Breaking: ಬೆಂಗಳೂರಿಗೆ ಯೆಲ್ಲೋ ಅಲರ್ಟ್; ಮುಂದಿನ 3 ದಿನ ಭಾರಿ ಮಳೆ

ಬೆಂಗಳೂರು ಸೆಪ್ಟಂಬರ್ 04: ರಾಜ್ಯ ರಾಜಧಾನಿಯಲ್ಲಿ ಮುಂದಿನ ಮೂರು ದಿನ ಭಾರಿ ಮಳೆ ಸುರಿಯುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ)ಯ ಬೆಂಗಳೂರು ಹವಾಮಾನ ಕೇಂದ್ರ ಮುನ್ಸೂಚನೆ ನೀಡಿದೆ.

ಕಳೆದ ಎರಡು ವಾರದಿಂದ ಸಿಲಿಕಾನ್ ಸಿಟಿಯಲ್ಲಿ ದಿನ ಬಿಟ್ಟು ದಿನ ಮಳೆ ಮುಂದುವರಿದಿದೆ. ಇದೀಗ ಸೆಪ್ಟಂಬರ್ 7ರವರೆಗೆ ಸಾಧಾರಣದಿಂದ ಭಾರಿ ಮಳೆ ಸುರಿಯುವ ಲಕ್ಷಣಗಳು ಇದ್ದು, ಮೂರು ದಿನವೂ ಬೆಂಗಳೂರು 'ಯೆಲ್ಲೋ ಅಲರ್ಟ್' ಎಚ್ಚರಿಕೆ ಪಡೆದಿದೆ.

ಈ ಅವಧಿಯಲ್ಲಿ ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಹಲವೆಡೆ ಸುಮಾರು 12ಸೆಂಟಿ ಮೀಟರ್‌ವರೆಗೆ ಗುಡುಗು, ಮಿಂಚು ಸಹಿತ ಧಾರಾಕಾರವಾಗಿ ಮಳೆ ಅಬ್ಬರಿಸಲಿದೆ. ಇನ್ನೂ ಕೆಲವು ಕಡೆಗಳಲ್ಲಿ ಸಾಧಾರಣವಾಗಿ ಮಳೆ ಬೀಳುವ ಸಾಧ್ಯತೆ ಇದೆ. ಈವೇಳೆ ನಗರದಾದ್ಯಂತ ಚಳಿ ಹಾಗೂ ಮೋಡ ಮುಸುಕಿನ ವಾತಾವರಣವೇ ಕಂಡು ಬರಲಿದೆ. ಈ ಸಮಯದಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 30 ಡಿಗ್ರಿ ಸೆಲ್ಸಿಯಸ್ ಹಾಗೂ 20 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಸಂಭವವಿದೆ ಎಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ.

Heavy rain expected in Bengaluru for next 3 days

ಸೆ.4ರಂದು ಭಾನುವಾರ ಸಂಜೆ ನಂತರ ನಗರದ ಬಹಳಷ್ಟು ಕಡೆಗಳಲ್ಲಿ ವ್ಯಾಪಕವಾಗಿ ಮಳೆ ಬರಲಿದೆ. ಕೆಲವು ಕಡೆಗಳಲ್ಲಿ ಮಾತ್ರ ಹಗುರದಿಂದ ಸಾಧಾರಣವಾಗಿ ಮಳೆ ಆಗಬಹುದು. ಇನ್ನೂ ಸೆಪ್ಟಂಬರ್ 7ರ ನಂತರ ಮಳೆ ತುಸು ಇಳಿಕೆ ಆಗಬಹದು. ಇದಲ್ಲದೆ ಹವಾಮಾನದಲ್ಲಿ ಯಾವುದೇ ಗಂಭೀರ ರೂಪದ ಬದಲಾವಣೆಗಳು ಇಲ್ಲ ಎಂದು ತಿಳಿಸಿದ್ದಾರೆ.

ಎಲ್ಲೆಲ್ಲಿ ಎಷ್ಟು ಮಳೆ ದಾಖಲಾಗಿದೆ

ಭಾನುವಾರ ಸಂಜೆ 4ಗಂಟೆಗೆ ಕೊನೆಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಬೆಂಗಳೂರಿನಲ್ಲಿ ಸಾಧಾರಣವಾಗಿ ಮಳೆ ಬಿದ್ದಿದೆ. ಈ ಪೈಕಿ ಯಲಹಂಕದಲ್ಲಿ 61.5ಮಿ.ಮೀ. ಮಳೆ ದಾಖಲಾಗಿದೆ. ಇನ್ನೂ ದೊಡ್ಡನೆಕ್ಕುಂದಿ ಹಾಗೂ ವಿಜ್ಞಾನನಗರದಲ್ಲಿ ತಲಾ 44ಮಿ.ಮೀ, ವಿದ್ಯಾಪೀಠ, ಕೋನೇನ ಅಗ್ರಹಾರದಲ್ಲಿ ತಲಾ 38ಮಿ.ಮೀ, ಸಿಂಗಸಂದ್ರ, ಗರುಡಚಾರಪಾಳ್ಯ, ಬೇಗೂರು ಹಾಗೂ ಜಕ್ಕೂರು ತಲಾ 34.5ಮಿ.ಮೀ. ಮಳೆ ಬಿದ್ದಿದೆ.

ಉಳಿದ ಪ್ರದೇಶಗಳಲ್ಲಿ ಸಂಪಂಗಿರಾಮನಗರ, ಹೂಡಿ, ಬಿಳೆಕಳ್ಳಿ, ಬೊಮ್ಮನಹಳ್ಳಿ, ಕೋರಮಂಗಲ, ರಾಜಮಹಲ್ ಗುಟ್ಟಹಳ್ಳಿ, ದೊರೆಸಾನಿಪಾಳ್ಯ, ಅರಕೇರಿ, ಬಸವನಪುರ, ಕೆ.ಆರ್‌.ಪುರಂ ಸೇರಿದಂತೆ ಅನೇಕ ಕಡೆಗಳಲ್ಲಿ ಹಗುರ ಮಳೆ ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ವರದಿ ಮಾಹಿತಿ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+