ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಈ ವ್ಯಕ್ತಿಯ ಹೆಸರಲ್ಲಿದೆ 59 ವಿಶ್ವ ದಾಖಲೆ!

|
Google Oneindia Kannada News

ಬೆಂಗಳೂರು ಫೆಬ್ರವರಿ 23: ಒಬ್ಬ ವ್ಯಕ್ತಿಯ ಹೆಸರಲ್ಲಿ ಅಬ್ಬಬ್ಬಾ ಎಂದರೆ ಎಷ್ಟು ವಿಶ್ವ ದಾಖಲೆಗಳಿದ್ದೀತು? ಒಂದು? ಎರಡು? ಮೂರು...? ಬೆಂಗಳೂರಿನವರೇ ಆದ ಪ್ರೊ.ಡಾ. ಎಸ್ ರಮೇಶ್ ಬಾಬು ಅವರ ಹೆಸರಿನಲ್ಲಿ ಇದುವರೆಗೂ ಒಟ್ಟು 59 ವಿಶ್ವದಾಖಲೆಗಳು ಮತ್ತು 9 ರಾಷ್ಟ್ರೀಯ ದಾಖಲೆಗಳಿವೆ!

ಚಿನ್ಮಯ ರಾವ್ ಅವರ 'ಗುರುಸಂಹಿತಾ' ವರ್ಲ್ಡ್ ರೆಕಾರ್ಡ್ಸ್ ಪಟ್ಟಿಗೆ ಚಿನ್ಮಯ ರಾವ್ ಅವರ 'ಗುರುಸಂಹಿತಾ' ವರ್ಲ್ಡ್ ರೆಕಾರ್ಡ್ಸ್ ಪಟ್ಟಿಗೆ

ವಿವಿಧ ಕಾರ್ಯಕ್ರಮಗಳಲ್ಲಿ ಇವರು ನೀಡಿದ ಅಮೋಘ ಪ್ರದರ್ಶನ ಅವರ ಮುಂದೆ ದಾಖಲೆಗಳ ಪಟ್ಟಿಯನ್ನೇ ತಂದಿಟ್ಟಿದೆ. ಒಂದು ನಿಮಿಷದಲ್ಲಿ ಅತೀ ಹೆಚ್ಚು ಹಾಕಿ ಗೋಲ್ ಬಾರಿಸಿದ ದಾಖಲೆ, ಒಂದು ನಿಮಿಷದಲ್ಲಿ ಅತೀ ಹೆಚ್ಚು ಫುಟ್ಬಾಲ್ ಗೋಲು ಹೊಡೆದ ದಾಖಲೆ, ಅತೀ ಹೆಚ್ಚು ದೂರ ಸೋಲೋ ಮ್ಯಾರಥಾನ್ ಹೈವೇ ಸೈಕ್ಲಿಂಗ್ ಮಾಡಿದ ದಾಖಲೆ ಸೇರಿದಂತೆ ಸಾಕಷ್ಟು ದಾಖಲೆಗಳು ಇವರ ಹೆಸರಿಗಿವೆ.

Here is a man from Bengaluru who has 59 world records in his name!

ಟಾಪ್ ಆಫ್ ದಿ ವರ್ಲ್ಡ್ ಸೆಂಟರ್ ಫಾರ್ ಎಕ್ಸಲೆನ್ಸ್ ಸಂಸ್ಥಾಪಕ ನಿರ್ದೇಶಕರೂ ಆಗಿರುವ ರಮೇಶ್ ಬಾಬು ಅವರು ಫೆ. 12 ರಂದು ತಮ್ಮ ಹುಟ್ಟು ಹಬ್ಬದ ದಿನ, ಒಂದೇ ದಿನದಲ್ಲಿ ಅತೀ ಹೆಚ್ಚು ದೂರ ಸೋಲೋ ಮ್ಯಾರಥಾನ್ ಹೈವೆ ಕಾರ್ ಡ್ರೈವಿಂಗ್ ಮಾಡಿದ ಹಿರಿಯ ನಾಗರಿಕ ಎಂಬ ಖ್ಯಾತಿಗೆ ಅವರು ಪಾತ್ರರಾಗಿದ್ದಾರೆ.

ತಮ್ಮ ಟಾಟಾ ಇಂಡಿಗೋ ಮಾನ್ಜಾ ಹಳೆಯ ಕಾರಿನಲ್ಲಿ ಮಹಾರಾಷ್ಟ್ರದ ಔರಂಗಾಬಾದ್ ನಿಂದ ಹೊರಟು ಬೆಂಗಳೂರು ತಲುಪಿದ್ದಾರೆ. 23 ಗಂಟೆಗಳಲ್ಲಿ ಬೆಂಗಳೂರಿಗೆ ಆಗಮಿಸುವ ಮೂಲಕ ಈ ಸಾಧನೆ ಮಾಡಿದ್ದಾರೆ. ಬೆಂಗಳೂರಿನ ಕೊಡಿಗೆಹಳ್ಳಿಯ ಟಾಟಾನಗರ ನಿವಾಸಿ ರಮೇಶ್ ಅವರು ತಮ್ಮ 61 ನೇ ವಯಸ್ಸಿನಲ್ಲೂ ಈ ಪರಿ ಉತ್ಸಾಹದಿಂದ ಓಡಾಡುವುದು ಯುವಕರಿಗೆ ಸ್ಫೂರ್ತಿಯೇ ಸರಿ.

English summary
Retired Metallurgical scientist from Bengaluru has set 59 world records and 9 national records in various events. He has officially set his 59th world record on Feb 12th, on his 61st birthday by successfully undertaking the adventurous feat of Longest distance solo marathan highway car driving in a single day by a senior citizen.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X