋಟೆಲ್ ಅಥವಾ ಮಾಲ್ ಮಾಲೀಕರು ಇಂಥದ್ದೇ ಪಕ್ಷಗಳಿಗೆ ಮತ ಚಲಾಯಿಸಿದರೆ ರಿಯಾಯಿತಿ ನೀಡುವುದಾಗಿ ಆಮಿಷವೊಡ್ಡುವ ಸಾಧ್ಯತೆ ಇರುವ ಕಾರಣ ಸಭೆ ದಿಢೀರ್ ರದ್ದಾಗಿದೆ.
ಬಹುತೇಕ ಎಲ್ಲಾ ಮಾಲ್ ಮತ್ತು ಹೋಟೆಲ್ ಮಾಲೀಕರು ವಿವಿಧ ರಾಜಕೀಯ ಪಕ್ಷಗಳ ಜತೆಗೆ ಗುರುತಿಸಿಕೊಂಡಿದ್ದಾರೆ. ಆದರೆ ಮತದಾನ ಹೆಚ್ಚಿಸುವ ಕುರಿತಂತೆ ಸಾರ್ವಜನಿಕರ ಮನವೊಳಿಸಲು ಹೋಟೆಲ್ ಮತ್ತು ಮಾಲ್ ಮಾಲೀಕರಿಗೆ ಈ ನಿಟ್ಟಿನಲ್ಲಿ ಸಹಕಾರ ನೀಡುವಂತೆ ಚುನಾವಣಾ ಆಯೋಗದಿಂದಲೇ ನೋಟಿಸ್ ನೀಡಲು ತೀರ್ಮಾನಿಸಲಾಗಿದೆ.











Click it and Unblock the Notifications