ಹಿಜಾಬ್- ಹಲಾಲ್ ಕಟ್ ಮುಗೀತು; ಈಗ ಆಜಾನ್ vs ಭಜನೆ ವಿವಾದ
ಬೆಂಗಳೂರು, ಏ. 04: ರಾಜ್ಯದಲ್ಲಿ ಹಿಜಾಬ್ ವಿವಾದ ತಣ್ಣಗಾದ ಬೆನ್ನಲ್ಲೇ ಹಲಾಲ್ ಕಟ್ - ಜಟ್ಕಾ ಕಟ್ ಶುರುವಾಗಿದ್ದವು. ಯುಗಾದಿ ಹೊಸತೊಡಕು ಮುಗಿದ ಕೂಡಲೇ ಮಸೀದಿಗಳಲ್ಲಿ ಅಳವಡಿಸಿರುವ ಧ್ವನಿ ವರ್ಧಕಗಳ ತೆರವು ವಿಚಾರವಾಗಿ ಅಜಾನ್ ಹಾಗೂ ಭಜನೆ ವಿವಾದ ಹುಟ್ಟು ಹಾಕಲಾಗಿದೆ.
ಹೊಸ ಅಭಿಯಾನಕ್ಕೆ ಚಾಲನೆ:
ಮಸೀದಿಗಳಲ್ಲಿ ಬೆಳಗಿನ ಜಾವ ಐದು ಗಂಟೆಗೆ ಧ್ವನಿ ವರ್ಧಕಗಳಲ್ಲ ಆಜಾನ್ "ಪ್ರಾರ್ಥನೆ" ಮಾಡಲಾಗುತ್ತದೆ. ಮಸೀದಿಗಳಲ್ಲಿ ಆಜಾನ್ ಕೂಗುವ ಸಮಯಕ್ಕೆ ಹಿಂದೂ ದೇವಾಲಯಗಳಲ್ಲಿ ದೇವರ ನಾಮ ಭಜನೆ ಪಟಿಸುವ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತಿದೆ. ಯಲಹಂಕದ ಆಂಜನೇಯಸ್ವಾಮಿ ದೇಗುಲದಲ್ಲಿ ಇದಕ್ಕೆ ಮಂಗಳವಾರ ಚಾಲನೆ ನೀಡಲಾಗುತ್ತಿದೆ.
ಹಿಜಾಬ್ ವಿವಾದ ದೊಡ್ಡ ಮಟ್ಟದ ಚರ್ಚೆಗೆ ನಾಂದಿ ಹಾಡಿತ್ತು. ಅದು ತಣ್ಣಗಾಗುಷ್ಟರಲ್ಲಿ ಮಂಗಳೂರು ಭಾಗದ ಹಿಂದೂ ದೇವರ ಜಾತ್ರೆಗಳಲ್ಲಿ ಮುಸ್ಲಿಂ ಸಮುದಾಯದವರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಆ ಬಳಿಕ ಮುಸ್ಲಿಂ ಸಮುದಾಯದ ಅಂಗಡಿಗಳಲ್ಲಿ ಯಾವುದೇ ವಸ್ತು ಖರೀದಿಸದಂತೆ ಅಭಿಯಾನಕ್ಕೆ ಚಾಲನೆ ನೀಡಲಾಗಿತ್ತು. ಇದು ಕೂಡ ರಾಜ್ಯದಲ್ಲಿ ದೊಡ್ಡ ಚರ್ಚೆಗೆ ನಾಂದಿ ಹಾಡಿತ್ತು. ಇವು ಮುಗಿಯುವಷ್ಟರಲ್ಲಿ ಹಲಾಲ್ ಕಟ್ ಮತ್ತು ಜಟ್ಕಾ ಕಟ್ ವಿವಾದ ಭುಗಿಲೆದ್ದಿತು.

ಯುಗಾದಿ ಆಚರಣೆ ಹಿನ್ನೆಲೆಯಲ್ಲಿ ಮಾಂಸ ಮಾರಾಟ ವ್ಯವಹಾರ ಜೋರಾಗಿ ನಡೆಯುತ್ತದೆ. ಈ ಹಿನ್ನೆಲೆಯಲ್ಲಿ ಹಿಂದೂಗಳು ಹಲಾಲ್ ಕಟ್ ಮಾಂಸ ಸೇವಿಸದಂತೆ ಕರೆ ಕೊಟ್ಟಿದ್ದವು. ಅದರ ಬದಲಿಗೆ ಜಟ್ಕಾ ಕಟ್, (ಹಿಂದೂ ದೇವರಿಗೆ ಅರ್ಪಣೆ) ಮಾಡಿದ ಮಾಂಸವನ್ನೇ ಖರೀದಿ ಮಾಡುವಂತೆ ಹಿಂದೂಪರ ಸಂಘಟನೆಗಳು ಕರೆ ಕೊಟ್ಟಿದ್ದವು. ಇದರ ಬೆನ್ನಲ್ಲೇ ಜಟ್ಕಾ ಕಟ್ ಅಂಗಡಿಗಳು ರಾತ್ರೋ ರಾತ್ರಿ ತಲೆಯೆತ್ತಿದ್ದವು. ಯುಗಾದಿ ಹಬ್ಬ ಆಚರಣೆ ಮುಗಿಯುತ್ತಿದ್ದಂತೆ ಅದರ ಸಾಲಿಗೆ ಮತ್ತೊಂದು ವಿವಾದ ಭುಗಿಲೆದ್ದಿದೆ.
ಅಜಾನ್ ಮತ್ತು ಭಜನೆ:
ಮುಸ್ಲಿಂ ಸಮುದಾಯದ ಮಸೀದಿಗಳಲ್ಲಿ ಧ್ವನಿವರ್ಧಕ ಅಳವಡಿಸಲಾಗಿದೆ. ಅವನ್ನು ತೆಗೆಯಬೇಕು ಎಂದು ಬಜರಂಗ ದಳ, ಹಿಂದೂ ಜಾಗರಣ ವೇದಿಕೆ ಮತ್ತಿತರ ಸಂಘಟನಗಳು ಕರೆ ಕೊಡುತ್ತಿವೆ. ಇದರ ಜತೆ ಜತೆಯಲ್ಲಿ ಹಿಂದೂ ದೇವಾಲಯಗಳಲ್ಲಿ ಬೆಳಗಿನ ಜಾವ ಭಜನೆ ಮಾಡುವ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತಿದೆ. ಮಂಗಳವಾರ ಯಲಹಂಕದಲ್ಲಿರುವ ಆಂಜನೇಯಸ್ವಾಮಿ ದೇವಾಲಯದಲ್ಲಿ ಭಜನೆ ಪ್ರಸಾರ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತಿದೆ. ಮಸೀದಿಗಳಲ್ಲಿ ಅಜಾನ್ (ಪ್ರಾರ್ಥನೆ) ಮಾಡುವ ಸಮಯದಲ್ಲಿ ಹಿಂದೂ ದೇವಾಲಯಗಳಲ್ಲಿ ಭಜನೆ, ಓಂ ನಮಃ ಶೀವಾಯ, ಜೈ ಶ್ರೀರಾಮ್ ಎಂದು ಕೂಗಿಸುವ ಅಭಿಯಾನ ಹುಟ್ಟಿಕೊಂಡಿದೆ. ಯಲಹಂಕದಲ್ಲಿರುವ ಆಂಜನೇಯಸ್ವಾಮಿ ದೇವಾಲಯದಲ್ಲಿ ಭಜನೆ ಮಾಡುವ ಮೂಲಕ ಈ ಅಭಿಯಾನಕ್ಕೆ ಚಾಲನೆ ನೀಡುತ್ತೇವೆ ಎಂದು ಹಿಂದೂ ಕನ್ನಡಿಗರ ಸಂಘಟನೆ ಮುಖಂಡ ಭರತ್ ಶೆಟ್ಟಿ ಎಂಬುವರು ಖಾಸಗಿ ವಾಹಿನಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಯಲಹಂಕದ ಆಂಜನೇಸ್ವಾಮಿ ದೇವಾಲಯದಲ್ಲಿ ಈ ಅಭಿಮಾನ ಅರಂಭವಾಗಲಿದೆ. ಆ ಬಳಿಕ ರಾಜ್ಯಾದ್ಯಂತ ಈ ಅಭಿಯಾನ ವಿಸ್ತರಣೆ ಮಾಡಲು ಚಿಂತನೆ ಮಾಡಿದ್ದೇವೆ ಎಂದು ಭರತ್ ಶೆಟ್ಟಿ ಹೇಳಿಕೊಂಡಿದ್ದಾರೆ.
ಲೌಡ್ ಸ್ವೀಕರ್ ಅಭಿಯಾನ:
ಈಗಾಗಲೇ ಮಸೀದಿಗಳಲ್ಲಿ ಅಳವಡಿಸಿರುವ ಧ್ವನಿ ವರ್ಧಕಗಳು ಸಾರ್ವಜನಿಕರಿಗೆ ತೊಂದರೆಯಾಗದಂತೆ ಬಳಕೆ ಕುರಿತು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಇದನ್ನು ಮುಂದಿಟ್ಟುಕೊಂಡು ಮಸೀದಿಗಳಲ್ಲಿ ಅಳವಡಿಸಿರುವ ಧ್ವನಿ ವರ್ಧಕಗಳನ್ನು ತೆಗೆಯಬೇಕು. ಇದರಿಂದ ಶಬ್ಧ ಮಾಲಿನ್ಯವಾಗುತ್ತಿದೆ ಎಂದು ಶ್ರೀರಾಮ ಸೇನೆ ಆರೋಪಿಸಿದೆ. ಮಸೀದಿಗಳ ಮೇಲಿನ ಧ್ವನಿವರ್ಧಕಗಳನ್ನು ತೆಗೆಸುವ ಶಕ್ತಿ ಈ ಸರ್ಕಾರಕ್ಕೆ ಇಲ್ಲ. ಈ ಕುರಿತು ಸಂಬಂಧ ಪಟ್ಟ ಜಿಲ್ಲಾಧಿಕಾರಿಗಳಿಗೆ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ಕೊಟ್ಟಿದ್ದೇವೆ. ಆದರೂ ಧ್ವನಿ ವರ್ಧಕಗಳನ್ನು ತೆಗೆಸಿಲ್ಲ. ಇದರಿಂದ ಲಕ್ಷಾಂತರ ಜನರಿಗೆ ತೊಂದರೆ ಆಗುತ್ತಿದೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ಮಸೀದಿಗಳಲ್ಲಿ ಆಜಾನ್ ನಿಲ್ಲಿಸುವ ತಾಕತ್ತು ಸರ್ಕಾರಕ್ಕೆ ಇಲ್ಲ. ಹೀಗಾಗಿ ದೇವಾಲಯಗಳಲ್ಲಿ ಸ್ವೀಕರ್ ಹಾಕುತ್ತೇವೆ. ರಾಮ ಭಜನೆ, ಶಿವರಾಮ, ಓಂಕಾರ ನಾಮಗಳನ್ನು ಹಾಕುತ್ತೇವೆ ಎಂದು ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದ್ದು, ಅಂತೂ ರಾಜ್ಯದಲ್ಲಿ ಹಲಾಲ್ ಕಟ್ ಮುಗಿಯುತ್ತಿದ್ದಂತೆ ಇದೀಗ ಅಜಾನ್ ಮತ್ತು ಭಜನೆ ವಿವಾದ ಹುಟ್ಟಿಕೊಂಡಿದೆ.

ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಇಂತಹ ವಿವಾದಗಳು ಹುಟ್ಟಿಕೊಳ್ಳುತ್ತಿರುವುದು ಭಾರೀ ಚರ್ಚೆಗೆ ನಾಂದಿ ಹಾಡಿದೆ. ಸಮಾಜದ ಸ್ವಾಸ್ತ್ಯ ಹಾಳಾಗುತ್ತಿದ್ದು ಕೋಮು ದ್ವೇಷದ ವಾತಾವರಣ ನಿರ್ಮಾಣವಾಗುತ್ತಿದೆ. ಇದನ್ನು ಅರಿತು ನಿಯಂತ್ರಣ ಮಾಡಬೇಕಾದ ಸರ್ಕಾರ ಕೂಡ ಮೌನವಾಗಿದೆ. ರಾಜಕೀಯ ಲಾಭಕ್ಕಾಗಿಯೇ ಇಂತಹ ವಿವಾದಗಳನ್ನು ಹುಟ್ಟು ಹಾಕಲಾಗಿದೆಯೇ ಎಂಬ ಅನುಮಾನ ಶುರುವಾಗಿದೆ.
Recommended Video













Click it and Unblock the Notifications