ಡಿ.ಕೆ ಶಿವಕುಮಾರ್‌ಗೆ ತೇಜಸ್ವಿ ಸೂರ್ಯ ಸವಾಲು: ನೇರಾ - ನೇರ ಚರ್ಚಗೆ ಬನ್ನಿ ಎಂದಿದ್ಯಾಕೆ ?
Hebbal-Silk Board Tunnel Road: ಬೆಂಗಳೂರಿನ ಅಭಿವೃದ್ಧಿ ಹಾಗೂ ಸುರಂಗ ಮಾರ್ಗದ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಅವರು ಬೆಂಗಳೂರು ನಗರಾಭಿವೃದ್ಧಿ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಕಿವಿ ಮಾತು ಹೇಳಿದ್ದಾರೆ. ಇದು ಅಚ್ಚರಿ ಮೂಡಿಸಿದೆ. ಅಲ್ಲದೇ ಬೆಂಗಳೂರಿನಲ್ಲಿ ದುಬಾರಿ ವೆಚ್ಚದ ಹಾಗೂ ಅನವಶ್ಯಕ ಕಾಮಗಾರಿಗಳನ್ನು ನಡೆಸಬೇಡಿ. ನಿಮ್ಮ ತಪ್ಪುಗಳನ್ನು ತಿದ್ದಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ಈ ವಿಚಾರವಾಗಿ ಅವರು ಸೋಷಿಯಲ್ ಮೀಡಿಯಾದಲ್ಲಿ ಜುಲೈ 17ರಂದು ಟ್ವೀಟ್ ಮಾಡಿದ್ದಾರೆ. ಅದೇನು ಅಂತ ನೋಡೋಣ.
ಬೆಂಗಳೂರು ಅಭಿವೃದ್ಧಿಯ ವಿಚಾರವಾಗಿ ಸಂಸದ ತೇಜಸ್ವಿ ಸೂರ್ಯ ಹಾಗೂ ಡಿ.ಕೆ ಶಿವಕುಮಾರ್ ಅವರ ನಡುವೆ ಟ್ವೀಟ್ ವಾರ್ ಶುರುವಾಗಿದೆ. ಆದರೆ, ತೇಜಸ್ವಿ ಸೂರ್ಯ ಅವರ ಆರೋಪಗಳಿಗೆ ಡಿ.ಕೆ ಶಿವಕುಮಾರ್ ಇನ್ನೂ ರಿಯಾಕ್ಟ್ ಮಾಡಿಲ್ಲ. ಬೆಂಗಳೂರು ಅಭಿವೃದ್ಧಿ ವಿಚಾರದಲ್ಲಿ ಆಗುತ್ತಿರುವ ತಪ್ಪಿನ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಅವರು, ಬೆಂಗಳೂರಿನ ಸುರಂಗ ರಸ್ತೆ ಯೋಜನೆಯನ್ನು ನಾವು ವಿರೋಧಿಸುವಾಗ, ಕೆಲವರು ಸಿಂಗಾಪುರವನ್ನು ಮಾದರಿ ಎಂದು ಉಲ್ಲೇಖಿಸುತ್ತಾರೆ. ಆದರೆ ಅವರು ಸಿಂಗಾಪುರ ಏನು ಮಾಡಿತ್ತು ಎನ್ನುವುದನ್ನು ಮರೆಯುತ್ತಿದ್ದಾರೆ.

ಸಿಂಗಾಪುರ ಕೂಡ ಇದೇ ರೀತಿಯ ಮೆಗಾ ಸುರಂಗ ಯೋಜನೆಗಳು ದುಬಾರಿ, ಸುಸ್ಥಿರವಲ್ಲದ ಮತ್ತು ದಟ್ಟಣೆಯನ್ನು ಕಡಿಮೆ ಮಾಡುವಲ್ಲಿ ಯಾವುದೇ ಉಪಯೋಗವಿಲ್ಲ ಎಂದು ಅರಿತುಕೊಂಡ ನಂತರ ಅವುಗಳನ್ನು ರದ್ದು ಮಾಡಿದೆ. ಉದಾಹರಣೆಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಡಿ. ಸಿಂಗಾಪುರದ ತಿದ್ದುಕೊಂಡು ನಡೆದಿರುವ ವಿಷಯಗಳನ್ನೂ ಗಮನಿಸಿ, ಅದರಿಂದಲೂ ಕಲಿಯಿರಿ. ಗೌರವಾನ್ವಿತ ಡಿಸಿಎಂ ಡಿ.ಕೆ ಶಿವಕುಮಾರ್ ಅವರೇ ಇತರರು ಈಗಾಗಲೇ ಬೇಡ ಎಂದು ಹಿಂದೆ ಸರಿದ ತಪ್ಪುಗಳನ್ನು ನಾವು ಏಕೆ ಪುನರಾವರ್ತಿಸಬೇಕು ಎಂದು ತೇಜಸ್ವಿ ಸೂರ್ಯ ಅವರು ಪ್ರಶ್ನೆ ಮಾಡಿದ್ದಾರೆ.
ನೇರವಾಗಿ ಚರ್ಚೆ ಮಾಡೋಣ ಬನ್ನಿ!
ಇನ್ನು (Hebbal-Silk Board Tunnel Road) ಈ ವಿಚಾರವಾಗಿ ನೇರವಾಗಿ ಚರ್ಚೆ ಮಾಡೋಣ ಬನ್ನಿ ಎಂದು ಸಂಸದ ತೇಜಸ್ವಿ ಸೂರ್ಯ ಅವರು ಡಿ.ಕೆ ಶಿವಕುಮಾರ್ ಅವರಿಗೆ ಆಹ್ವಾನ ನೀಡಿದ್ದಾರೆ. ಬೆಂಗಳೂರಿ ಅಭಿವೃದ್ಧಿ ವಿಚಾರದಲ್ಲಿ ನೇರಾ - ನೇರ ಚರ್ಚೆ ಮಾಡುವುದಕ್ಕೆ ನಾನು ರೆಡಿ ನೀವು ರೆಡಿನಾ ಅಂತ ಅವರು ಪ್ರಶ್ನೆ ಮಾಡಿದ್ದಾರೆ.
ಸುರಂಗ ರಸ್ತೆ ಯೋಜನೆಯ ತಾಂತ್ರಿಕ ಪರಿಶೀಲನೆ ಮತ್ತು ಸಾರ್ವಜನಿಕ ಚರ್ಚೆಯ ಬಗ್ಗೆ ನೀವು ನಿಜವಾಗಿಯೂ ಸ್ವಾಗತಿಸುತ್ತಿದ್ದರೆ. ಈ ಯೋಜನೆಯ ನೇತೃತ್ವ ವಹಿಸಿರುವ ಗೌರವಾನ್ವಿತ ಡಿಸಿಎಂ ಡಿ.ಕೆ ಶಿವಕುಮಾರ್ ಅವರೊಂದಿಗೆ ಮುಕ್ತ ಚರ್ಚೆಯನ್ನು ನಾನು ಪ್ರಸ್ತಾಪಿಸುತ್ತೇನೆ. ಸಮಯ ಮತ್ತು ಸ್ಥಳವು ನೀವೇ ಆಯ್ಕೆ ಮಾಡಿ ಎಂದು ಕಾಂಗ್ರೆಸ್ ಪಕ್ಷಕ್ಕೆ ಸವಾಲು ಹಾಕಿದ್ದಾರೆ.
ಅರ್ಹತೆ ಮತ್ತು ಅನಾನುಕೂಲಗಳ ಬಗ್ಗೆ ಆರೋಗ್ಯಕರ ರೀತಿಯಲ್ಲಿ ಚರ್ಚಿಸುವುದು ಖಂಡಿತವಾಗಿಯೂ ಪ್ರಯೋಜನಕಾರಿಯಾಗಿದೆ. ನಿಮ್ಮಿಂದ ಪ್ರತಿಕ್ರಿಯೆಯನ್ನು ಕೇಳಲು ನಾನು ಕಾಯುತ್ತಿದ್ದೇನೆ. ಧನ್ಯವಾದಗಳು ಎಂದಿದ್ದಾರೆ.












Click it and Unblock the Notifications