ಬೆಂಗಳೂರು ಮಳೆ: ವೈಟ್‌ಫಿಲ್ಡ್ ಸುತ್ತಮುತ್ತ ಜೋರು ಮಳೆ, ರಸ್ತೆಗಳು ಜಲಾವೃತ, ಸಾರ್ವಜನಿಕರಿಗೆ ಕಿರಿಕಿರಿ, ಬಿದ್ದ ಮಳೆ ವಿವರ

ಬೆಂಗಳೂರು, ಏಪ್ರಿಲ್ 04: ಕರ್ನಾಟಕ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಂಗಳವಾರವು ಮಳೆ ಮುಂದುವರಿದೆ. ಸಂಜೆ ನಂತರ ಸುರಿದ ಗುಡುಗು ಸಹಿತ ಜೋರು ಮಳೆ ನಗರದಲ್ಲಿ ಕೆಲವು ಆವಾಂತರಗಳು ಸೃಷ್ಟಿಯಾದವು. ವೈಟ್‌ಫಿಲ್ಡ್ ಪ್ರದೇಶ‌ ಅಕ್ಷರಶಃ ನಲುಗಿದೆ. ಕೆಲವೆಡೆ ರಸ್ತೆಗಳು ಜಲಾವೃತಗೊಂಡಿವೆ.

ನಗರದಲ್ಲಿ ಸೋಮವಾರ ಸುರಿದಿದ್ದ ಮಳೆ ಮಂಗಳವಾರ ಮಧ್ಯಾಹ್ನವೇ ಮುಂದುವರೆಯಿತು. ಹವಾಮಾನದಲ್ಲಿ ಆಗಿರುವ ಅಕಾಲಿಕ ಬದಲಾವಣೆಗಳು ಹಾಗೂ ಅವಧಿಗೂ ಮುನ್ನವೇ ಪೂರ್ವ ಮುಂಗಾರು ಮಾರುತಗಳ ಸಕ್ರೀಯತೆಯಿಂದಾಗಿ ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಪ್ರದೇಶಗಳಲ್ಲಿ ದಾಖಲಾಗಿದೆ.

Bengaluru Rain: Heavy rain in Whitefield and Many places, problems due to water flowing on roads
Photo Credit: Whitefield Rising

ಬೆಂಗಳೂರಿನಲ್ಲಿ ಮಧ್ಯಾಹ್ನದ ನಂತರ ಬಿಸಿಲು ಮರೆಯಾಗಿ ದಿಢೀರ್ ಮಳೆ ಆರಂಭವಾಯಿತು. ಈ ಫೈಕಿ ವೈಟ್‌ಫಿಲ್ಡ್, ಮಾರತ್ತಹಳ್ಳಿ, ದೇವನಹಳ್ಳಿ ಭಾಗದಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಿದೆ. ಪ್ರಮುಖ ರಸ್ತೆಗಳಲ್ಲಿಯೇ ಒಂದು ಅಡಿಯಷ್ಟು ನೀರು ನಿಂತಿದೆ. ಐಟಿ ಕಾರಿಡಾರ್ ಎಂದು ಕರೆಸಿಕೊಳ್ಳುವ ವೈಟ್‌ ಫಿಲ್ಡ್‌ನಲ್ಲಿ ಬಿದ್ದ ಮಳೆಯ ನೀರು ಸರಾಗವಾಗಿ ಹರಿದು ಹೋಗಲು ನೀರುಗಾಲುವೆಗಳ ವ್ಯವಸ್ಥೆ ಇಲ್ಲ.

ಬಿಬಿಎಂಪಿ ನಿರ್ಲಕ್ಷ್ಯೆ ಮೂಲಭೂತ ಸೌಕರ್ಯಗಳಲ್ಲಿನ ಅವ್ಯವಸ್ಥೆಯಿಂದಾಗಿ ಮಳೆ ನೀರು ನಡು ರಸ್ತೆಯಲ್ಲೇ ನಿಂತಿತ್ತು. ಇದರಿಂದ ಬೈಕ್, ಕಾರ್ ಸೇರಿದಂತೆ ಎಲ್ಲ ವಿಧದ ವಾಹನಗಳ ಸವಾರರು ತೊಂದರೆ ಅನುಭವಿಸಿದರು. ಅನಿವಾರ್ಯವಾಗಿ ಭಯುದಿಂದಲೇ ಮಳೆ ನೀರಿನಲ್ಲೆ ಸಂಚಾರ ಮಾಡಿದ್ದು, ಈ ಕುರಿತು ಪೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಮಳೆ ಬಿದ್ದ ಪ್ರದೇಶಗಳ ವಿವರ

ವೈಟ್‌ಫಿಲ್ಡ್‌, ಮಾರತ್ತಹಳ್ಳಿ ಸೇರಿದಂತೆ, ಕೋರಮಂಗಲ, ಬಸವನಗುಡಿ, ಜಯನಗರ, ಚಾಮರಾಜಪೇಟೆ, ಟೀಚರ್ಸ್ ಕಾಲೋನಿ, ಮಡಿವಾಳ, ಟಿನ್ ಫ್ಯಾಕ್ಟರಿ ಜಂಕ್ಷನ್, ಯಲಹಂಕ, ಕೃಷ್ಣರಾವ್ ವೃತ್ತ, ವಿಧಾನಸೌಧ, ಮಲ್ಲೇಶ್ವರಂ, ವಿದ್ಯಾರಣ್ಯಪುರ ಸೇರಿದಂತೆ ಅನೇಕ ಬಡಾವಣೆಗಳಲ್ಲಿ ಧಾರಾಕಾರ ಮಳೆ ಬಿದ್ದಿದೆ.

ಕೆಲವೆಡೆ ಅರ್ಧಗಂಟೆಗೂ ಹೆಚ್ಚು ಕಾಲ ಇನ್ನೂ ಹಲವೆಡೆ ಒಂದು ಗಂಟೆ ಜೋರು ಮಳೆ ಸುರಿದಿದೆ. ಇದರಿಂದ ಬೀದಿ ಬದಿ ವ್ಯಾಪಾರಿಗಳಿಗೂ ತೊಂದರೆ ಆಗಿದೆ. ಕೆಲಸದಿಂದ ಮನೆಗೆ ತೆರಳುತ್ತಿದ್ದ ನೌಕರರು ಹಾಗೂ ಸಾರ್ವಜನಿಕರು ರಸ್ತೆ ಬದಿ, ಬಸ್‌ಸ್ಟಾಂಡ್‌ಗಳಲ್ಲಿ ನಿಂತು ರಕ್ಷಣೆ ಪಡೆದರು. ಕೆಲವೆಡೆ ತಡರಾತ್ರಿವರೆಗೂ ಜಿಟಿ ಜಿಟಿ ರೂಪದಲ್ಲಿ ಮಳೆ ಮುಂದುವಯುವ ಸಂಭವವಿದೆ.

Bengaluru Rain: Heavy rain in Whitefield and Many places, problems due to water flowing on roads
Photo Credit: Whitefield Rising

ಬೆಂಗಳೂರಿಗೆ ಇನ್ನೂ ಎರಡು ದಿನ ಮಳೆ

ಬೆಂಗಳೂರಿಗೆ ಮುಂದಿನ ಎರಡು ದಿನ ಏಪ್ರಿಲ್ 6ರವರೆಗೆ ಇದೇ ರೀತಿ ಗುಡುಗು ಮಿಂಚು ಸಹಿತ ಜೋರು ಮಳೆಯ ದರ್ಶನವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಕೇಂದ್ರ ಮುನ್ಸೂಚನೆ ನೀಡಿದೆ.

ನಿತ್ಯ ಬೆಳಗ್ಗೆಯಿಂದ ಬಿಸಿಲು ಕಂಡು ಬಂದರೂ ಸಹಿತ ಸಂಜೆ ಹೊತ್ತಿಗೆ ಮಬ್ಬು ವಾತಾವರಣ ಸೃಷ್ಟಿಯಾಗುತ್ತದೆ. ಬಳಿಕ ಏಕಾಎಕಿ ಮಳೆ ಬೀಳುವ ಸಂಭವವಿದೆ ಇದೆ. ಕಳೆದ ಎರಡು-ಮೂರು ದಿನದಿಂದಲೂ ನಗರದಲ್ಲಿ ತಾಪಮಾನ ಕಡಿಮೆಯಾಗಿದೆ. ಇದು ಇನ್ನೆರಡು ದಿನ ಹೀಗೆ ಮುಂದುವರಿಯಲಿದೆ ಎನ್ನಲಾಗಿದೆ.

ಬೆಂಗಳೂರು ಹವಾಮಾನ ಕೇಂದ್ರದ ವರದಿ ಪ್ರಕಾರ, ಮುಂದಿನ ಎರಡು ದಿನ ಹಗುರ ಮಳೆ ಆಗಲಿದೆ. ಅಷ್ಟಾಗಿ ಜೋರು ಮಳೆ ಬಾರದು. ಉಷ್ಣಾಂಶದಲ್ಲಿ ತುಸು ಏರಿಕೆ ಕಂಡು ಬರಲಿದೆ. ಗರಿಷ್ಠ ಉಷ್ಣಾಂಶ 34-35 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 22-23 ಡಿಗ್ರಿ ಸೆಲ್ಸಿಯಸ್ ದಾಖಲಾಗಬಹುದು ಎಂದು ಮುನ್ಸೂಚನೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+