Jolada Rotti: ಬೆಂಗಳೂರಿನ ಬೆಸ್ಟ್ ಜೋಳದ ರೊಟ್ಟಿ ಊಟದ ಖಾನಾವಳಿಗಳ ಪಟ್ಟಿ ಇಲ್ಲಿದೆ
ಬೆಂಗಳೂರು, ಜನವರಿ 12: ಬೆಂಗಳೂರಿನಲ್ಲಿ ಎಲ್ಲಾ ಭಾಗದ ಎಲ್ಲಾ ರೀತಿಯ ಊಟ ತಿಂಡಿಗಳು ಸಿಗುತ್ತದೆ. ಸೂಕ್ತವಾದ ಸ್ಥಳವನ್ನು ಅರಸಿ ಹೋಗಿ ಸವಿದರೆ ಮಾತ್ರ ಊಟಕ್ಕೊಂದು ತೃಪ್ತಿ ಸಿಗುತ್ತದೆ. ಉತ್ತರ ಭಾರತದ ಊಟಗಳು ಮತ್ತು ದಕ್ಷಿಣ ಭಾರತದ ಊಟಗಳು, ಕರಾವಳಿ, ಇಟಾಲಿಯನ್, ಚೈನೀಸ್ ಊಟಗಳನ್ನು ತಿಂದು ಬೇಸರ ಆಗಿದ್ದರೆ ಒಮ್ಮೆ ಉತ್ತರ ಕರ್ನಾಟಕ ಶೈಲಿಯ ಊಟವನ್ನು ಪ್ರಯತ್ನಿಸಿ.
ಜೋಳದ ರೊಟ್ಟಿ, ಎಣ್ಣೆಗಾಯಿ ಪಲ್ಯ, ಹೋಳಿಗೆ, ಮೊಸರು, ಚಟ್ನಿ ಪುಡಿ ಹೀಗೆ ಉತ್ತರ ಕರ್ನಾಟಕದ ಖಾದ್ಯಗಳ ಪಟ್ಟಿ ಮುಂದುವರಿಯುತ್ತಲೇ ಹೋಗುತ್ತದೆ. ಇಂತಹ ರುಚಿಕರವಾದ ಖಾದ್ಯಗಳನ್ನು ಸವಿಯಲು ಬೆಂಗಳೂರಿನಲ್ಲಿ ನೀವು ತೆರಳಬಹುದಾದ ಉತ್ತಮ ಹೋಟೆಲ್‌ಗಳ ಪಟ್ಟಿ ಇಲ್ಲಿದೆ.

1. ಹಳ್ಳಿ ಮನೆ, ಮಲ್ಲೇಶ್ವರಂ
ಜೋಳದ ರೊಟ್ಟಿ, ಎಣ್ಣೆಗಾಯಿ ಮತ್ತು ಬದನೆಕಾಯಿ ಪಲ್ಯಗಳಂತಹ ಉತ್ತರ ಕರ್ನಾಟಕ ಶೈಲಿಯ ಊಟವನ್ನು ಸವಿಯಲು ಹಳ್ಳಿ ಮನೆ ಹೋಟೆಲ್ ಸೂಕ್ತವಾದ ಸ್ಥಳ. ಹೆಸರಿಗೆ ತಕ್ಕಂತೆ ಈ ಹೋಟೆಲ್‌ನ ವಾತಾವರಣ ಹಾಗೂ ಊಟದ ರುಚಿ ನಿಮಗೆ ಹಳ್ಳಿಯ ಅನುಭವ ನೀಡುತ್ತದೆ. ಉತ್ತರ ಕರ್ನಾಟಕದ ಜೋಳದ ರೊಟ್ಟಿ ಹಾಗೂ ವಿವಿಧ ಖಾದ್ಯಗಳಿಗೆ ಜೆಪಿ ನಗರ ಮತ್ತು ಮಲ್ಲೇಶ್ವರಂನಲ್ಲಿರುವ ಹಳ್ಳಿ ಮನೆ ಹೋಟೆಲ್ ಜನಪ್ರಿಯವಾಗಿದೆ.
ಮಲ್ಲೇಶ್ವರಂನಲ್ಲಿರುವ ಹಳ್ಳಿ ಮನೆಯ ಊಟ ಸವಿಯಲು ಆಹಾರ ಪ್ರಿಯರು ದೊಮ್ಮಲೂರು, ಎಚ್‌ಎಸ್‌ಆರ್ ಲೇಔಟ್ ಸೇರಿದಂತೆ ದೂರದ ಸ್ಥಳಗಳಿಂದ ಬರುತ್ತಾರೆ. ಯಾಕೆಂದರೆ ಈ ಹೋಟೆಲ್ ದೇಸಿ ಕರ್ನಾಟಕ ಪಾಕಪದ್ಧತಿಗೆ ಹೆಸರುವಾಸಿಯಾಗಿದೆ. ಹಾಗೂ ಇಲ್ಲಿನ ಬಾಳೆ ಎಲೆ ಊಟ ಎಂತವರನ್ನಾದರೂ ತನ್ನೆಡೆಗೆ ಸೆಳೆಯುತ್ತದೆ. ಇಲ್ಲಿ ದಕ್ಷಿಣ ಭಾರತ, ಉತ್ತರ ಭಾರತ, ಚೈನೀಸ್ ಶೈಲಿಯ ಖಾದ್ಯಗಳು ಸಿಗುತ್ತದೆ. ವಾರದ ಏಳು ದಿನವೂ ತೆರೆದಿರುವ ಈ ಹೋಟೆಲ್ ಬೆಳಗ್ಗೆ 6:30ರಿಂದ ರಾತ್ರಿ 10:30ವರೆಗೆ ತೆರೆದಿರುತ್ತದೆ.

2. ಉತ್ತರ ಕರ್ನಾಟಕ ಜೋಳದ ರೊಟ್ಟಿ ಮತ್ತು ಚಪಾತಿ ಅಂಗಡಿ
ಉತ್ತರ ಕರ್ನಾಟಕ ಜೋಳದ ರೊಟ್ಟಿ ಮತ್ತು ಚಪಾತಿ ಅಂಗಡಿ ಬೆಂಗಳೂರಿನ ಹಲವು ಭಾಗಗಳಲ್ಲಿ ಇದ್ದು, ಉತ್ತರ ಕರ್ನಾಟಕ ಶೈಲಿಯ ಅತ್ಯುತ್ತಮ ರೆಸ್ಟೋರೆಂಟ್‌ಗಳಲ್ಲಿ ಇದು ಒಂದಾಗಿದೆ. ಈ ಖಾನಾವಳಿಯು ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ಸೇವೆ ನೀಡುತ್ತಿದ್ದು, ಪಕ್ಕಾ ಉತ್ತರ ಕರ್ನಾಟಕ ಶೈಲಿಯ ಊಟವನ್ನು ಇಲ್ಲಿ ಸವಿಯಬಹುದುದಾಗಿದೆ. ಈ ಹೋಟೆಲ್‌ನ ಖಾದ್ಯಗಳು ಕೈಗೆಟಕು ದರದಲ್ಲಿರುವ ಕಾರಣ ಪ್ರತಿನಿತ್ಯ ನೂರಾರು ಖಾಯಂ ಗ್ರಾಹಕರನ್ನು ಹೊಂದಿದೆ. ವಾರದ ಏಳು ದಿನವೂ ತೆರೆದಿರುವ ಈ ಹೋಟೆಲ್ ಬೆಳಗ್ಗೆ 10:30ರಿಂದ ರಾತ್ರಿ 11:00ವರೆಗೆ ತೆರೆದಿರುತ್ತದೆ.
3. ಹೋಟೆಲ್ ನಳಪಾಕ
ಉತ್ತರ ಕರ್ನಾಟಕದ ಖಾದ್ಯಗಳಿಗಾಗಿ ಬೆಂಗಳೂರಿನಲ್ಲಿರುವ ಅತ್ಯಂತ ಹಳೆಯ ಮತ್ತು ಪ್ರಸಿದ್ಧ ರೆಸ್ಟೋರೆಂಟ್‌ಗಳ ಪೈಕಿ ಹೋಟೆಲ್ ನಳಪಾಕ ಪ್ರಮುಖವಾದದ್ದು. ನೀವು ಬಯಸಿದ ರೀತಿ ಇಲ್ಲಿ ಊಟ ದೊರೆಯುತ್ತದೆ. ಇಲ್ಲಿ ಬೆಳಗಿನ ಉಪಾಹಾರವು 11:45ರವರೆಗೆ ಲಭ್ಯವಿರುತ್ತದೆ. ಮಧ್ಯಾಹ್ನದ ಊಟವು 12:30ಕ್ಕೆ ಪ್ರಾರಂಭವಾಗುತ್ತದೆ. ಇಲ್ಲಿನ ಜೋಳದ ರೊಟ್ಟಿ, ಬದನೆಕಾಯಿ ಸಾರು, ಅನ್ನ ರಸಂ, ಎರಡು ಬಗೆಯ ಚಟ್ನಿಗಳು, ಮಜ್ಜಿಗೆ ಮತ್ತು ಮೊಸರು ಸವಿದರೆ ನಿಮ್ಮ ದಿನ ಪರಿಪೂರ್ಣವಾದಂತಾಗುತ್ತದೆ. ರಾಜಾಜಿನಗರದಲ್ಲಿರುವ ಈ ಹೋಟೆಲ್ ಬೆಳಗ್ಗೆ 7:30ರಿಂದ ರಾತ್ರಿ 10:30ವರೆಗೆ ತೆರೆದಿರುತ್ತದೆ.

4. ಬಸವೇಶ್ವರ ಖಾನಾವಳಿ
ಬೆಂಗಳೂರಿನಲ್ಲಿ ಉತ್ತರ ಕನ್ನಡ ಶೈಲಿಯ ಊಟ ಎಂದರೆ ಮೊದಲು ನೆನಪಾಗುವುದೇ ಬಸವೇಶ್ವರ ಖಾನಾವಳಿ. ಇದು ಅತ್ಯಂತ ಹಳೆಯ ಮತ್ತು ಜನಪ್ರಿಯ ಹೋಟೆಲ್ ಆಗಿದೆ. ಇಲ್ಲಿನ ಘಮ ಹಾಗೂ ಮಸಾಲೆ ರುಚಿಯಿಂದ ರಾಜ್ಯದಾದ್ಯಂತ ಅನೇಕ ಬ್ರಾಂಚ್‌ಗಳನ್ನು ತೆರೆದಿದೆ. ಇಲ್ಲಿ ಅನ್‌ಲಿಮಿಟೆಡ್ ಊಟದ ವ್ಯವಸ್ಥೆ ಕೂಡ ಇದ್ದು, ವಾರಾಂತ್ಯಗಳಲ್ಲಿ ಹಾಗೂ ವಿಶೇಷ ದಿನಗಳಲ್ಲಿ ಈ ಹೋಟೆಲ್ ಜನರಿಂದ ತುಂಬಿರುತ್ತದೆ. ಜೋಳದ ರೊಟ್ಟಿ, ಕಾಳು ಪಲ್ಯ, ಹೋಳಿಗೆ ಊಟ, ಅನ್ನ ಸಾಂಬಾರ್, ಕಡಲೆ ಚಟ್ನಿ ಪುಡಿ ಇಲ್ಲಿನ ಫೇಮಸ್ ಖಾದ್ಯಗಳಾಗಿವೆ. ಬೆಂಗಳೂರಿನಾದ್ಯಂತ ಅನೇಕ ಭಾಗಗಳಲ್ಲಿ ಬಸವೇಶ್ವರ ಖಾನಾವಳಿ ಹೋಟೆಲ್ ಇದ್ದು, ಮಧ್ಯಾಹ್ನ 12:00 ಗಂಟೆಯಿಮದ ಸಂಜೆ 5:00ರ ತನಕ ಹಾಗೂ ರಾತ್ರಿ 7:00ರಿಂದ 11:00 ಗಂಟೆ ತನಕ ತೆರೆದಿರುತ್ತದೆ.
5. ಶ್ರೀ ವೆಂಕಟೇಶ್ವರ ಉತ್ತರ ಕರ್ನಾಟಕ ಹೋಟೆಲ್
ಉತ್ತರ ಕರ್ನಾಟಕ ಶೈಲಿಯ ಎಲ್ಲಾ ಖಾದ್ಯಗಳು ಬೇಗ ಮತ್ತು ಕೈಗೆಟುಕುವ ಬೆಲೆಯಲ್ಲಿ ಸಿಗುವ ಮತ್ತೊಂದು ರೆಸ್ಟೋರೆಂಟ್ ಎಂದರೆ ಶ್ರೀ ವೆಂಕಟೇಶ್ವರ ಉತ್ತರ ಕರ್ನಾಟಕ ಹೋಟೆಲ್. ರುಚಿಕರವಾದ ಸವಿಯಲು ಇದು ಸೂಕ್ತವಾದ ಸ್ಥಳವಾಗಿದೆ. ಉತ್ತರ ಕರ್ನಾಟಕದ ಶೈಲಿಯ ಖಾದ್ಯಗಳ ಜೊತೆಗೆ ಬೋಂಡಾ, ಬಜ್ಜಿ, ಪಡ್ಡುಗಳು ಮತ್ತು ಅಕ್ಕಿ ರೊಟ್ಟಿ ಇಲ್ಲಿನ ಜನ ಮೆಚ್ಚಿನ ತಿನಿಸಾಗಿದೆ. ಶ್ರೀ ವೆಂಕಟೇಶ್ವರ ಉತ್ತರ ಕರ್ನಾಟಕ ಹೋಟೆಲ್ ಜಯನಗರದಲ್ಲಿ ಚಿರಪರಿಚಿತ ಹೋಟೆಲ್ ಆಗಿದೆ.

6. ಶ್ರೀ ಬಸವೇಶ್ವರ ಖಾನಾವಳಿ
ಉತ್ತರ ಕರ್ನಾಟಕ ಶೈಲಿಯ ರುಚಿಕರವಾದ ಊಟವನ್ನು ಕಡಿಮೆ ದರದಲ್ಲಿ ಸವಿಯಲು ಶ್ರೀ ಬಸವೇಶ್ವರ ಖಾನಾವಳಿ ಅತ್ಯುತ್ತಮ ಸ್ಥಳವಾಗಿದೆ. ಇಲ್ಲಿ ಒಂದು ಜೋಳದ ರೊಟ್ಟಿ ಆರ್ಡರ್ ಮಾಡಿದರೆ, 2 ರೊಟ್ಟಿಗಳು, ಬದನೆಕಾಯಿ ಸಾರು (ಎಣ್ಣೆಗಾಯಿ), ಮಿಶ್ರ ಬೇಳೆ ಸಾರು, ಅನ್ನ, ಸಾಂಬಾರ್, ಮೊಸರು, ರಸಂ, ಮತ್ತು ಉಪ್ಪಿನಕಾಯಿ ಮತ್ತು ಸೌತೆಕಾಯಿ ಸಲಾಡ್‌ನೊಂದಿಗೆ ಸಿಗುತ್ತದೆ. ಇಲ್ಲಿನ ವಾತಾವರಣ ಹೈಲೈಟ್ ಅಲ್ಲ. ಬದಲಿಗೆ ಇಲ್ಲಿನ ಆಹಾರದ ಘಮ ರುಚಿ ಹೈಲೆಟ್ ಆಗಿದೆ.
7. ಹಳ್ಳಿ ಮನೆ ರೊಟ್ಟಿ
ಹಳ್ಳಿಮನೆ ರೊಟ್ಟಿ ಹೋಟೆಲ್ ಹೆಸರಿಗೆ ತಕ್ಕಂತೆ ಇದು ಗ್ರಾಮೀಣ ಶೈಲಿಯ ಹೋಟೆಲ್. ಹಳೆಯ ಶೈಲಿಯ ಶೈಲಿ ವಾತಾವರದೊಂದಿಗೆ ಉತ್ತರ ಕರ್ನಾಟಕದ ವಿಶೇಷ ಖಾದ್ಯಗಳನ್ನು ನಿವಿಲ್ಲಿ ಸವಿಯಬಹುದು. ಕಡಿಮೆ ದರದಲ್ಲಿ ಉತ್ತಮ ಊಟ ಸಿಗುವ ಸ್ಥಳ ಇದಾಗಿದ್ದು, ಇಲ್ಲಿನ ಜೋಳದ ರೊಟ್ಟಿಯ ರುಚಿ ಒಮ್ಮೆ ಸವಿದವರು ಮತ್ತೆ ಮತ್ತೆ ಇಲ್ಲಿನ ಗ್ರಾಹಕರಾಗುತ್ತಾರೆ. ಜೋಳದ ರೊಟ್ಟಿ ಕಡಕ್, ಅಕ್ಕಿ ರೊಟ್ಟಿ, ಹೋಳಿಗೆ, ಕಡಲೆ ಲಡ್ಡು ಇಲ್ಲಿನ ಜನಪ್ರಿಯ ಖಾದ್ಯವಾಗಿದೆ.
8. ಕಾಮತ್ ಬ್ಯೂಗಲ್ ರಾಕ್ ಹೋಟೆಲ್
ಬಸವನ ಗುಡಿ ಭಾಗದಲ್ಲಿ ಊಟಕ್ಕೆ ಸೂಕ್ತವಾದ ಸ್ಥಳವೇ ಕಾಮತ್ ಬ್ಯೂಗಲ್ ರಾಕ್ ಹೋಟೆಲ್. ಇಲ್ಲಿನ ಪಾಕಪದ್ಧತಿಯು ಅಸಾಧಾರಣ ಗುಣಮಟ್ಟವನ್ನು ಹೊಂದಿದೆ ಮತ್ ಬ್ಯೂಗಲ್ ರಾಕ್‌ನಲ್ಲಿ ಸಾಮಾನ್ಯ ಊಟದ ಆಯ್ಕೆಗಳ ಬದಲಿಗೆ ಉತ್ತರ ಕರ್ನಾಟಕದ ಖಾದ್ಯಗಳನ್ನು ಬಹಳ ವಿಶೇಷವಾಗಿ ಮಾಡಲಾಗುತ್ತದೆ. ಇಲ್ಲಿನ ಬದನೆಕಾಯಿ ಗ್ರೇವಿ, ಜೋಳದ ರೊಟ್ಟಿ, ಸೊಪ್ಪಿನ ಬಜ್ಜಿ ಮತ್ತು ಮಿರ್ಚಿ ಬಜ್ಜಿಯಂತಹ ಬಾಯಲ್ಲಿ ನೀರೂರಿಸುತ್ತವೆ.
-
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
Bengaluru: ಬಿಡಿಎಗೆ 50ರ ಸಂಭ್ರಮ; ಹೊಸ ಲೋಗೋ, ಟ್ಯಾಗ್ಲೈನ್ ವಿನ್ಯಾಸ ಮಾಡಿ 1 ಲಕ್ಷ ರೂ. ಬಹುಮಾನ ಗೆಲ್ಲಿ -
ನಾವು ಸೇವಿಸುವ ಈ ಆಹಾರಗಳಲ್ಲಿ ಆಲ್ಕೋಹಾಲ್ ಇರುತ್ತದೆ.. ಇದು ನಿಮಗೆ ಗೊತ್ತಿರಲಿ











Click it and Unblock the Notifications