ಬೆಂಗಳೂರು ನಗರದಲ್ಲಿ ಧಾರಾಕಾರ ಮಳೆ ಆರಂಭ
ಬೆಂಗಳೂರು, ಆಗಸ್ಟ್. 23 : ಉದ್ಯಾನ ನಗರಿ ಬೆಂಗಳೂರಿನಲ್ಲಿ ಧಾರಾಕಾರ ಮಳೆ ಆರಂಭವಾಗಿದೆ. ಹಬ್ಬದ ಖರೀದಿಯಲ್ಲಿ ಬ್ಯುಸಿಯಾಗಿದ್ದ ಜನರು, ಊರಿಗೆ ತೆರಳಲು ಸಿದ್ಧರಾಗಿದ್ದ ಜನರಿಗೆ ಮಳೆ ಅಡ್ಡಿ ಉಂಟು ಮಾಡಿದೆ.

ಬುಧವಾರ ಸಂಜೆ 7.30ರ ಸುಮಾರಿಗೆ ನಗರದ ವಿವಿಧ ಬಡಾವಣೆಗಳಲ್ಲಿ ಮಳೆ ಆರಂಭವಾಗಿದೆ. ಜಯನಗರ, ಬಸವನಗುಡಿ, ಬನಶಂಕರಿ ಮುಂತಾದ ಬಡಾವಣೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ.
Heavy downpour around Whitefield and water flowing on road at Varthur Kodi. Traffic moving slowly pic.twitter.com/YXTFlUsPb0
— Whitefield Traffic (@WhitefieldTrf) August 23, 2017
ಕೆ.ಆರ್.ಮಾರುಕಟ್ಟೆ, ಶಿವಾನಂದ ವೃತ್ತ, ಮಲ್ಲೇಶ್ವರಂ, ಶಿವಾಜಿ ನಗರ, ಮಾಗಡಿ ರಸ್ತೆ, ವಿಜಯನಗರ, ಮೈಸೂರು ರಸ್ತೆ, ಶೇಷಾದ್ರಿಪುರಂ ಸೇರಿದಂತೆ ಹಲವು ಕಡೆ ಗುಡುಗು ಸಹಿತ ಭಾರೀ ಮಳೆಯಾಗುತ್ತಿದೆ.
ಗೌರಿ-ಗಣೇಶ ಹಬ್ಬದ ಖರೀದಿಯಲ್ಲಿ ತೊಡಗಿದ್ದ ಜನರಿಗೆ ಮಳೆ ಅಡ್ಡಿ ಉಂಟು ಮಾಡಿದೆ. ಮತ್ತೊಂದು ಕಡೆ ಸಾಲು-ಸಾಲು ರಜೆ ಹಿನ್ನಲೆಯಲ್ಲಿ ಹೊರ ಊರುಗಳಿಗೆ ಹೊರಟಿದ್ದ ಜನರಿಗೆ ಮಳೆ ತೊಂದರೆ ಉಂಟು ಮಾಡಿದೆ.
ಗೌರಿ-ಗಣೇಶ ಹಬ್ಬದ ಪ್ರಯುಕ್ತ ಕೆಎಸ್ಆರ್‌ಟಿಸಿ ಒಂದು ಸಾವಿರ ಹೆಚ್ಚುವರಿ ಬಸ್ಸುಗಳ ವ್ಯವಸ್ಥೆ ಮಾಡಿದೆ. ಇಂದು ರಾತ್ರಿಯಿಂದ ಬಸ್ಸುಗಳು ಬೇರೆ-ಬೇರೆ ಜಿಲ್ಲೆಗಳು ಮತ್ತು ಹೊರ ರಾಜ್ಯಗಳಿಗೆ ತೆರಳಿದೆ. ಆದರೆ, ಮಳೆಯ ಕಾರಣ ವಾಹನ ಸಂಚಾರ ಮಂದಗತಿಯಲ್ಲಿದೆ.












Click it and Unblock the Notifications