ಓಲಾ ಉಬರ್‌ಗೆ ಸೆಡ್ಡು: ಬೆಂಗಳೂರಿನ ನಮ್ಮ ಯಾತ್ರಿ ಯಶಸ್ವಿ ಪ್ರಯಾಣ
ಹರಿಯಾಣ, ಜುಲೈ 13: ಕಾಪೋರೇಟ್ ಕಂಪೆನಿಗಳಾದ ಓಲಾ, ಉಬರ್‌ಗಳಿಗೆ ಸೆಡ್ಡು ಹೊಡೆದು ಕಳೆದ ಕೆಲವು ತಿಂಗಳ ಹಿಂದಷ್ಟೇ ಆರಂಭಗೊಂಡ ಬೆಂಗಳೂರು ಆಟೋ-ರಿಕ್ಷಾ ಚಾಲಕರ ಸ್ವಂತ ರೈಡ್-ಹೇಲಿಂಗ್ ಅಪ್ಲಿಕೇಶನ್ ನಮ್ಮ ಯಾತ್ರಿ 50 ಪಟ್ಟು ಹೆಚ್ಚಳದೊಂದಿಗೆ ಅಭೂತಪೂರ್ವ ಯಶಸ್ಸಿನ ಸವಾರಿ ನಡೆಸುತ್ತಿದೆ.
ನಮ್ಮ ಯಾತ್ರಿ ಅಪ್ಲಿಕೇಶನ್ ಅನ್ನು ನವೆಂಬರ್ 2022 ರಲ್ಲಿ ಕೇಂದ್ರ ಸರ್ಕಾರದ ಓಪನ್ ನೆಟ್‌ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ (ONDC) ಪ್ಲಾಟ್‌ಫಾರ್ಮ್‌ನಲ್ಲಿ ಪ್ರಾರಂಭಿಸಲಾಯಿತು. ಇದು ಶೂನ್ಯ ಕಮಿಷನ್‌ನೊಂದಿಗೆ ಚಾಲಕರನ್ನು ಮತ್ತು ನ್ಯಾಯಯುತ ಬೆಲೆಯೊಂದಿಗೆ ಸವಾರರನ್ನು ಆಕರ್ಷಿಸಿತು ಎಂದು ಡಿಎಚ್ ವರದಿ ಮಾಡಿದೆ.

ಆರಂಭದಲ್ಲಿ ಇದಕ್ಕೆ ಸಾಕಷ್ಟು ವಿರೋಧಿಗಳಿದ್ದರು. ಸವಾರರಷ್ಟೇ ಅಲ್ಲ, ಹೆಚ್ಚಿನ ಚಾಲಕರು ಕೂಡ ನಮ್ಮ ಯಾತ್ರಿಯಿಂದ ದೂರ ಉಳಿದಿದ್ದರು. ಓಲಾ ಮತ್ತು ಉಬರ್‌ನಂತಹ ರೈಡ್-ಹೇಲಿಂಗ್ ಆಪ್‌ಗಳ ವಿರುದ್ಧ ಇದಕ್ಕೆ ಈಜುವ ಅವಕಾಶವಿದೆ ಎಂದು ಕೆಲವರು ಭಾವಿಸಿದ್ದರು. ಆದರೆ ಒಂಬತ್ತು ತಿಂಗಳ ನಂತರ ಚಿತ್ರಣವು ಕ್ರಮೇಣ ಬದಲಾಗಿದೆ.
ನಮ್ಮ ಯಾತ್ರಿ ಈಗ ಪ್ರತಿದಿನ ಸುಮಾರು 70,000 ಆಟೋ ಟ್ರಿಪ್‌ಗಳನ್ನು ಮಾಡುತ್ತಿದೆ. ಬೆಂಗಳೂರಿನಲ್ಲಿ ರೈಡ್-ಹೇಲಿಂಗ್ ಅಪ್ಲಿಕೇಶನ್‌ಗಳಿಂದ ಮಾಡುತ್ತಿದ್ದ 4.28 ಲಕ್ಷ ಆಟೋ ಟ್ರಿಪ್‌ಗಳಲ್ಲಿ ಸುಮಾರು 17 ಪ್ರತಿಶತವನ್ನು ಇದು ಮಾಡುತ್ತಿದೆ. ಎಲ್ಲಾ ಆಟೋ ಡ್ರೈವರ್‌ಗಳಲ್ಲಿ ಅರ್ಧದಷ್ಟು ಜನರು ಈಗ ನಮ್ಮ ಯಾತ್ರಿ ಅಪ್ಲಿಕೇಶನ್ ಬಳಸುತ್ತಿದ್ದಾರೆ.

ಅಪ್ಲಿಕೇಶನ್ ನವೆಂಬರ್‌ನಿಂದ ದೈನಂದಿನ ಪ್ರವಾಸಗಳಲ್ಲಿ 70ರಷ್ಟು ಮತ್ತು ಜನವರಿಯಿಂದ 50ರಷ್ಟು ಟ್ರಿಪ್‌ಗಳ ಹೆಚ್ಚಳವನ್ನು ಕಂಡಿದೆ. ನಮ್ಮ ಯಾತ್ರಿಯ ಹೆಚ್ಚುತ್ತಿರುವ ಜನಪ್ರಿಯತೆಯು ಈಗ ಓಲಾ, ಉಬರ್‌ನಂತಹ ಕಂಪೆನಿಗಳ ನಿದ್ದೆಗೆಡಿಸಿದೆ. ಇದರಿಂದ ಈ ಆ್ಯಪ್ ಸಾರಿಗೆ ಇಲಾಖೆಯಿಂದ ಅಗ್ರಿಗೇಟರ್ ಪರವಾನಗಿಯನ್ನು ಏಕೆ ತೆಗೆದುಕೊಂಡಿಲ್ಲ ಮತ್ತು ಸವಾರಿ ದರಗಳ ಮೇಲೆ ಜಿಎಸ್‌ಟಿಯನ್ನು ಏಕೆ ಪಾವತಿಸುವುದಿಲ್ಲ ಎಂದು ವಿಮರ್ಶಕರು ಕೇಳುತ್ತಿದ್ದಾರೆ.
ಬೆಂಗಳೂರಿನಲ್ಲಿ ಇ-ಕಾಮರ್ಸ್ ಆಪರೇಟರ್‌ಗಳು (ಇಸಿಒಗಳು) ನೀಡುವ ಆಟೋ-ರಿಕ್ಷಾ ಸೇವೆಗಳ ಮೇಲಿನ ಜಿಎಸ್‌ಟಿಯ ಅನ್ವಯದ ಕುರಿತು ಸ್ಪಷ್ಟತೆ ಪಡೆಯಲು ಉಬರ್ ಇತ್ತೀಚೆಗೆ ಜಿಎಸ್‌ಟಿ ಕೌನ್ಸಿಲ್ ಅನ್ನು ಸಂಪರ್ಕಿಸಿದೆ ಮತ್ತು ನಮ್ಮ ಯಾತ್ರಿ ವಿರುದ್ಧ ಸೆಣಸಲು ಅಖಾಡಕ್ಕಿಳಿದಿದೆ ಎಂದು ಕಂಪನಿಯ ಮೂಲಗಳು ತಿಳಿಸಿವೆ.
ಉದ್ಯಮದ ಮೂಲಗಳ ಪ್ರಕಾರ, ಜಿಎಸ್‌ಟಿ ಕೌನ್ಸಿಲ್‌ನ ಮಹಾನಿರ್ದೇಶಕರು ನಮ್ಮ ಯಾತ್ರಿ ಅವರಿಂದ ಸ್ಪಷ್ಟೀಕರಣವನ್ನು ಕೇಳಿದ್ದು, ಕಂಪನಿಯು ಪ್ರತಿಕ್ರಿಯೆಯನ್ನು ಒದಗಿಸಿದೆ ಎನ್ನಲಾಗಿದೆ. ಆಟೋ ರಿಕ್ಷಾ ಡ್ರೈವರ್ಸ್ ಯೂನಿಯನ್ (ARDU) ಸಹಯೋಗದೊಂದಿಗೆ ನಮ್ಮ ಯಾತ್ರಿ ನಡೆಸುತ್ತಿರುವ ಬೆಂಗಳೂರು-ಪ್ರಧಾನ ಕಚೇರಿಯ ಜಸ್ಪೇ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಸಂಪನ್ಮೂಲ ವ್ಯಕ್ತಿಯೊಬ್ಬರು ಈ ಆಪ್ ತನ್ನ ಸ್ಪರ್ಧಿಗಳಿಗಿಂತ ಏಕೆ ಭಿನ್ನವಾಗಿದೆ ಎಂಬುದನ್ನು ವಿವರಿದ್ದಾರೆ.
ನಾವು B2B SaaS (ಸಾಫ್ಟ್‌ವೇರ್ ಸೇವೆಯಾಗಿ) ಪೂರೈಕೆದಾರರಾಗಿದ್ದೇವೆ. ನಮ್ಮ ಗ್ರಾಹಕರು ಆಟೋ ಚಾಲಕರು, ಸವಾರರಲ್ಲ. ತಂತ್ರಜ್ಞಾನವನ್ನು ಒದಗಿಸುವುದನ್ನು ಹೊರತುಪಡಿಸಿ ನಮಗೆ ಯಾವುದೇ ಪಾತ್ರವಿಲ್ಲ. ನಾವು ಚಾಲಕನಿಗೆ ಯಾವುದೇ ಕಮಿಷನ್ ವಿಧಿಸುವುದಿಲ್ಲ. ಅದಕ್ಕಾಗಿಯೇ ನಾವು ಜಿಎಸ್‌ಟಿ ಪಾವತಿಸಲು ಜವಾಬ್ದಾರರಾಗಿರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಪರವಾನಗಿ ಅಗತ್ಯತೆಗಳಿಗೆ ಸಂಬಂಧಿಸಿದಂತೆ, ಉಬರ್ ಮತ್ತು ಓಲಾ ಸೇರಿದಂತೆ ಯಾವುದೇ ರೈಡ್-ಹೇಲಿಂಗ್ ಸಂಸ್ಥೆಗೆ ಅಗ್ರಿಗೇಟರ್ ಪರವಾನಗಿ ನೀಡಲಾಗಿಲ್ಲ. ಪ್ರಕರಣ ಕರ್ನಾಟಕ ಹೈಕೋರ್ಟ್‌ನಲ್ಲಿದೆ. ನ್ಯಾಯಾಲಯ ತೀರ್ಪು ನೀಡಿದ ನಂತರವೇ ಕ್ರಮ ಕೈಗೊಳ್ಳುತ್ತೇವೆ ಎಂದು ಸಾರಿಗೆ ಇಲಾಖೆ ಕಾರ್ಯದರ್ಶಿ ಎನ್‌ವಿ ಪ್ರಸಾದ್ ಹೇಳಿದ್ದಾರೆ.
ಆರಂಭಿಕ ತಿಂಗಳುಗಳಲ್ಲಿ ನಮ್ಮ ಯಾತ್ರಿಯಲ್ಲಿ ಕೆಲಸ ಮಾಡಿದ ನಗರ ಚಲನಶೀಲ ತಜ್ಞ ಸತ್ಯ ಅರಿಕುತರಮ್, ಇದು ಸಮುದಾಯ-ಚಾಲಿತ ಆಗಿರುವುದರಿಂದ ಅಪ್ಲಿಕೇಶನ್ ಯಶಸ್ವಿಯಾಗಿದೆ ಎಂದು ಹೇಳಿದ್ದಾರೆ. ಆದರೆ ಚಾಲಕರಿಗೆ ಯಾವುದೇ ಕಮಿಷನ್ ವಿಧಿಸದೆ ನಮ್ಮ ಯಾತ್ರಿ ಎಷ್ಟು ದಿನ ಕಾಯ್ದುಕೊಳ್ಳಬಹುದು? ನೋಡಬೇಕಿದೆ.
ಕಂಪನಿಯು ಕೆಲವು ಚಾಲಕರಿಗೆ ನಾಮಮಾತ್ರದ ದೈನಂದಿನ ಚಂದಾದಾರಿಕೆ ಶುಲ್ಕವನ್ನು ವಿಧಿಸಲು ಪ್ರಾರಂಭಿಸಿದೆ. ಆದರೆ ವಿವರಗಳನ್ನು ನೀಡಲು ನಿರಾಕರಿಸಿದೆ ಎನ್ನಲಾಗಿದೆ. ARDU ನ ಡಿ ರುದ್ರಮೂರ್ತಿ ಅವರು ಆಗಸ್ಟ್ 15 ರಂದು ಕಂಪನಿಯು ಚಂದಾದಾರಿಕೆ ಶುಲ್ಕವನ್ನು ಪರಿಚಯಿಸುವ ಸಾಧ್ಯತೆಯಿದೆ. ಚಾಲಕರು ದಿನಕ್ಕೆ 25-30 ರೂ.ಗಳನ್ನು ಹೆಚ್ಚು ವಿಧಿಸದಂತೆ ಕಂಪನಿಯನ್ನು ಕೇಳಿದ್ದಾರೆ. ಚಂದಾದಾರಿಕೆ ಶುಲ್ಕದ ವಿಧಾನಗಳು ಇನ್ನೂ ಕಾರ್ಯನಿರ್ವಹಿಸುತ್ತಿವೆ. ಕಂಪನಿಯು ಒಂದು ದಿನದಲ್ಲಿ ಚಾಲಕ ಮಾಡುವ ಟ್ರಿಪ್‌ಗಳ ಸಂಖ್ಯೆಗೆ ಪಾವತಿಯನ್ನು ಲಿಂಕ್ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications