Bengaluru Rains: ಮುಂದಿನ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ಭಾರೀ ಮಳೆ- ಯೆಲ್ಲೋ ಅಲರ್ಟ್ ಘೋಷಣೆ, ವರದಿ, ವಿವರ
ಬೆಂಗಳೂರು, ಅಕ್ಟೋಬರ್ 10: ಸೋಮವಾರ ಸಂಜೆ ನಗರದ ಕೆಲವು ಭಾಗಗಳಲ್ಲಿ ಭಾರಿ ಮಳೆ ಸುರಿದಿದೆ. ಇದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಎಡೆಬಿಡದೇ ಸುರಿದ ಮಳೆಯಿಂದಾಗಿ ರಸ್ತೆಗಳು ಜಲಾವೃತಗೊಂಡಿವೆ. ಇದರಿಂದ ವಾಹನ ಸವಾರರಿಗೆ ತೀವ್ರ ತೊಂದರೆಯಾಗಿದೆ ಎಂದು ವರದಿಯಾಗಿದೆ.
ಸೋಮವಾರ ಸಂಜೆ ಸುರಿದ ಮಳೆಯು ಮಂಗಳವಾರವೂ ಮುಂದುವರಿಯಲಿದ್ದು, ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಂಗಳವಾರ ನಗರದಲ್ಲಿ ಯೆಲ್ಲೋ ಅಲರ್ಟ್ ಘೋಷಿಸಿದೆ. ಮುಂದಿನ ಒಂದೆರಡು ದಿನಗಳಲ್ಲಿ ಸಾಧಾರಣದಿಂದ ಭಾರೀ ಮಳೆಯಾಗುವ ನಿರೀಕ್ಷೆಯಿದೆ ಎಂದು ಐಎಂಡಿ ಹೇಳಿದೆ.

ಸೋಮವಾರ ಸುರಿದ ಮಳೆಗೆ ರಸ್ತೆಗಳಲ್ಲಿ ಮರಗಳ ಕೊಂಬೆ ರೆಂಬೆಗಳು ಬಿದ್ದು, ವಾಹನ ಸವಾರರಿಗೆ ತೀವ್ರ ತೊಂದರೆಯಾಗಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ದೂರುಗಳು ಬಂದಿವೆ. ಈ ಬಗ್ಗೆ ತ್ವರಿತ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕೆಂದು ನಾಗರಿಕರು ಬಿಬಿಎಂಪಿಯನ್ನು ಒತ್ತಾಯಿಸಿದೆ.
ಐಎಂಡಿ ಮಾಹಿತಿಯ ಪ್ರಕಾರ, ಬೆಂಗಳೂರು ನಗರದಲ್ಲಿ 4 ಸೆಂ.ಮೀ ಮತ್ತು ಎಚ್‌ಎಎಲ್ ವಿಮಾನ ನಿಲ್ದಾಣ ಪ್ರದೇಶದಲ್ಲಿ 5 ಸೆಂ.ಮೀ ಮಳೆಯಾಗಿದೆ.
ಸೋಮವಾರ ಸಂಜೆ ವಾಹನ ಸವಾರರು ಜಲಾವೃತಗೊಂಡ ರಸ್ತೆಗಳಲ್ಲಿ ಸಂಚರಿಸಲು ಹರಸಾಹಸ ಪಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ದೇವರಬೀಸನಹಳ್ಳಿ ಹೊರ ವರ್ತುಲ ರಸ್ತೆ, ಮಹದೇವಪುರದ ಸೇಲಂ ಕೆಳಸೇತುವೆ, ಹೊಸೂರು ರಸ್ತೆಯ ರೂಪೇನ ಅಗ್ರಹಾರ, ಮೈಸೂರು ರಸ್ತೆಯ ನಾಯಂಡಹಳ್ಳಿ, ಹರಳೂರು ಜಂಕ್ಷನ್, ಹೊಸೂರು ರಸ್ತೆ, ರೈಲ್ವೇ ಅಂಡರ್‌ಪಾಸ್, ಶೇಷಾದ್ರಿಪುರ, ಧನಂಜಯ ಅರಮನೆ ಪ್ರದೇಶಗಳಲ್ಲಿ ಭಾರಿ ಜಲಾವೃತ ವರದಿಯಾಗಿದೆ.

ವಿಜಯನಗರ, ನಾಗಾರ್ಜುನ ಜಂಕ್ಷನ್, ಬನ್ನೇರುಘಟ್ಟ ರಸ್ತೆ, ಎಂ.ಜಿ.ರಸ್ತೆಯ ಅನಿಲ್ ಕುಂಬ್ಳೆ ವೃತ್ತ, ಕಲ್ಯಾಣ್ ನಗರ ಸೇತುವೆ, ಹೆಸರಘಟ್ಟ ಕ್ರಾಸ್, ತುಮಕೂರು ರಸ್ತೆಯುದ್ದಕ್ಕೂ ನೀರು ಹರಿಯುತ್ತಿರುವುದ ಕಂಡುಬಂದಿದೆ. ಈ ಎಲ್ಲ ಮಾರ್ಗಗಳಲ್ಲಿ ಟ್ರಾಫಿಕ್ ಸಮಸ್ಯೆ ಎದುರಾಗಿದೆ. ಇದನ್ನು ನಿಯಂತ್ರಿಸಲು ಸಂಚಾರಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಭಾರಿ ಮಳೆಯಿಂದಾಗಿ ವಾಹನ ಸವಾರರು ರಸ್ತೆಯಲ್ಲಿಯೇ ಪರದಾಡುತ್ತಿರುವುದು ಕಂಡುಬಂದಿತು.
ಮುಂದಿನ ಮೂರು ದಿನಗಳ ಕಾಲ ನಗರದಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಲಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಬೆಂಗಳೂರಿನ ಐಎಂಡಿ ಮುಖ್ಯಸ್ಥ ಪ್ರಸಾದ್ 'ದಿ ಹಿಂದೂ' ಪತ್ರಿಕೆಗೆ ತಿಳಿಸಿದ್ದಾರೆ.
'ಮುಂದಿನ ಮೂರು ದಿನಗಳವರೆಗೆ, ಮಧ್ಯಾಹ್ನದ ಸಮಯದಲ್ಲಿ ಭಾರೀ ಮಳೆ ಸುರಿಯಲಿದೆ. ಸಂಜೆ 6 ಗಂಟೆ ಸುಮಾರಿಗೆ ಗುಡುಗು ಸಹಿತ ಮಳೆಯಾಗಲಿದೆ. ಮುಂದಿನ ಮೂರು ದಿನಗಳಲ್ಲಿ ಸಂಜೆ ತಡವಾಗಿ ಮಳೆಯಾಗುವ ನಿರೀಕ್ಷೆಯಿದೆ' ಎಂದು ಪ್ರಸಾದ್ ಹೇಳಿದ್ದಾರೆ.

ಈ ಅವಧಿಯಲ್ಲಿ ನಗರದ ಕೆಲವು ಭಾಗಗಳಲ್ಲಿ ಸುಮಾರು 7 ರಿಂದ 8 ಸೆಂ.ಮೀ ಮಳೆಯಾಗುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದ್ದಾರೆ.
ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಹಲವು ಭಾಗಗಳಲ್ಲಿ ಭಾನುವಾರದಿಂದ ಭಾರೀ ಮಳೆಯಾಗುತ್ತಿದೆ. ಇದು ಅಕ್ಟೋಬರ್ 12 ರ ವರೆಗೆ ಮುಂದುವರೆಯುವ ನಿರೀಕ್ಷೆಯಿದೆ. ನಂತರ ಮಳೆಯು ಕಡಿಮೆಯಾಗುತ್ತದೆ ಎಂದು ಪ್ರಸಾದ್ ಹೇಳಿದ್ದಾರೆ.
ಉಡುಪಿ, ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಬೆಂಗಳೂರು, ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ, ತುಮಕೂರು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಅಲ್ಲಲ್ಲಿ ಗುಡುಗು ಸಹಿತ ಮಳೆಯಾಗುವ ಸಂಭವವಿದೆ.
ಬೆಂಗಳೂರಿನಲ್ಲಿ ನಿನ್ನೆ ಸುರಿದ ಮಳೆ ಪ್ರಮಾಣ
ಕೊಡತಿ: 96.5 ಮಿ.ಮೀ
ಕೆಂಗೇರಿ: 94.5 ಮಿ.ಮೀ
ಎಚ್ ಗೊಲ್ಲಹಳ್ಳಿ: 86.5 ಮಿ.ಮೀ
ಹಾಲನಾಯಕನಹಳ್ಳಿ: 85 ಮಿ.ಮೀ
ರಾಜರಾಜೇಶ್ವರಿ ನಗರ: 78 ಮಿ.ಮೀ
ಕೊಟ್ಟಿಗೆಪಾಳ್ಯ: 76 ಮಿ.ಮೀ
ಎಚ್‌ಎಎಲ್ ವಿಮಾನ ನಿಲ್ದಾಣ: 75 ಮಿ.ಮೀ
ನಾಯಂಡಹಳ್ಳಿ: 71 ಮಿ.ಮೀ
ಬಿಳೇಕಹಳ್ಳಿ: 70 ಮಿ.ಮೀ
ಚಂದಾಪುರ: 67.5 ಮಿ.ಮೀ
ರಾಜಮಹಲ್ ಗುಟ್ಟಹಳ್ಳಿ: 66 ಮಿ.ಮೀ
ನಾಗಪುರ: 65 ಮಿ.ಮೀ
ಮಾರತ್ತಹಳ್ಳಿ: 64 ಮಿ.ಮೀ
ಅರಕೆರೆ: 63 ಮಿ.ಮೀ
ಪೀಣ್ಯ ಪ್ರದೇಶ: 63 ಮಿ.ಮೀ
ಕೋರಮಂಗಲ: 61 ಮಿ.ಮೀ
ದಯಾನಂದನಗರ: 60.5 ಮಿ.ಮೀ
ವಿದ್ಯಾಪೀಠ: 60.5 ಮಿ.ಮೀ
ಬಾಗಲಕುಂಟೆ: 56 ಮಿ.ಮೀ
ಸಂಪಂಗಿರಾಮನಗರ: 56 ಮಿ.ಮೀ
ಬಿಟಿಎಂ ಲೇಔಟ್: 53.5 ಮಿ.ಮೀ
ವನ್ನಾರಪೇಟೆ: 53 ಮಿ.ಮೀ
ಹೊರಮಾವು2: 52.5 ಮಿ.ಮೀ
ವಿವಿ ಪುರ: 51.5 ಮಿ.ಮೀ
ನಂದಿನಿ ಲೇಔಟ್: 51 ಮಿ.ಮೀ
ವರ್ತೂರು: 49 ಮಿ.ಮೀ
ಕೊನೇನ ಅಗ್ರಹಾರ: 46 ಮಿ.ಮೀ
ಬೆಳ್ಳಂದೂರು: 45 ಮಿ.ಮೀ
ಚೌಡೇಶ್ವರಿ ವಾರ್ಡ್: 43.5 ಮಿ.ಮೀ
ಕರ್ನಾಟಕದಲ್ಲಿ ನಿನ್ನೆ ಸುರಿದ ಮಳೆ ಪ್ರಮಾಣ
ಕೋಲಾರ: 118.5 ಮಿ.ಮೀ
ಬೆಂಗಳೂರು ನಗರ: 96.5 ಮಿ.ಮೀ
ರಾಮನಗರ: 93 ಮಿ.ಮೀ
ಹಾಸನ: 86.5 ಮಿ.ಮೀ
ಬೆಂಗಳೂರು ಗ್ರಾಮಾಂತರ: 80.5 ಮಿ.ಮೀ
ಮಂಡ್ಯ: 73.5 ಮಿ.ಮೀ
ಮೈಸೂರು: 73.5ಮಿ.ಮೀ
ದಕ್ಷಿಣ ಕನ್ನಡ: 72 ಮಿ.ಮೀ
ಕೊಡಗು: 71 ಮಿ.ಮೀ
ಚಾಮರಾಜನಗರ: 48 ಮಿ.ಮೀ
ಶಿವಮೊಗ್ಗ: 47 ಮಿ.ಮೀ
ಉಡುಪಿ: 42 ಮಿ.ಮೀ
ಹೆಚ್ಚು ಮಳೆ ಸುರಿದ ಸ್ಥಳಗಳು
ಜಯಮಂಗಲ, ಕೋಲಾರ: 118.5 ಮಿ.ಮೀ
ಹಸಂಡಹಳ್ಳಿ, ಕೋಲಾರ: 115.5 ಮಿ.ಮೀ
ಕೊಡತಿ, ಬೆಂಗಳೂರು: 96.5 ಮಿ.ಮೀ
ಕೆಂಗೇರಿ, ಬೆಂಗಳೂರು: 94.5 ಮಿ.ಮೀ
ಚಾಕನಹಳ್ಳಿ, ರಾಮನಗರ: 93 ಮಿ.ಮೀ
-
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಮಾರ್ಚ್ 25ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
Bengaluru: 50 ವಾರ್ಡ್ಗಳಲ್ಲಿ ಕಸ ವಿಲೇವಾರಿ ಸ್ಥಗಿತ; ವೇತನ ವಿಳಂಬಕ್ಕೆ ಮುನಿದು ಸಾಮೂಹಿಕ ರಜೆ ಹಾಕಿದ ಕಾರ್ಮಿಕರು -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು












Click it and Unblock the Notifications