ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರವಿ ಬೆಳಗೆರೆ, ನೀವು ಹೀರೋನೋ ವಿಲನೋ? ಆದರೆ ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ

By ಒನ್ ಇಂಡಿಯಾ ಡೆಸ್ಕ್
|
Google Oneindia Kannada News

ಪತ್ರಕರ್ತ ರವಿ ಬೆಳಗೆರೆ ಶುಕ್ರವಾರ ನಿಧನರಾಗಿದ್ದಾರೆ. ಅವರ ಬಗ್ಗೆ ಹೇಗೆ ಉತ್ತಮ ಮಾತು- ಮೆಚ್ಚುಗೆ ಕೇಳಿಬರುತ್ತಿತ್ತೋ ಅದೇ ರೀತಿ ಟೀಕೆ- ಆಕ್ಷೇಪಗಳು ಸಹ ವ್ಯಕ್ತವಾಗುತ್ತಿದ್ದವು ಫೇಸ್ ಬುಕ್ ನಲ್ಲಿ ಕೆಲವು ಆಕ್ಷೇಪಗಳು ಬಂದಿದ್ದು, ಅವುಗಳನ್ನು ನೀಡಲಾಗಿದೆ. ಇಲ್ಲಿರುವುದು ಅವರ ವೈಯಕ್ತಿಕ ಅಭಿಪ್ರಾಯ.

ಮೂರು ಸಂದರ್ಭ, ನಾನು ಮತ್ತು ರವಿ ಬೆಳಗೆರೆ..!
ನಿತಿನ್..! ಈ ಹೆಸರು ನಂಗಿಷ್ಟ ಆಗಲ್ಲ ಕಣೋ. 'ಐ ಹೇಟ್ ದಿಸ್ ನೇಮ್..! ಬಟ್ ಐ ಲವ್ ಯು' ನನ್ನ ಹೆಸರು ಕೇಳುತ್ತಿದ್ದಂತೆ ರವಿ ಬೆಳಗೆರೆ ಅವರ ಮೊದಲ ಮಾತಿದು. ಅವತ್ತಿಗೆ ಅವರು ನನ್ನ ಸಂಪಾದಕರು. ನಾನು ಅವರು ಸಂಪಾದಕತ್ವದ ಚಾನೆಲ್ ನಲ್ಲಿ ಕಾರ್ಯಕ್ರಮ ವಿಭಾಗದ ಅಸೋಸಿಯೇಟ್ ಪ್ರೊಡ್ಯೂಸರ್.

ಬಿಸ್ಕೆಟ್ ದಂಧೆ ಬೆನ್ನಟ್ಟಿದ್ದ ಬೆಳಗೆರೆ; ರೋಚಕ ಪ್ರಕರಣದ ರೀಕ್ಯಾಪ್ಬಿಸ್ಕೆಟ್ ದಂಧೆ ಬೆನ್ನಟ್ಟಿದ್ದ ಬೆಳಗೆರೆ; ರೋಚಕ ಪ್ರಕರಣದ ರೀಕ್ಯಾಪ್

ಸಂದರ್ಭ 1
ಜನಶ್ರೀಗೆ ಒಂದಷ್ಟು ಅವಧಿ ರವಿ ಬೆಳಗೆರೆ ಅವರು ಸಂಪಾದಕರಾಗಿದ್ದರು. ನನ್ನ ಎಪಿಸೋಡ್ ಗೆ ರವಿ ಬೆಳಗೆರೆ ಅವರೇ ANCHOR. ಹಾಗಾಗಿ ಪ್ರತಿ ದಿನ ಬೆಳಗ್ಗೆ ಅವರನ್ನು ಭೇಟಿಯಾಗೋದು ಅನಿವಾರ್ಯವಿತ್ತು. ಆ ದಿನದ ಎಪಿಸೋಡ್ ಟಾಪಿಕ್ ಬಗ್ಗೆ ನಾನು ತಿಳಿದುಕೊಂಡಿದ್ದನ್ನು ಸಂಪೂರ್ಣ ಕೇಳಿ, ಬಳಿಕ ಅವರ ವಿಚಾರವನ್ನು ತಿಳಿಸುತ್ತಿದ್ದರು. ಪಾಕಿಸ್ತಾನ, ಟೆರರಿಸಂ, ಕ್ರೈಮ್, ಸಂಗೀತ, ಸಾಹಿತ್ಯ, ಸಿನಿಮಾ ಹೀಗೆ ಅವರ ಆಸಕ್ತ ವಿಚಾರಗಳಿದ್ದರೆ ಗಂಟೆಗಟ್ಟಲೆ ಲೆಕ್ಚರ್ ಕೊಡುತ್ತಿದ್ದರು. ಆ ವೇಳೆ ಸುನಿಲ್ ಹೆಗ್ಗರವಳ್ಳಿ ಸರ್ ಅಥವಾ ರವಿ ಬೆಳಗೆರೆ ಅವರ ಮಗ ಕರ್ಣ ಕೊಠಡಿಗೆ ಬಂದು, ಅವರ ಮಾತು ನಿಲ್ಲಿಸಿ, ಎಪಿಸೋಡ್ ಬರೆಯೋಕೆ ನನ್ನ ಕಳಿಸುತ್ತಿದ್ದರು.

ಪ್ರತಿ ಬಾರಿ ಅವರು ನನ್ನ ನೋಡುತ್ತಿದ್ದಂತೆ 'ನಿತಿನ್, I HATE YOUR NAME' ಅನ್ನೋರು. ಒಂದಿನ ಧೈರ್ಯ ಮಾಡಿ ಕಾರಣ ಕೇಳಿದೆ. 'ನಂಗೊಬ್ಬ ಬಾಸ್ ಇದ್ದ. ಹೆಸರು ನಿಂದೆ. HE WAS SO RUDE. ನನ್ ಕಂಡ್ರೆ ಆಗ್ತಿರ್ಲಿಲ್ಲ. ಬಹಳ ಕಷ್ಟ ಕೊಟ್ಟಿದ್ದ' ಅಂತಾ ಹೇಳಿ 'ನೀನು ಹೆದರಬೇಡ' ಅಂತಾ ಅಭಯ ನೀಡಿದ್ದರು.

Here are the Criticism and Objections About Ravi Belagere

ಜನಶ್ರೀಯಲ್ಲಿದ್ದಾಗಲೇ ರವಿ ಬೆಳಗೆರೆ ಅವರ ಆರೋಗ್ಯ ಸಂಪೂರ್ಣ ಬಿಗಡಾಯಿಸಿತ್ತು. ಜೊತೆಯಲ್ಲಿ ಯಾರಾದರೂ ಕೈ ಹಿಡಿದುಕೊಂಡೇ ನ್ಯೂಸ್‍ ಡೆಸ್ಕ್ ಗೆ ಕರೆ ತರಬೇಕಿತ್ತು. ಬಹು ಸಂದರ್ಭ ಸುನಿಲ್ ಹೆಗ್ಗರವಳ್ಳಿ ಸರ್. ಕೆಲವೊಮ್ಮ ಅವರ ಮಗ ಕರ್ಣ ಬೆಳಗೆರೆ. ಒಮ್ಮೊಮ್ಮೆ ಶ್ರೀರಾಮುಲು (ಈಗ ಸಚಿವರು) ಯಾರಾದರೊಬ್ಬರು ಜೊತೆಗಿರಬೇಕಿತ್ತು. ತಮ್ಮ ಜೀವಕ್ಕೆ ತೊಂದರೆ ಇರೋದನ್ನು ತಿಳಿಸಿ, ಒಮ್ಮೆ ಓಪನ್ ಡೆಸ್ಕ್ ನಲ್ಲಿ ರಿವಾಲ್ವರ್ ದರ್ಶನ ಮಾಡಿಸಿದ್ದರು..!

ಸಂದರ್ಭ 2
ಆಗಿನ್ನು ಪದವಿ ಓದುತ್ತಿದ್ದೆ. ವಿಜಯ ಕರ್ನಾಟಕದಲ್ಲಿ 'ಒಂದು ವರ್ಷದ ಇಂಟರ್ನ್ ಶಿಪ್‍' ಮಾಡುತ್ತಿದ್ದೆ. ಪತ್ರಕರ್ತರ ಸಂಘದಿಂದ ಶಿವಮೊಗ್ಗ ವಾರ್ತಾ ಇಲಾಖೆಯಲ್ಲಿ ರವಿ ಬೆಳಗೆರೆ ಅವರ ಜೊತೆ ಸಂವಾದ ಆಯೋಜಿಸಲಾಗಿತ್ತು. ಕೆಂಪು ಸ್ಕೋಡ ಕಾರಿನಲ್ಲಿ ಬಂದಿದ್ದ ರವಿ ಬೆಳಗೆರೆ ಅವರು ಸಂವಾದ ಶುರು ಮಾಡಿದರು. ಸುದೀರ್ಘ ಸಂವಾದ. ಸಂವಾದ ಸ್ವಲ್ಪ ಹೊತ್ತಾದ ಮೇಲೆ ಯಾರೂ ಬೇಜಾರು ಮಾಡ್ಕೊಬೇಡಿ ನಾನೊಂದು ಸಿಗರೇಟ್ ಸೇದುತ್ತೇನೆ ಅಂತಾ ಪ್ಯಾಕ್ ತೆಗೆದರು. ಸಂವಾದದಲ್ಲಿ ಸಿಗಾರ್ ಹೊಗೆಯ ಘಾಟು ಹೊತ್ತಿಂದ ಹೊತ್ತಿಗೆ ಜೋರಾಯ್ತು. ಸಂವಾದ ಮುಗಿಯುವ ಹೊತ್ತಿಗೆ ಅದೆಷ್ಟು ಸಿಗರೇಟ್ ದಹನವಾಗಿದ್ದವೋ ನೆನಪಿಲ್ಲ.

ಕೆಟ್ಟ ಸಿಟ್ಟು, ಅಸಾಧ್ಯ ಹಠಕ್ಕೆ ಎಷ್ಟೆಲ್ಲ ಬೆಲೆ ತೆತ್ತರು ಬೆಳಗೆರೆ?ಕೆಟ್ಟ ಸಿಟ್ಟು, ಅಸಾಧ್ಯ ಹಠಕ್ಕೆ ಎಷ್ಟೆಲ್ಲ ಬೆಲೆ ತೆತ್ತರು ಬೆಳಗೆರೆ?

ಸಂದರ್ಭ 3
ಈಟಿವಿಯಲ್ಲಿ ಕಾರ್ಯಕ್ರಮ ನಿರ್ಮಾಪಕನಾಗಿದ್ದ ಸಂದರ್ಭ. ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ನಟಿಯೊಬ್ಬರ ಬಗ್ಗೆ ಆರ್ಟಿಕಲ್ ಬಂದಿತ್ತು. ಫ್ರಂಟ್ ಪೇಜ್ ನಲ್ಲಿ ಆ ನಟಿಯ ಫೋಟೊ ರಾರಾಜಿಸುತ್ತಿತ್ತು. ಬೆಂಗಳೂರಿನಲ್ಲಿದ್ದಾಗ ಹಿರಿತೆರೆ, ಕಿರುತೆರೆಯ ಕೆಲವು ನಟ, ನಟಿಯರು, ತಂತ್ರಜ್ಞರ ಪರಿಚಯವಾಗಿದೆ. ಆ ನಟಿ ಕೂಡ ಪರಿಚಿತ ಬಳಗದವರೆ. ಆಗ ನಟಿಯ ಕಡೆಯವರು ಹೀಗೇಕೆ ಬರೆದಿದ್ದೀರ ಎಂದು ಪ್ರಶ್ನಿಸಿದಾಗ ರವಿ ಬೆಳಗೆರೆಯವರು ಡಿಫಮೇಷನ್ ಹಾಕಿಕೊಳ್ಳಿ ಅಂತಾ ಫೋನ್ ಕಟ್ ಮಾಡಿದ್ದರು. ಈ ಬಗ್ಗೆ ಹೆಚ್ಚು ಬರೆಯೋದು ಈಗ ಪ್ರಸ್ತುತವಲ್ಲ.

ಮೂರು ಸಂದರ್ಭಗಳನ್ನು ಪ್ರಸ್ತಾಪಿಸಲು ಕಾರಣವಿದೆ. ರವಿ ಬೆಳಗೆರೆ ಹಲವರ ಪಾಲಿಗೆ ಹೀರೋ, ಅಷ್ಟೆ ಸಂಖ್ಯೆಯ ಜನರಿಗೆ ಅವರೊಬ್ಬ ವಿಲನ್. ಇನ್ನೂ ಕೆಲವರು ಅವರನ್ನು ಹೀರೋ ಅನ್ನಬೇಕೋ, ವಿಲನ್ ಎಂದು ಭಾವಿಸಬೇಕೋ ಅನ್ನೋ ಗೊಂದಲದಲ್ಲಿದ್ದಾರೆ. ಅವರೊಂದಿಗೆ ಸ್ವಲ್ಪ ಕಾಲ ಪ್ರೊಫೆಷನಲ್ ಬದುಕಿನ ಒಡನಾಟ ಇದ್ದಿದ್ದರಿಂದ ಇಷ್ಟು ಬರೆಯೋಕಾಯ್ತು. ಅವರು ಹೀರೋನ, ವಿಲನ್ನ ಅನ್ನೋ ಜಡ್ಜ್ ಮೆಂಟ್ ಕೊಡೋಕೆ ನಂಗೆ ಸಾದ್ಯವಿಲ್ಲ. ಆದರೆ ಒಬ್ಬ ಕ್ರಿಯಾಶೀಲ, ವರ್ಕೊಹಾಲಿಕ್. ಎಲ್ಲರ ಜೊತೆಗೆ, ಎಲ್ಲ ವಿಷಯ ಚರ್ಚಿಸಬಲ್ಲ ಕೇಪಬಲಿಟಿ ಹೊಂದಿದ್ದ ತೀಕ್ಷ್ಣಮತಿ.

*****
ರವಿ ಬೆಳಗೆರೆ ಸರ್ ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ

ಹೇಗೂ ತೀರಿಕೊಂಡಿದ್ದೀರಿ, ಮತ್ತೆ ಹುಟ್ಟಿ ಬರಬೇಡಿ
ಒಬ್ಬ ವ್ಯಕ್ತಿ ತೀರಿಕೊಂಡಾಗ ಅವನ ಜೊತೆ ಅವನ ಮೇಲಿನ ಬೇಸರ, ಅಸಹ್ಯಗಳೂ ಕೊನೆಯಾಗ್ತವೆ, ಕೊನೆಯಾಗಬೇಕು. ರವಿ ಬೆಳಗೆರೆ ತೀರಿಕೊಂಡ ದಿನ fbಲಿ ಹಾಕ್ತೀನಿ ಅಂತ ತೆಗೆದಿಟ್ಟಿದ್ದ ರವಿ ಕೈಬರಹದ ಪತ್ರವನ್ನು ಈಗ ಹುಡುಕಲಿಕ್ಕೂ ಬೇಜಾರು.
ಸಿಟ್ಟು ಉಳಿಸಿಟ್ಟುಕೊಂಡು ಲಾಭವಿಲ್ಲ ಇನ್ನು.

ರವಿ ಬೆಳಗೆರೆ ಅಷ್ಟು ದೊಡ್ಡ ಮಟ್ಟದಲ್ಲಿ ದುಡ್ಡು ಮಾಡಿದ್ದು ಹೇಗೆ?ರವಿ ಬೆಳಗೆರೆ ಅಷ್ಟು ದೊಡ್ಡ ಮಟ್ಟದಲ್ಲಿ ದುಡ್ಡು ಮಾಡಿದ್ದು ಹೇಗೆ?

ಟಿವಿಯವರು ನಿದ್ದೆಯಿಂದ ಎಬ್ಬಿಸಿ ರವಿ ಬೆಳಗೆರೆ ತೀರಿಕೊಂಡ್ರು ಬೈಟ್ ಕೊಡಿ ಅಂದಾಗ ಎಲ್ಲಕ್ಕಿಂತ ಮೊದಲು 'ಅಯ್ಯೋ' ಅಂತಲೇ ಅನಿಸಿದ್ದು. ಆಚೆಯಿಂದ ಅವರ ಒಡನಾಟದ ಬಗ್ಗೆ ಹೇಳಿ ಅಂದಾಗ 'ಯಾರಾದರೂ ತೀರಿಕೊಂಡಾಗ ಕೆಟ್ಟ ಮಾತು ಆಡಬಾರದು, ಹೀಗಾಗಿ ಹೇಳೋದಿಲ್ಲ' ಅಂದೆ. ಅವರೂ ಸರಿ ಅಂದು cut ಮಾಡಿದರು.

ಹೇಗೂ ತೀರಿಕೊಂಡಿದ್ದೀರಿ. ನಿಮಗೆ ಸದ್ಗತಿಯೇ ಸಿಗಲಿ. ಮತ್ತೆ ಹುಟ್ಟಿ ಬರಬೇಡಿ. ಈಗಲಾದರೂ ನಿಮ್ಮ ಆತ್ಮ ಚಡಪಡಿಕೆಯಿಂದ ಮುಕ್ತವಾಗಲಿ.

ನನ್ನಂಥ ನೂರಾರು ಜನ ಇದ್ದೇವೆ, ಮರೆತುಬಿಡುತ್ತೇವೆ.
-ಚೇತನಾ ತೀರ್ಥಹಳ್ಳಿ, ಪತ್ರಕರ್ತೆ

****
ಆತನ ಆತ್ಮಕ್ಕೆ ಶಾಂತಿ ಸಿಗಲಿ, ಚಾನೆಲ್ಲುಗಳಿಗೆ ಮೋಕ್ಷ ಸಿಗಲಿ
ಪೀತ ಪತ್ರಿಕೋದ್ಯಮವನ್ನು ಮುಖ್ಯವಾಹಿನಿಯಾಗಿಸಿ ಚಾನೆಲ್ಲುಗಳಿಗೆ ಕಚಡ ಭಾಷೆ ಕಲಿಸಿದವ. ಆತನ ಆತ್ಮಕ್ಕೆ ಶಾಂತಿ ಸಿಗಲಿ. ಚಾನೆಲ್ಲುಗಳಿಗೆ ಮೋಕ್ಷ ಸಿಗಲಿ. ಕನ್ನಡ ಪತ್ರಿಕೋದ್ಯಮಕ್ಕೆ ತುಂಬಲಾರದ ನಷ್ಟ ಆಗಿದ್ದು ಇವರು ಬದುಕಿನುದ್ದಕ್ಕೂ ಬರೆದಿದ್ದರಿಂದ, ಸತ್ತಿದ್ದರಿಂದ ಅಲ್ಲ.
- ಡಾ. ಬಸವರಾಜ ಇಟ್ನಾಳ್

ಖಾಸ್ ಬಾತ್: ಬೆಳಗೆರೆ ಹಾಗೂ ಜ್ಯೋತಿಷ್ಯ ಎಂಬ ಮಹಾ ಸ್ವಪ್ನ ಖಾಸ್ ಬಾತ್: ಬೆಳಗೆರೆ ಹಾಗೂ ಜ್ಯೋತಿಷ್ಯ ಎಂಬ ಮಹಾ ಸ್ವಪ್ನ

Recommended Video

ಪತ್ರಿಕಾ ರಂಗದ ದೊಡ್ಡ ಕೊಂಡಿ ಇಂದು ನಮ್ಮನ್ನು ಬಿಟ್ಟು ಹೋಗಿದ್ದೆ | Oneindia Kannada

***
ಅರ್ಹತೆ ಇಂಟ್ಕಂಡು ಅವ ಬಾಳಿರಲಿಲ್ಲ
ರವಿ ಬೆಳಗೆರೆ ಹೋಗಿಬಿಟ್ನಂತೆ. ಶಾಂತಿ- ಶ್ರದ್ಧಾಂಜಲಿ ಎಲ್ಲ ಕೋರಲ್ಲ. ಅದಕ್ಕೆಲ್ಲ ಅರ್ಹತೆ ಇಟ್ಕಂಡು ಅವ ಬಾಳಿರಲಿಲ್ಲ. ಸದ್ಯ ತೊಲಗಿದ. ಲೋಕಕ್ಕೆ ಶಾಂತಿ ದೊರೆಯಿತು. ಒಳ್ಳೆಯದಾಗಲಿ ಉಳಿದೆಲ್ಲರಿಗೂ.
-ಬಂಡವಾಳಶಾಹಿಗಳಿಂದ ಪಶ್ಚಿಮ ಘಟ್ಟ ಉಳಿಸಿ
***
ತನ್ನನ್ನೂ ಕತ್ತರಿಸಿಕೊಳ್ಳುತ್ತದೆ
ಬಹುಶಃ ಪ್ರಖರ ಸೃಜನಶೀಲತೆಯೂ ಹತಾಶೆಯಿಂದ ಪಾತಕಿಯಾಗುತ್ತದೆ. ಇತರರನ್ನು ಕತ್ತರಿಸುತ್ತಿರುವಂತೆ ತನ್ನನ್ನೂ ಕತ್ತರಿಸಿಕೊಳ್ಳುತ್ತದೆ!
-ನಿಖಿಲ್ ಕೊಳ್ಪೆ

English summary
Here we are giving the selected criticism and objections about senior journalist Ravi Belagere. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X