Heavy Rain: ಮಳೆ ಅಬ್ಬರ ಜೋರು, ಯಾವ ಯಾವ ಜಿಲ್ಲೆಗಳಲ್ಲಿ ಮಳೆ ಆರ್ಭಟ?
ಮಳೆ.. ಮಳೆ... ಮತ್ತೊಮ್ಮೆ ಮಳೆಯ ಅಬ್ಬರ ಜೋರಾಗಿದ್ದು, ಕನ್ನಡ ನಾಡಿನ ಜನರಿಗೆ ಹೊಸ ಹೊಸ ಟೆನ್ಷನ್ ಶುರುವಾಗುತ್ತಿದೆ. ಸೈಕ್ಲೋನ್ ಕಾಟಕ್ಕೆ ಬೆಚ್ಚಿಬಿದ್ದು ಕನ್ನಡಿಗರು ಈಗ ಅಕಾಲಿಕ ಮಳೆ ಸಮಸ್ಯೆ ಎದುರಿಸುವ ಪರಿಸ್ಥಿತಿ ಬಂದಿದೆ. ಈಗಾಗಲೇ ಸಾಕಷ್ಟು ಮಳೆ ಬಿದ್ದು, ಕರ್ನಾಟಕದ ಬಹುತೇಕ ಡ್ಯಾಂಗಳು & ಕೆರೆಗಳು ತುಂಬಿ ಹೋಗಿವೆ. ಹೀಗಿದ್ದರೂ, ಮಳೆ ಅಬ್ಬರ ಮತ್ತಷ್ಟು ಜೋರಾಗುವ ಎಚ್ಚರಿಕೆ ನೀಡಲಾಗಿದೆ. ಹಾಗಾದ್ರೆ ಯಾವ ಯಾವ ಜಿಲ್ಲೆಗಳಲ್ಲಿ ಮಳೆ ಆರ್ಭಟ ಇರಲಿದೆ?
ಬೆಂಗಳೂರು ಜನರು ಮಳೆ ಅಬ್ಬರಕ್ಕೆ ಕಂಗಾಲಾಗಿ ಹೋಗಿದ್ದಾರೆ, ಯಾಕಂದ್ರೆ ಮಳೆ ಕಾರಣ ಈಗಾಗಲೇ ಬೆಂಗಳೂರಿನಲ್ಲಿ ಹಲವು ಸಮಸ್ಯೆಗಳು ಕಾಡುತ್ತಿವೆ. ಚಳಿಗಾಲದ ಸಮಯದಲ್ಲೂ ಈ ರೀತಿಯಾಗಿ ಮಳೆ ಬೀಳುತ್ತಿರುವ ಕಾರಣ ಏನು ಮಾಡಬೇಕು? ಎಂಬ ಗೊಂದಲ ನಿರ್ಮಾಣ ಆಗಿದೆ. ಇಷ್ಟೆಲ್ಲಾ ಪರದಾಟದ ನಡುವೆ ಮತ್ತೊಂದು ಕಡೆ ಇನ್ನಷ್ಟು ಮಳೆ ಸುರಿಯುವ ಬಗ್ಗೆ ಮುನ್ನೆಚ್ಚರಿಕೆ ನೀಡಲಾಗಿದೆ. ಹಾಗಾದ್ರೆ ಬೆಂಗಳೂರು ಸೇರಿದಂತೆ ಯಾವೆಲ್ಲಾ ಜಿಲ್ಲೆಗೆ ಇದೀಗ ಮಳೆ ಮುನ್ನೆಚ್ಚರಿಕೆ ನೀಡಲಾಗಿದೆ? ಮುಂದೆ ಓದಿ.

ಕರ್ನಾಟಕದ ಈ ಜಿಲ್ಲೆಗಳಿಗೆ ಮಳೆ!
ಡಿಸೆಂಬರ್ ತಿಂಗಳಲ್ಲಿ ಮಳೆ ಬರುವುದು ಕಡಿಮೆ, ಯಾಕಂದ್ರೆ ಡಿಸೆಂಬರ್ ತಿಂಗಳಿಂದ ಚಳಿ ಆರಂಭ ಆಗುತ್ತದೆ. ಹೀಗಿದ್ದಾಗ ಚಂಡಮಾರುತ ಪರಿಣಾಮ ಡಿಸೆಂಬರ್ ತಿಂಗಳಲ್ಲಿ ಕೂಡ ಹೀಗೆ ಭಾರಿ ಮಳೆ ಬೀಳುತ್ತಿದೆ. ಇದಕ್ಕೆ ಕಾರಣ ಆಗಿರುವುದು ಬಂಗಾಳಕೊಲ್ಲಿ & ಹಿಂದೂ ಮಹಾಸಾಗರ ಭಾಗದಲ್ಲಿ ಕಡಿಮೆ ಒತ್ತಡ ಪ್ರದೇಶ ನಿರ್ಮಾಣ ಆಗಿರುವುದು. ಹೀಗೆ ಸಾಗರ ಪ್ರದೇಶದಲ್ಲಿ ಕಡಿಮೆ ಒತ್ತಡ ಪ್ರದೇಶ ನಿರ್ಮಾಣ ಆಗಿದ್ದರೆ ಅದು ಚಂಡಮಾರುತದ ಸ್ವರೂಪ ಪಡೆಯುತ್ತದೆ. ಈಗ ಕೂಡ ಮತ್ತೊಂದು ಚಂಡಮಾರುತ ದಕ್ಷಿಣ ಭಾರತಕ್ಕೆ ಅಪ್ಪಳಿಸುವುದು ಗ್ಯಾರಂಟಿ ಆಗಿದೆ!
ಬೆಂಗಳೂರು, ದಕ್ಷಿಣ ಕನ್ನಡ, ಉಡುಪಿ....
ಡಿಸೆಂಬರ್ 13ರ ನಂತರ ಹೊಸ ಚಂಡಮಾರುತದ ಆರ್ಭಟ ಶುರುವಾಗುವ ಭಯ ಕಾಡ್ತಿದೆ. ಇದರ ಪರಿಣಾಮ ಕರ್ನಾಟಕ, ತಮಿಳುನಾಡು, ಶ್ರೀಲಂಕಾದಲ್ಲಿ ಭಾರಿ ಮಳೆ ಸುರಿಯುತ್ತೆ ಅಂತ ಹವಾಮಾನ ಇಲಾಖೆ ವಾರ್ನಿಂಗ್ ಕೊಟ್ಟಿದೆ. ಹಾಗೇ ಕರ್ನಾಟಕದ ರಾಜಧಾನಿ ಬೆಂಗಳೂರು, ಬೆಂಗಳೂರು ಗ್ರಾಮಾಂತರ ಸೇರಿ ದಕ್ಷಿಣ ಕನ್ನಡ, ಉಡುಪಿ & ಉತ್ತರ ಕನ್ನಡ ಭಾಗದಲ್ಲಿ ಮಳೆ ಅಬ್ಬರಿಸುವ ಮುನ್ನೆಚ್ಚರಿಕೆ ನೀಡಿದ್ದಾರೆ.
ಹೀಗೆ ಹಾಸನ, ಕೊಡಗು, ಮಂಡ್ಯ, ಮೈಸೂರು ಸೇರಿ ರಾಮನಗರ, ತುಮಕೂರು ಜಿಲ್ಲೆಗಳಲ್ಲಿ ಕೂಡ ಮಳೆ ಸುರಿಯಲಿದ್ದು, ಚಿಕ್ಕಬಳ್ಳಾಪುರ & ಕೋಲಾರ ಜಿಲ್ಲೆಗೂ ಮಳೆಯ ಮೋಡಗಳು ಅಪ್ಪಳಿಸಲಿವೆ ಎಂದು ಮುನ್ನೆಚ್ಚರಿಕೆ ನೀಡಲಾಗಿದೆ. ಮತ್ತೊಂದು ಕಡೆ ವಾತಾವರಣ ಹೀಗೆಲ್ಲ ಹಾಳಾಗಿ ಕೈಕೊಟ್ಟು ಹೋಗುತ್ತಿರುವ ಕಾರಣ ಅನ್ನದಾತ ರೈತರಿಗೆ ಕೂಡ ಚಿಂತೆ ಶುರುವಾಗಿದೆ.












Click it and Unblock the Notifications