Get Updates
Get notified of breaking news, exclusive insights, and must-see stories!

Vasanth Nadiger: ಹಿರಿಯ ಪತ್ರಕರ್ತ ದಿ. ವಸಂತ ನಾಡಿಗೇರ್ ಅವರಿಗೆ ಶ್ರದ್ಧಾಂಜಲಿ

ಇತ್ತೀಚೆಗೆ ನಿಧನರಾದ ಹಿರಿಯ ಪತ್ರಕರ್ತ, ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಸಂಪಾದಕರಾಗಿದ್ದ ವಸಂತ್ ನಾಡಿಗೇರ ಅವರಿಗೆ ಕನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿದ್ಯಾರ್ಥಿಗಳ ಕೂಟ (ಕವಿಪವಿ) ವತಿಯಿಂದ ಬೆಂಗಳೂರಿನ ಪ್ರೆಸ್ ಕ್ಲಬ್‌ ಆವರಣದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು. ಶ್ರದ್ಧಾಂಜಲಿ ಸಭೆಯಲ್ಲಿ ಮಾಧ್ಯಮ ಕ್ಷೇತ್ರದ ಒಡನಾಡಿಗಳು, ವಸಂತ್‌ ನಾಡಿಗೇರ್ ಅವರ ಕುಟುಂಬಸ್ಥರು ಭಾಗವಹಿಸಿದ್ದರು.

ಸಂಯುಕ್ತ ಕರ್ನಾಟಕ ಸಮೂಹ ಸಂಪಾದಕರಾದ ಹುಣಸವಾಡಿ ರಾಜನ್ ಮಾತನಾಡಿ, ವಸಂತ್ ನಾಡಿಗೇರ ಅವರು ಸಜ್ಜನ ವ್ಯಕ್ತಿಯಾಗಿದ್ದರು. ಸಂಪಾದಕರಿಗೆ ಮಾದರಿಯಾಗಿದ್ದ ಅವರು, ಯಾವುದೇ ವಿಚಾರವನ್ನು ನಿರ್ದಾಕ್ಷಿಣ್ಯವಾಗಿ, ನಿರ್ದಿಷ್ಟವಾಗಿ ಹೇಳುತ್ತಿದ್ದರು. ಸಂಪಾದಕ ಅಂದ್ರೆ ಸರ್ವಾಧಿಕಾರಿ ಅಲ್ಲ, ಎಲ್ಲರ ಭಾವನೆಗಳನ್ನು ಕೇಳುವಂತಹ ಕಿವಿ ಇರಬೇಕು. ಆದರೆ ತಮ್ಮದೇ ನಿರ್ಧಾರವನ್ನು ತೆಗೆದುಕೊಳ್ಳುವಂತಹ ವ್ಯಕ್ತಿತ್ವವನ್ನು ಸಂಪಾದಕರು ಹೊಂದಿರಬೇಕು. ವಸಂತ ನಾಡಿಗೇರ ಅಂತಹ ಸಂಪಾದಕರಾಗಿದ್ದರು ಎಂದು ನೆನಪು ಮಾಡಿಕೊಂಡರು.

Heartfelt Tribute Paid to Veteran Journalist Vasant Nadiger by Kavipavi

ಅಂತಹ ಪತ್ರಕರ್ತರೊಬ್ಬರನ್ನು ಕೇವಲ ಹೆಡ್‌ಲೈನ್‌ಗೆ ಸೀಮಿತಗೊಳಿಸುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದ ರಾಜನ್, ಪತ್ರಿಕೋದ್ಯಮದಲ್ಲಿ ವಿಷಯ, ವಿಚಾರಕ್ಕೆ ಮನ್ನಣೆ ಇದೆ. ಸುದ್ದಿಗೂ ಮಹತ್ವ ಇದೆ. ಸುದ್ದಿ ಬರವಣಿಗೆಯಲ್ಲಿ ಸುಧಾರಣೆಯಾಗಬೇಕು ಎನ್ನುವುದು ಅವರ ಉದ್ದೇಶವಾಗಿತ್ತು, ಹೆಡ್‌ಲೈನ್ ಕೊಡುವುದಷ್ಟೇ ಅಲ್ಲ, ಅವರಿಗೆ ಅಪಾರ ಜ್ಞಾನ ಇತ್ತು ಎಂದು ನೆನಪು ಮಾಡಿಕೊಂಡರು.

ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಅವರು ನಿಸ್ವಾರ್ಥ ವ್ಯಕ್ತಿತ್ವ ಹೊಂದಿದ್ದರು. ಸೂಕ್ಷ್ಮ ಮನಸ್ಸಿನ ವ್ಯಕ್ತಿಯಾಗಿದ್ದರು. ಸಣ್ಣ ವಿಚಾರಗಳಿಗೂ ಹೆಚ್ಚು ಗಮನ ಕೊಡುತ್ತಿದ್ದರು. ಎರಡು ವರ್ಷಗಳ ಹಿಂದೆ ಮೈಸೂರಿನಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ ದತ್ತಿನಿಧಿ ಪ್ರಶಸ್ತಿ ಕೊಡುತ್ತೇವೆ ಎಂದಾಗ ಬೇಡ ಎಂದಿದ್ದರು. ಕೊನೆಗೆ ಅವರನ್ನು ಒಪ್ಪಿಸಿ ಸನ್ಮಾನ ಮಾಡಲಾಯಿತು, ಅಂತಹ ಹಿರಿಯ ಪತ್ರಕರ್ತರಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಸಿಗದೇ ಇರುವುದು ಬೇಸರದ ಸಂಗತಿ ಎಂದರು.

ಪ್ರಜಾವಾಣಿ ಸಂಪಾಕ ರವೀಂದ್ರ ಭಟ್‌ ಮಾತನಾಡಿ, ವಸಂತ ಅವರ ವ್ಯಕ್ತಿತ್ವದ ಕುರಿತು ಸೊಶಿಯಲ್ ಮಿಡಿಯಾದಲ್ಲಿ ಬಂದಿದ್ದನ್ನು ನೋಡಿದ ಮೇಲೆ ಯಾವುದೇ ಪತ್ರಕರ್ತ ಬದುಕಿದ್ದಾಗಲೇ ಅವರ ಬಗ್ಗೆ ಬರೆಯುವಂತಹ ವಾತಾರವಣವನ್ನು ಪತ್ರಿಕಾ ಸಂಘಟನೆಗಳ ಮೂಲಕ ಮಾಡಬೇಕು. ಯಾವುದೇ ಪತ್ರಕರ್ತ ತೀರಿದ ಮೇಲೆ ಅವರನ್ನು ಗುರುತಿಸುವುದು ಸರಿಯಲ್ಲ. ಅವರಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಸಿಕ್ಕಿಲ್ಲ ಎಂಬು ಬೇಸರ ಪಟ್ಟುಕೊಳ್ಳುವುದಕ್ಕಿಂತ, ಈಗ ಅವರ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಅವರ ಕುರಿತು ಬಂದಿರುವುದನ್ನು ನೋಡಿದರೆ ಅದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ ಎಂದರು.

ವಸಂತ ನಾಡಿಗೇರ ಅವರ ಪತ್ನಿ ನಂದಾ ನಾಡಿಗೇರ ಮಾತನಾಡಿ ಅವರೊಂದಿಗಿನ ಒಡನಾಟವನ್ನು ನೆನಪಿಸಿಕೊಂಡು ಭಾವುಕರಾದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+