Namma Metro Phase 3rd: ಪ್ರಧಾನಿ ಅಡಿಗಲ್ಲು ಹಾಕಿದ 44 ಕಿಮೀ. ಮೆಟ್ರೋ ಯೋಜನೆ ಮಾರ್ಗಗಳು, ಕಾಮಗಾರಿ...
ಬೆಂಗಳೂರು, ಆಗಸ್ಟ್ 11: ಬೆಂಗಳೂರಿನಲ್ಲಿ ಮೆಟ್ರೋ ಜಾಲ ವಿಸ್ತರಣೆಗೆ ಕಾಲ ಕೂಡಿ ಬಂದಿದೆ. ಬಹು ವರ್ಷಗಳಿಂದ ಪ್ಲಾನ್ ಮಾಡಿಕೊಂಡು ಇತ್ತೀಚೆಗೆ ಅನುಮೋದನೆ ಪಡೆದಿದ್ದ ನಮ್ಮ ಮೆಟ್ರೋ ಮೂರನೇ ಹಂತದ ಯೋಜನೆ ಕಾಮಗಾರಿ ಪ್ರಧಾನಿ ಮೋದಿ ಶಂಕುಸ್ಥಾಪನೆಯಿಂದ ಶುರುವಾಗಲಿದೆ. ಈ ಯೋಜನೆಗೆ ಸಿಕ್ಕ ಅನುದಾನ, ಒಟ್ಟು ಉದ್ದ, ಎರಡು ಮಾರ್ಗಗಳು, ಎಷ್ಟು ನಿಲ್ದಾಣಗಳು ಸೇರಿದಂತೆ ಪೂರ್ಣ ವಿವರ ಇಲ್ಲಿದೆ.
ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) 15,610 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಮೆಟ್ರೋ ರೈಲು ಯೋಜನೆಯ ಹಂತ-3ದ ಕಾಮಗಾರಿ ಆರಂಭಕ್ಕೆ ಕ್ಷಣಗಣನೆ ಆರಂಭವಾಗಲಿದೆ. ಮೆಟ್ರೋ ಹಂತ-3 ಯೋಜನೆಯಡಿ ಒಟ್ಟು 44 ಕಿಲೋ ಮೀಟರ್‌ಗಿಂತಲೂ ಅಧಿಕ ಉದ್ದದ ಎರಡು ಕಾರಿಡಾರ್ ನಿರ್ಮಾಣವಾಗಲಿವೆ. ಇದರಲ್ಲಿ ಒಂದು 'ಆರೆಂಜ್ ಲೈನ್' ಎಂದು ಘೋಷಿಸಲಾಗಿದೆ. ಈ ಮೂಲಸೌಕರ್ಯ ಯೋಜನೆಯು ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ವಸತಿ, ಕೈಗಾರಿಕಾ, ವಾಣಿಜ್ಯ ಮತ್ತು ಶೈಕ್ಷಣಿಕ ಪ್ರದೇಶಗಳಲ್ಲಿನ ಸಾರಿಗೆ ಅಗತ್ಯವನ್ನು ಪೂರೈಸುತ್ತದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಮೆಟ್ರೋ ಮೂರನೇ ಹಂತದ ಯೋಜನೆಯಡಲ್ಲಿ ಎರಡು ಕಾರಿಡಾರ್‌ಗಳು ನಿರ್ಮಾಣಗೊಳ್ಳಲಿವೆ. ಅದರಲ್ಲಿ ಒಂದು ಜೆಪಿ ನಗರ 4 ನೇ ಹಂತದಿಂದ ಕೆಂಪಾಪುರವರೆಗೆ ಹೊಸ ಮಾರ್ಗವು 32.15 ಕಿಲೋ ಮೀಟರ್ ಇರಲಿದೆ. ಮತ್ತೊಂದು ಹೊಸಹಳ್ಳಿಯಿಂದ ಕಡಬಗೆರೆವರೆಗೆ 12.5 ಕಿಲೋ ಮೀಟರ್ ಉದ್ದದ ಮಾರ್ಗ ತಲೆ ಎತ್ತಲಿದೆ. ಈ ಮಾರ್ಗಗಳಲ್ಲಿ ಒಟ್ಟು 31 ಎತ್ತರದ ನಿಲ್ದಾಣಗಳು ಸ್ಥಾಪನೆಯಾಗಲಿವೆ ಎಂದು BMRCL ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಮಾರ್ಗವು ಮಾಗಡಿ ರಸ್ತೆ, ಕೆಂಪಾಪುರ, ಜೆಪಿನಗರ, ಹೊರ ವರ್ತುಲ ರಸ್ತೆಯ ಲಕ್ಷಾಂತರ ಪ್ರಯಾಣಿಕರಿಗೆ ಉತ್ತಮ ಸಾರಿಗೆ ಒದಗಿಸಲಿದೆ. ಅಲ್ಲದೇ 44 ಕಿಲೋ ಮೀಟರ್ ಮಾರ್ಗದಲ್ಲಿ ಟ್ರಾಪಿಕ್ ಕಡಿಮೆ ಮಾಡುವಲ್ಲಿ ಕೊಡುಗೆ ನೀಡಲಿದೆ. ಇಂತಹ ಪ್ರಮುಖ ಯೋಜನೆ ಆರಂಭಕ್ಕೆ ನೆನ್ನೆ ಪ್ರಧಾನಿಯವರು ಶಂಕುಸ್ಥಾಪನೆ ನೇರವೇರಿಸಿದ್ದಾರೆ. ಶೀಘ್ರವೇ ಕಾಮಗಾರಿ ಆರಂಭಗೊಳ್ಳಲಿದೆ.
ನಿರ್ಮಾಣವಾಗುವ ಒಟ್ಟು ನಿಲ್ದಾಣಗಳು ಯಾವುವು?
ಈ ಮೆಟ್ರೋ ಮಾರ್ಗವು ಕಡುಬಗೆರೆ, ಹೊಸಹಳ್ಳಿ ಸೇರಿದಂತೆ ಮಾಗಡಿ ರಸ್ತೆ, ಜೆಪಿನಗರದಿಂದ ಕೆಂಪಾಪುರ, ಹೊರ ವರ್ತುಲ ರಸ್ತೆಯ ಪ್ರಯಾಣಿಕರಿಗೆ ಅನುಕೂಲ ಒದಗಿಸಲಿದೆ. ಈ ಆರೆಂಜ್ ಮಾರ್ಗದಲ್ಲಿ 'ಕೆಂಪಾಪುರ, ಹೆಬ್ಬಾಳ ರೈಲು ನಿಲ್ದಾಣ, ನಾಗಶೆಟ್ಟಿಹಳ್ಳಿ, ಬಿಇಎಲ್ ವೃತ್ತ, ಮುತ್ಯಾಲನಗರ, ಪೀಣ್ಯ, ಕಂಠೀರವನಗರ, ಸ್ವಾತಂತ್ರ್ಯ ಯೋಧರ ಕಾಲೋನಿ, ಚಾಮುಂಡೇಶ್ವರಿ, ನಾಗರಭಾವಿ ವೃತ್ತ, ಮೈಸೂರು ರಸ್ತೆ, ದ್ವಾರಕನಗರ' ನಿಲ್ದಾಣಗಳು ಬರುತ್ತವೆ.
ಅದೇ ರೀತಿ ಕಡುಬಗೆರೆ-ಹೊಸಹಳ್ಳಿ ಮಾರ್ಗದಲ್ಲಿ 'ಹೊಸಹಳ್ಳಿ, ಕಾಮಾಕ್ಷಿಪಾಳ್ಯ, ಕೆಎಚ್‌ಬಿ ಕಾಲೋನಿ, ಸುಮನಹಳ್ಳಿ ಕ್ರಾಸ್, ಸುಂಕದಕಟ್ಟಿ, ಹೇರೋಹಳ್ಳಿ, ಬ್ಯಾಡರಹಳ್ಳಿ, ಕಾಮತ್ ಲೇಔಟ್ ಮತ್ತು ಕಡುಬಗೆರೆ ನಿಲ್ದಾಣಗಳು ಬರುತ್ತವೆ' ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ತಿಳಿಸಿದೆ.
-
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ












Click it and Unblock the Notifications