ಬೆಂಗಳೂರಿನ ರಸ್ತೆಗಳು ಬೆಣ್ಣೆಯಂತಾಗಬೇಕು: ಹೈಕೋರ್ಟ್ ತಾಕೀತು
ಬೆಂಗಳೂರು, ಸೆ.27: ಬೆಂಗಳೂರಿನ ರಸ್ತೆಗಳು ಬೆಣ್ಣೆಯಂತಾಗಬೇಕು, ರಸ್ತೆ ನಿರ್ವಹಣೆ ವಿಚಾರದಲ್ಲಿ ಬಿಬಿಎಂಪಿ ಹಾಗೂ ಜಲಮಂಡಳಿ ಕೈಜೋಡಿಸಿ ಸಮಸ್ಯೆಗಳ ನಿವಾರಣೆಗೆ ಗಂಭೀರ ಹೆಜ್ಜೆಗಳನ್ನಿಡಬೇಕು ಎಂದು ಹೈಕೋರ್ಟ್ ತಾಕೀತು ಮಾಡಿದೆ.
ಬಿಬಿಎಂಪಿ ನಡೆಸಿರುವ ರಸ್ತೆಗುಂಡಿ ಮುಚ್ಚುವ ಕಾಮಗಾರಿಯ ಗುಣಮಟ್ಟ ಪರಿಶೀಲನೆ ಕುರಿತ ಎರಡನೇ ಪ್ರಾಥಮಿಕ ವರದಿಯನ್ನು ಕೋರ್ಟ್ ಕಮಿಷನ್ ಹೈಕೋರ್ಟ್ ಗೆ ಸಲ್ಲಿಸಿದೆ, ಇದೇ ಸಂದರ್ಭದಲ್ಲಿ ಬಿಬಿಎಂಪಿಯಿಂದಲೂ ವರದಿ ಸಲ್ಲಿಕೆಯಾಗಿದೆ.
ಅಕ್ಟೋಬರ್ 5ಕ್ಕೆ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿತು, ಅಲ್ಲಿಯ ವರೆಗೆ ಕಾಮಗಾರಿ ಮುಂದುವರೆಸಿ ಅ.5 ರಂದು ಕಾಮಗಾರಿ ಮತ್ತು ದರ ಪರಿಶೀಲನಾ ವರದಿಯನ್ನು ಸಲ್ಲಿಸುವಂತೆ ಸೂಚಿನೆ ನೀಡಿದೆ.

ರಾಜಕಾಲುವೆ ನಿರ್ವಹಣೆ ಸಂಬಂಧ ಸೆ.26ರಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ನಡೆದ ಬೆಂಗಳೂರು ಅಭಿವೃದ್ಧಿ ಮತ್ತು ಬೆಳವಣಿಗೆ ಕುರಿತ ಇಲಾಖೆ ಮತ್ತು ಸಂಸ್ಥೆಗಳ ಸಮನ್ವಯ ಸಮಿತಿ ಸಭೆಯ ವಿವರಗಳನ್ನು ಹಿರಿಯ ವಕೀಲ ಆದಿತ್ಯ ಸೋಂದಿ ನ್ಯಾಯಪೀಠಕ್ಕೆ ಸಲ್ಲಿಸಿದರು.
ಸಮಿತಿಯಲ್ಲಿ ಇನ್ನೂ ಹತ್ತಾರು ವಿಷಯಗಳ ಕುರಿತು ಚರ್ಚೆ ನಡೆಯಬೇಕಿದೆ, ಅಭಿವೃದ್ಧಿಯನ್ನು ಉತ್ತೇಜಿಸುವಂತಹ ನಿಟ್ಟಿನಲ್ಲಿ ನಿರ್ದಿಷ್ಟ ಮಾದರಿಯ ಕಾರ್ಯಕ್ರಮ ರೂಪಿಸುವ ಅವಶ್ಯಕತೆ ಇದೆ ಇನ್ನಷ್ಟು ಸಭೆಗಳನ್ನು ನಡೆಸುವುದಾಗಿ ನ್ಯಾಯಾಲಯಕ್ಕೆ ವಕೀಲರು ತಿಳಿಸಿದರು.












Click it and Unblock the Notifications