ಬೆಂಗಳೂರು; ಹೋಂ ಐಸೋಲೇಷನ್‌ಗೆ ಹೊಸ ನಿಯಮ

ಬೆಂಗಳೂರು, ಮೇ 27; ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೈಕ್ರೋ ಕಂಟೈನ್ಮೆಂಟ್ ಝೋನ್ ಮಾರ್ಗಸೂಚಿಯನ್ನು ಪರಿಷ್ಕರಣೆ ಮಾಡಿದೆ. ಕೋವಿಡ್ ಸೋಂಕಿನ ಲಕ್ಷಣಗಳು, ಸೌಮ್ಯ ಲಕ್ಷಣಗಳು ಇರುವ ಜನರು ಹೋಂ ಐಸೋಲೇಷನ್‌ನಲ್ಲಿ ಚಿಕಿತ್ಸೆ ಪಡೆಯಬಹುದು.

ಕೋವಿಡ್ ಸೋಂಕಿತರು ಹೋಂ ಐಸೋಲೇಷನ್‌ನಲ್ಲಿ ಇರುವ ಮನೆಗಳಿಗೆ ಕೆಂಪು ಟೇಪ್ ಕಟ್ಟಲಾಗುತ್ತದೆ. 14 ದಿನದ ಹೋಂ ಕ್ವಾರಂಟೈನ್ ಎಂಬ ಬ್ಯಾನರ್‌ ಅನ್ನು ಮನೆಗೆ ಹಚ್ಚಲಾಗುತ್ತದೆ.

ಪಶ್ಚಿಮ ಮತ್ತು ದಕ್ಷಿಣ ವಲಯದ ಕೆಲವು ಮನೆಗಳಿಗೆ ಈಗಾಗಲೇ ಬಿಬಿಎಂಟಿ ಟೇಪ್ ಕಟ್ಟಿದೆ ಮತ್ತು ಮನೆಯಲ್ಲಿ ಹೋಂ ಐಸೋಲೇಷನ್‌ನಲ್ಲಿರುವ ವ್ಯಕ್ತಿಗಳ ಕೈಗೆ ಸೀಲ್ ಹಾಕಿದೆ.

Home Isolation Covid Patients House Red Taped

ಕೇವಲ ಟೇಪ್ ಕಟ್ಟುವುದು ಮಾತ್ರವಲ್ಲ ಪಾಲಿಕೆ ಸಿಬ್ಬಂದಿಗಳು ಆ ಕಟ್ಟಡ ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಸ್ಯಾನಿಟೈಸ್ ಮಾಡುತ್ತಾರೆ. ಹೋಂ ಐಸೋಲೇಷನ್‌ನಲ್ಲಿರುವ ಪ್ರತಿ ರೋಗಿಯ ಮನೆಗೂ ಈಗ ಟೇಪ್ ಕಟ್ಟಲಾಗುತ್ತದೆ.

ಹೀಗೆ ಟೇಪ್ ಕಟ್ಟಿ, ಬ್ಯಾನರ್ ಹಾಕುವ ಮೂಲಕ ಅಕ್ಕ-ಪಕ್ಕದ ಮನೆಯವರಲ್ಲಿಯೂ ಜಾಗೃತಿ ಮೂಡಿಸಲಾಗುತ್ತದೆ. ಹಲವು ಸಂದರ್ಭದಲ್ಲಿ ಪಕ್ಕದ ಮನೆಯಲ್ಲಿಯೇ ಸೋಂಕಿತರು ಇದ್ದರೆ ನೆರೆಹೊರೆಯವರಿಗೆ ತಿಳಿಯುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ವಾರ್ಡ್‌ ಮಟ್ಟದಲ್ಲಿ ತಂಡವನ್ನು ರಚನೆ ಮಾಡಲಾಗಿದ್ದು, ಈ ತಂಡ ಹೋಂ ಐಸೋಲೇಷನ್‌ನಲ್ಲಿರುವ ವ್ಯಕ್ತಿಗಳ ಮನೆಗಳನ್ನು ಪತ್ತೆ ಮಾಡಲಿದೆ. ಆಶಾ ಕಾರ್ಯಕರ್ತೆ ಸಹ ಮನೆಗೆ ಭೇಟಿ ನೀಡಿ ಅಗತ್ಯ ಮಾಹಿತಿಗಳನ್ನು ಪಡೆಯಲಿದ್ದಾರೆ.

ಮೇ 26ರ ವರದಿಯಂತೆ ಬೆಂಗಳೂರು ನಗರದಲ್ಲಿ 6433 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ನಗರದಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 207357.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+