Cooking Oil: ಅಡುಗೆ ಎಣ್ಣೆ ಬಳಕೆಯ ಬಗ್ಗೆ ಮಹತ್ವದ ಸೂಚನೆ ಕೊಟ್ಟ ಆರೋಗ್ಯ ಇಲಾಖೆ!
Cooking Oil: ಕರ್ನಾಟಕದಲ್ಲಿ ಆರೋಗ್ಯ ಇಲಾಖೆಯು ಅಲರ್ಟ್ ಆಗಿದ್ದು ವಿವಿಧ ಆಹಾರ ಪದಾರ್ಥಗಳಲ್ಲಿ ಮಿಶ್ರಣ ಹಾಗೂ ಕಲಬೆರೆಕೆಯ ಮೇಲೆ ಕಣ್ಣಿರಿಸಿದೆ. ಇದೀಗ ಅಡುಗೆ ಎಣ್ಣೆಯ ಬಳಕೆಗೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆಯು ಮಹತ್ವದ ಆದೇಶವೊಂದನ್ನು ಹೊರಡಿಸಿದೆ. ಇತ್ತೀಚಿನ ದಿನಗಳಲ್ಲಿ ಕಲಬೆರಕೆ ಎಣ್ಣೆ ಹಾಗೂ ಅಡುಗೆ ಎಣ್ಣೆ ಮರು ಬಳಕೆಯ ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತಿದೆ. ಇದೀಗ ಆರೋಗ್ಯ ಇಲಾಖೆಯು ಈ ಸಂಬಂಧ ಮಹತ್ವದ ಆದೇಶವೊಂದನ್ನು ಮಾಡಿದೆ.
ಜುಲೈ 30ರಂದು ಆಯುಕ್ತರು, ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ, ಬೆಂಗಳೂರು ಅವರ ಅಧ್ಯಕ್ಷತೆಯಲ್ಲಿ ಅಡುಗೆ ಎಣ್ಣೆಯಲ್ಲಿ Transfat (ಕೊಬ್ಬಿನ ಪ್ರಮಾಣ) ಕಡಿಮೆ ಇರುವ ಅಡುಗೆ ಎಣ್ಣೆಯನ್ನು ಉಪಯೋಗಿಸುವ ಬಗ್ಗೆ ಮತ್ತು ಉಪಯೋಗಿಸಿದ ಅಡುಗೆ ಎಣ್ಣೆಯನ್ನು (RUCO) ವಿಲೇವಾರಿ ಮಾಡುವ ಬಗ್ಗೆ ವಿಶೇಷ ಚರ್ಚೆ ನಡೆದಿದೆ. ಅಲ್ಲದೇ ಇದೇ ಸಂದರ್ಭದಲ್ಲಿ ಅಡುಗೆ ಎಣ್ಣೆ ತಯಾರಿಕ ಘಟಕಗಳಲ್ಲಿ ಸ್ವಚ್ಛತೆ ಪ್ಯಾಕೇಜಿಂಗ್, ಲೆಬೆಲಿಂಗ್ ಮತ್ತು ಆಯಿಲ್ ಫೊರ್ಟಿಫಿಕೇಶನ್ ಬಗ್ಗೆ ವಿಡೀಯೋ ಕಾನ್ಸ್‌ರೆನ್ಸ್ ಸಭೆಯನ್ನು ನಡೆಸಲಾಗಿದೆ.

ಈ ಸಭೆಗೆ ಜಿಲ್ಲಾ ಅಂಕಿತಾಧಿಕಾರಿಗಳು, ಅಡುಗೆ ತಯಾರಿಕಾ ಘಟಕದ ಮಾಲೀಕರು, ವ್ಯವಸ್ಥಾಪಕರು ಹೋಟೆಲ್ ಉದ್ದಿಮೆದಾರರ ಸ೦ಘದ ಪದಾಧಿಕಾರಿಗಳು, ಬೇಕರಿ ಸಂಘ ಪದಾಧಿಕಾರಿಗಳು, ಎಫ್.ಎಸ್.ಎಸ್.ಐ ನೊಂದಾಯಿತ RUCO ಏಜೆನ್ಸಿಗಳ ಮಾಲೀಕರು ಮತ್ತು ವ್ಯವಸ್ಥಾಪಕರು Karnataka State Bio Disel Development Board ಹಾಜರಿದ್ದರು. ಈ ಸಭೆಯಲ್ಲಿ ಆಯುಕ್ತರು ಎಲ್ಲಾ ಅಡುಗೆ ಎಣ್ಣೆ ತಯಾರಿಕಾ ಘಟಕದ ಮಾಲೀಕರಿಗೆ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ಮತ್ತು ಎಫ್.ಎಸ್.ಎಸ್. ನಿಯಮಾನುಸಾರ ಲೆಬಲಿಂಗ್ ಮತ್ತು ಆಯಿಲ್ ಫೊರ್ಟಿಫಿಕೇಶನ್ ಹೊಂದಿರುವ (Vitamin A & D) ಅಡುಗೆ ಎಣ್ಣೆಯನ್ನು ಸಾರ್ವಜನಿಕರಿಗೆ ಮಾರಾಟಮಾಡಲು ಕ್ರಮವಹಿಸಬೇಕೆಂದು ಮತ್ತು ಎಲ್ಲಾ ಆಯಿಲ್ ಉದ್ದಿಮೆದಾರರು ತಮ್ಮಲ್ಲಿ ತಯಾರಾದ ಎಣ್ಣೆಯನ್ನು ಪ್ರತಿ 06 ತಿಂಗಳಿಗೊಮ್ಮೆ ವಿಶ್ಲೇಷಣೆಗೆ ಅಥವಾ ಪರಿಶೀಲನೆಗೆ ಒಳಪಡಿಸಬೇಕು ಎಂದು ಸೂಚನೆ ನೀಡಲಾಗಿದೆ.
ಅಲ್ಲದೇ ಈ ಸಭೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹೆಚ್.ಸಿ.ಜಿ ಕ್ಯಾನ್ಸರ್ ಆಸ್ಪತ್ರೆಯ ಪ್ರಸಿದ್ಧ ಕ್ಯಾನ್ಸರ್ ತಜ್ಞರಾದ ಡಾ. ವಿಶಾಲ್ ರಾವ್ ಅವರು Transfat ಕಡಿಮೆ ಇರುವ ಅಡುಗೆ ಎಣ್ಣೆಯನ್ನು ಅಡುಗೆಗೆ ಮತ್ತು ಬೇಕರಿ ಮಾಲೀಕರು ಉಪಯೋಗಿಸಬೇಕೆಂದು ತಿಳಿಸಿದರು. ಇದರಿಂದ ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗಳು ಮತ್ತು ಅಸಂಕ್ರಾಮಿಕ ರೋಗಗಳು ತಡೆಗಟ್ಟಬಹುದೆಂದು ತಿಳಿಸಿದ್ದಾರೆ.
ಮುಂದುವರಿದು ಆಯುಕ್ತರು RUCO ಏಜೆನ್ಸಿರವರಿಗೆ 2024-25ನೇ ಮತ್ತು 2025- 26ನೇ, ಸಾಲಿನಲ್ಲಿ ಒಟ್ಟು 3268990 ಲೀಟರ್ ಉಪಯೋಗಿಸಿದ ಎಣ್ಣೆಯನ್ನು ಸಂಗ್ರಹಣೆ ಮಾಡಿದ್ದೇವೆಂದು RUCO ಏಜೆನ್ಸ್ ಮಾಲೀಕರು ಆಯುಕ್ತರಿಗೆ ಮಾಹಿತಿ ನೀಡಿದ್ದಾರೆ. ಇನ್ನು ಹೆಚ್ಚು ಸಂಗ್ರಹಣೆ ಮಾಡಿ BIO DIESEL ತಯಾರಿಕೆ ಘಟಕಕ್ಕೆ ನೀಡಬೇಕೆಂದು ಎಫ್.ಎಸ್.ಎಸ್.ಎ ನೊಂದಾಯಿತ RUCO ಏಜೆನ್ಸಿಗಳಿಗೆ ತಿಳಿಸಲಾಗಿದೆ. ಸಭೆಗೆ ಹಾಜರಿದ್ದ, ಹೋಟೆಲ್ ಸಂಘದ ಪದಾಧಿಕಾರಿಗಳಿಗೆ ಅವರು ಉಪಯೋಗಿಸಿ ಉಳಿದ ಎಣ್ಣೆಯನ್ನು ಕಟ್ಟುನಿಟ್ಟಾಗಿ RUCO ಏಜೆನ್ಸಿಗಳಿಗೆ ನೀಡಿ ಈ ಎಣ್ಣೆಯು ಮರುಬಳಕೆಯಾಗದಂತೆ ಸಹಕರಿಸಬೇಕೆಂದು ಸೂಚನೆ ನೀಡಲಾಗಿದೆ. ಇತ್ತೀಚೆಗೆ ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್‌ವೊಂದರ ಕಬಾಬ್ ಬಗ್ಗೆ ಭಾರೀ ಚರ್ಚೆ ನಡೆದಿತ್ತು.












Click it and Unblock the Notifications