• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹೆಲ್ಮೆಟ್ ರೂಲಿಗೆ 'ಠೇಂಗಾ' ಅಂದ ಹಿಂಬದಿ ಸವಾರ!

By Prasad
|

ಬೆಂಗಳೂರು, ಜನವರಿ 12 : ಗೃಹ ಸಚಿವ ಡಾ. ಜಿ ಪರಮೇಶ್ವರ ಅವರದು ಮಾತಿನ ಶೂರತ್ವವಾ? ಪೊಲೀಸ್ ಇಲಾಖೆ ಕಣ್ಣು ಮುಚ್ಚಿ ಕುಳಿತಿದೆಯಾ? ಅಥವಾ ಸರಕಾರದ ಮಾತುಗಳಿಗೆ, ಸರಕಾರಿ ನಿಮಯಗಳಿಗೆ ಬೆಂಗಳೂರಿನ ಕೆಲ ಜನತೆ ಕವಡೆ ಕಾಸಿನ ಕಿಮ್ಮತ್ತು ನೀಡುವುದಿಲ್ಲವಾ?

ದ್ವಿಚಕ್ರವಾಹನದ ಹಿಂಬದಿ ಸವಾರರು ಜನವರಿ 12ರಿಂದ ಹೆಲ್ಮೆಟ್ ಹಾಕಲೇಬೇಕು, ಈ ನಿಯಮ ಕಟ್ಟುನಿಟ್ಟಾಗಿ ರಾಜ್ಯಾದ್ಯಂತ ಮಂಗಳವಾರದಿಂದ ಜಾರಿಗೆ ತಂದೇ ತರುತ್ತೇವೆ ಎಂದ ಗೃಹ ಸಚಿವ ಪರಮೇಶ್ವರ್ ಅವರ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಮಾತುಗಳು ಏನಾದವು? ಸಿದ್ದರಾಮಯ್ಯನವರೆ ಏನು ಹೇಳುತ್ತೀರಿ? [ಜ.20ರವರೆಗೆ ಗಡುವು ವಿಸ್ತರಣೆ]

ಈ ಪ್ರಶ್ನೆ ಏಕೆ ಕೇಳುತ್ತಿದ್ದೇವೆಂದರೆ, ಆರಂಭದ ದಿನ ಕಾದು ನೋಡೋಣ, ಒಮ್ಮೆಲೇ ದಂಡ ವಿಧಿಸುವುದು ಬೇಡ, ಜನರೇ ಈ ನಿಯಮಕ್ಕೆ ಹೊಂದಿಕೊಳ್ಳಲು ಎಂಬ ಷರತ್ತು ತಾವೇ ಹಾಕಿಕೊಂಡಿದ್ದರೆ ಇದು ಉಲ್ಟಾ ಹೊಡೆಯುವುದು ಗ್ಯಾರಂಟಿ. ಮೊದಲ ದಿನವೇ ನಿಯಂತ್ರಣವನ್ನು ಬಿಟ್ಟುಕೊಟ್ಟರೆ ಜನರು ಹಿಡಿತಕ್ಕೆ ಸಿಗುವುದು ಬಲುಕಷ್ಟ.

ನಮ್ಮ ಜನರಾದರೂ ಎಂಥವರು? ಪೇಪರ್ ಓದಲ್ಲ, ಓದಿದರೂ ತಲೆಗೆ ಹಾಕಿಕೊಳ್ಳಲ್ಲ, ಟಿವಿ ಇಂಟರ್ನೆಟ್ ನೋಡಲ್ಲ, 'ಇವತ್ತಿಂದ ಪಿಲಿಯನ್ ರೈಡರ್ ಹೆಲ್ಮೆಟ್ ಕಡ್ಡಾಯ' ಅಂತ ಯಾರಾದರೂ ಹೇಳಿದರೆ ಕಿವಿಗೆ ಹಾಕಿಕೊಳ್ಳಲ್ಲ. ಪಿಲಿಯನ್ ರೈಡರ್ ಇರಲಿ, ಕನಿಷ್ಠಪಕ್ಷ ಚಾಲಕ ಕೂಡ ಹೆಲ್ಮೆಟ್ ಹಾಕಿಕೊಳ್ಳುವ ಇಚ್ಛಾಶಕ್ತಿ ತೋರಿಸಲ್ಲ. [ಮೊಬೈಲ್‌ಗೆ ಗೊರಿಲ್ಲಾ ಗ್ಲಾಸ್ ಹಾಕೋರು ತಲೆಗೆ ಹೆಲ್ಮೆಟ್ ಹಾಕ್ಕೊಳ್ಳಿ]

ಬೆಂಗಳೂರಿನಲ್ಲಿ ಜನಜೀವನ ಎಂದಿನಂತೆ ಸಾಗಿದೆ. 'ಅಯ್ಯೋ ಪೊಲೀಸರು ಹೆಂಗಿದ್ರೂ ಹಿಡಿಯಲ್ಲ' ಎಂಬ ಅಸಡ್ಡೆ ಭಾವನೆ ಪಡ್ಡೆಗಳಲ್ಲಿ ಮನೆಮಾಡಿದೆ. ಮೊದಲು ರಸ್ತೆ ದುರಸ್ತಿ ಮಾಡಲಿ ಆಮೇಲೆ ನೋಡೋಣ, ಇವರೇನು ಸುಪ್ರೀಂ ಕೋರ್ಟ್ ಹೇಳಿರುವ ಎಲ್ಲ ನಿಯಮಗಳನ್ನೂ ಪಾಲಿಸುತ್ತಾರಾ ಎಂಬ ಮೊಂಡುವಾದ ಅನೇಕರು ಮುಂದಿಡುತ್ತಿದ್ದಾರೆ.

ಟ್ವೆಂಟಿ ಆಸುಪಾಸಿನ ಆಂಟಿಗಳು ನೈಟಿ ಹಾಕಿಕೊಂಡು ಕೈನೆಟಿಕ್ ನಲ್ಲಿ ಹೆಲ್ಮೆಟ್ ಇಲ್ಲದೆ ಮಕ್ಕಳನ್ನು ಶಾಲೆಗೆ ಬಿಟ್ಟುಬರುತ್ತಿದ್ದಾರೆ. ಕಾಲೇಜು ಪಡ್ಡೆಗಳು ತ್ರಿಬಲ್ ರೈಡಿಂಗ್ ಮಾಡುತ್ತಿದ್ದಾರೆ. ಕೆಲ ಯುವತಿಯರು, ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದ ಬೆಕ್ಕಿನಂತೆ ಮುಖಕ್ಕೆ ವೇಲ್ ಸುತ್ತಿಕೊಂಡು ಇನಿಯನ ಹಿಂದೆ ಕುಳಿತು ಬಿಂದಾಸ್ ಆಗಿ ತಿರುಗುತ್ತಿದ್ದಾರೆ! [ಹೆಲ್ಮೆಟ್ ಕಡ್ಡಾಯ; ಯಾರಿಗ್ಹೇಳೋಣ ನಮ್ಮ ಪ್ರಾಬ್ಲಮ್ಮು..]

ಖಾಲಿ ಪ್ಯಾಂಟು, ಬಿಳಿ ಅಂಗಿ ತೊಟ್ಟ ಪೊಲೀಸರು ಅಲ್ಲಲ್ಲಿ ನಿಂತು ನಡೆಯುತ್ತಿರುವುದನ್ನೆಲ್ಲಾ ಸುಮ್ಮನೆ ನಿಂತು ನೋಡುತ್ತಿದ್ದಾರೆ. ಹೆಲ್ಮೆಟ್ ಹಾಕಿಕೊಳ್ಳದವರನ್ನು ಹಿಡಿದು ದಂಡ ವಿಧಿಸುವುದಿರಲಿ, 'ತಲೆ ನಿಮ್ದೆ ಕಣ್ರಪ್ಪಾ, ಮೊದಲು ಹೆಲ್ಮೆಟ್ ಹಾಕಿಕೊಳ್ಳಿ' ಅಂತ ಕನಿಷ್ಠಪಕ್ಷ ಜನರಿಗೆ ತಿಳಿವಳಿಕೆ ಹೇಳುವ ಗೋಜಿಗೂ ಹೋಗುತ್ತಿಲ್ಲ.

"ಬರೀ ಬಾಯಿಮಾತಿನಿಂದ ಯಾವುದೇ ಪ್ರಯೋಜನವಿಲ್ಲ, ನಿಯಮ ಜಾರಿಗೆ ತರುವುದಾದರೆ ಕಟ್ಟುನಿಟ್ಟಾಗಿ ಶಿಸ್ತುಬದ್ಧವಾಗಿ ಜಾರಿಗೆ ತರಲಿ, ಇಲ್ಲದಿದ್ದರೆ ಸುಪ್ರೀಂ ಕೋರ್ಟಿನ ಮುಂದೆ 'ನನ್ನಿಂದಾಗಲ್ಲ' ಅಂತ ಕೈಕಟ್ಟಿ ನಿಂತುಕೊಳ್ಳಲಿ" ಅಂತಿದ್ದಾರೆ ಹೆಲ್ಮೆಟ್ ಹಾಕಿಕೊಂಡು ಹಿಂದೆ ಕುಳಿತಿರುವ ನಾಗರಿಕರೊಬ್ಬರು.

ಬೆಂಗಳೂರಿನಲ್ಲಿ ಮಂಗಳವಾರ ಬೆಳಿಗ್ಗೆ ಕಂಡ ಒಂದಿಷ್ಟು ಚಿತ್ರಗಳಿವೆ ನೋಡಿ. ಹೆಲ್ಮೆಟ್ ಹಾಕಿಕೊಳ್ಳುವುದು ಬಿಡುವುದು ನಿಮ್ಮಿಷ್ಟ. ನಿಮ್ಮ ಗಾಡಿ, ನಿಮ್ಮ ತಲೆ, ನಿಮ್ಮ ರಸ್ತೆ, ನಿಮ್ಮ ಬೆಂಗಳೂರು... [ಜನರ ಪ್ರಶ್ನೆಗೆ ಸರ್ಕಾರ ಏನು ಹೇಳುತ್ತೆ?]

ಯುವಕರ ಡೋಂಟ್ ಕೇರ್ ಅಟಿಟ್ಯೂಡ್

ಯುವಕರ ಡೋಂಟ್ ಕೇರ್ ಅಟಿಟ್ಯೂಡ್

ಸೌತ್ ಸರ್ಕಲ್ ನಲ್ಲಿ ಯುವಕ, ಯುವತಿ ಸ್ಕೂಟರ್ ಮೇಲೆ ಯಾವುದೇ ಅಳುಕಿಲ್ಲದಂತೆ ಸಾಗುತ್ತಿರುವ ದೃಶ್ಯ. ಇದಕ್ಕೆಲ್ಲಾ ಯುವಕರ ಡೋಂಟ್ ಕೇರ್ ಅಟಿಟ್ಯೂಡ್ ಕಾರಣವೆ?

ಏನಾಗಲಿ ಮುಂದೆ ಸಾಗುನೀ

ಏನಾಗಲಿ ಮುಂದೆ ಸಾಗುನೀ

ನಿಟ್ಟೂರು ವೃತ್ತದಲ್ಲಿ ಕಂಡಿದ್ದು. ಹಿಂಬದಿ ಸವಾರ ಯಾಕೆ ಹೆಲ್ಮೆಟ್ ಹಾಕಿಕೊಂಡಿಲ್ಲ ಅಂತ ಕೇಳೋಕೂ ಪೊಲೀಸ್ ಇರಲ್ಲ ಈ ವೃತ್ತದಲ್ಲಿ.

ಕೈಯಲ್ಲಿ ಹೆಲ್ಮೆಟ್ ಐತೆ ಸಾರ್

ಕೈಯಲ್ಲಿ ಹೆಲ್ಮೆಟ್ ಐತೆ ಸಾರ್

ನೋಡಿ ಇಲ್ಲೊಬ್ಬ ಹಿಂಬದಿ ಸವಾರರ ಠೀವಿ. ಕೈಯಲ್ಲಿ ಹೆಲ್ಮೆಟ್ ಹಿಡಿದುಕೊಂಡಿದ್ದಾರೆ, ಆದರೆ ಹಾಕಿಕೊಳ್ಳಲು ಹಿಂಜರಿಕೆ. ಪೊಲೀಸ್ ಕಂಡಾಗ ಹಾಕಿಕೊಂಡರಾಯಿತು ಬಿಡು ಅಂತ ರೊಯ್ಯನೆ ಸಾಗುತ್ತಿದ್ದಾರೆ. ಇದು ಕಂಡಿದ್ದು ಕೆಂಗೇರಿ ಉಪನಗರದಲ್ಲಿ.

ಎಲ್ಲಿಗೆ ಪಯಣ ಯಾವುದೋ ದಾರಿ ಏಕಾಂಗಿ ಸಂಚಾರಿ

ಎಲ್ಲಿಗೆ ಪಯಣ ಯಾವುದೋ ದಾರಿ ಏಕಾಂಗಿ ಸಂಚಾರಿ

ಹಿಂಬದಿ ಸವಾರನೂ ಇಲ್ಲ, ಮುಂದೆ ಓಡಿಸುವವನಿಗೆ ಹೆಲ್ಮೆಟ್ಟೂ ಇಲ್ಲ. ಅಲ್ಲಿಂದಲ್ಲಿ ಓಡಾಡಲು ಹೆಲ್ಮೆಟ್ ಯಾಕೆ ಬೇಕು? ಇನ್ನೂರು ಮೀಟರ್ ಸಾಗಲೂ ಹೆಲ್ಮೆಟ್ ಹಾಕಿಕೊಳ್ಳಬೇಕಾ?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bengaluru citizen has given thumbs down to helmet compulsory rule for pillion riders. Most of the two wheeler are riding with pillion without helmet. Bengaluru police too has not taken keen interest in penalizing the rule breakers. Karnataka govt has told that it will implement this rule from January 12.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more