ಕಚೇರಿ ಬಿಡುವ ಸಮಯ ನೋಡಿ ಬರುವನು ಮಳೆರಾಯ : ಬೆಂಗಳೂರಲ್ಲಿ 2 ದಿನ ಭಾರಿ ಮಳೆ
ಬೆಂಗಳೂರು, ಆಗಸ್ಟ್ 20: ಅಯ್ಯೋ ಎಲ್ಲಾ ಕಡೆಯೂ ಮಳೆಯಾಗ್ತಿದೆ ಬೆಂಗಳೂರಲ್ಲಿ ಮಾತ್ರ ಇಲ್ಲ ಎನ್ನುತ್ತಿದ್ದವರಿಗೆ ಖುಷಿಯಾಗಿರಬಹುದು. ಬೆಂಗಳೂರಿಗರು ತೊಯ್ದು ತೊಪ್ಪೆಯಾರೂ ಪರವಾಗಿಲ್ಲ ಮಳೆ ಹೀಗೆ ಮುಂದುವರೆಯಲಿ ಎನ್ನುವವರು ಹಲವಾರು ಮಂದಿ.
ಆದರೂ ಯಾರೂ ಏನೇ ಹೇಳಿದರೂ ಇಂದು ಬೆಂಗಳೂರು ತೊಯ್ದು ತೊಪ್ಪೆಯಾಗಿದೆ. ಎಲ್ಲೆಂದರಲ್ಲಿ ನೀರು ನಿಂತುಕೊಂಡು ವಾಹನ ಸಂಚಾರ ಅಸ್ತವ್ಯವಸ್ತವಾಗುವಂತೆ ಮಾಡಿದೆ. ಕಳೆದೆರೆಡು ಗಂಟೆಗಳಿಂದ ಹೊಯ್ಯುತ್ತಿರುವ ಮಳೆಯಿಂದಾಗಿ ಜನರು ಪರಿತಪಿಸುವಂತಾಗಿದೆ.
ಕಳೆದ ಎರಡು ದಿನಗಳಿಂದ ಸಂಜೆ ಸುಮಾರು 6 ಗಂಟೆಯ ಬಳಿಕ ಮಳೆ ಆರಂಭವಾಗುತ್ತಿದೆ ಕನಿಷ್ಠ 2-3 ಗಂಟೆಗಳ ಕಾಲ ಮಳೆ ಚೆನ್ನಾಗಿ ಸುರಿಯುತ್ತಿದೆ.

ಮಂಗಳವಾರ ಸಂಜೆಯಿಂದಲೇ ವರುಣ ಆರ್ಭಟ ಜೋರಾಗಿ ಸಾಗಿದೆ. ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಮಳೆ ಸುರಿದಿದ್ದು ನಾಗರಿಕರು, ವಾಹನ ಸವಾರರು ಮಳೆಯಿಂದ ತೊಂದರೆಗೀಡಾದರು. ಮಂಗಳವಾರ ಕಚೇರಿ ಮುಗಿಸಿ ಮನೆಗೆ ತೆರಳಲು ತಯಾರಾಗಿದ್ದ ಉದ್ಯೋಗಿಗಳಿಗೆ ತೀವ್ರ ತೊಂದರೆ ಉಂಟಾಯಿತು.
ಮೆಜೆಸ್ಟಿಕ್, ಕೆ.ಆರ್. ಮಾರುಕಟ್ಟೆ, ಯಶವಂತಪುರ, ಹನುಮಂತನಗರ, ವಿದ್ಯಾರಣ್ಯಪುರದಲ್ಲಿ ವಾಹನ ಸಂಚಾರಕ್ಕೆ ಧಕ್ಕೆಯಾಗಿದೆ. ಎಂಜಿ ರಸ್ತೆ, ಕೆಂಗೇರಿ, ಜಯನಗರ, ಉತ್ತರಹಳ್ಳಿ, ಶ್ರೀನಿವಾಸನಗರ, ಹನುಮಂತನಗರ, ವಿಧಾನಸೌಧ, ಶಾಂತಿ ನಗರ, ಆಡುಗೋಡಿ, ಮಲ್ಲೇಶ್ವರ, ರಾಜಾಜಿನಗರ, ಯಶವಂತಪುರ, ಮೈಸೂರು ರಸ್ತೆ ಸೇರಿದಂತೆ ಹಲವೆಡೆ ಭಾರಿ ಮಳೆಯಾಗಿದೆ.
ಮುಂದಿನ ಎರಡು ದಿನಗಳ ಕಾಲ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.












Click it and Unblock the Notifications