• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಫೆಬ್ರವರಿ 8ರಂದು ರಾಜ್ಯ ಬಜೆಟ್: ಕುಮಾರಸ್ವಾಮಿ ಘೋಷಣೆ

|
   ಫೆಬ್ರವರಿ 8ರಂದು ರಾಜ್ಯ ಬಜೆಟ್: ಕುಮಾರಸ್ವಾಮಿ ಘೋಷಣೆ | Oneindia Kannada

   ಬೆಂಗಳೂರು, ಜನವರಿ 4: ಫೆಬ್ರವರಿ 8 ರಂದು ರಾಜ್ಯ ಬಜೆಟ್ ನಡೆಸುವುದಾಗಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ.

   ರೈತರ ಸಾಲಮನ್ನಾ ಕುರಿತಂತೆ ಪ್ರತಿಪಕ್ಷಗಳು ಮಾಡುತ್ತಿರುವ ಎಲ್ಲಾ ಟೀಕೆಗೆ ಉತ್ತರ ಕೊಡಲು ಮುಂದಾಗಿದ್ದಾರೆ. ಬರುವ ಫೆಬ್ರವರಿ 8 ರಂದು ಬಜೆಟ್ ನಲ್ಲಿ ಬ್ಯಾಂಕುಗಳಿಗೆ ನೀಡಬೇಕಾದ ಸಾಲದ ಮೊತ್ತವನ್ನು ಒಂದೇ ಕಂತಿನಲ್ಲಿ ಪಾವತಿಸುವುದಾಗಿ ತಿಳಿಸಿದ್ದಾರೆ.

   ಕುಮಾರಸ್ವಾಮಿ ಬಜೆಟ್ 2018: ಯಾವುದು ಏರಿಕೆ? ಯಾವ್ದು ಇಳಿಕೆ?

   ಲೋಕಸಭಾ ಚುನಾವಣೆ ಸಿದ್ಧತೆ ಹಿನ್ನೆಲೆಯಲ್ಲಿ ಪಕ್ಷದ ಕಚೇರಿ ಜೆಪಿ ಭವನದ ಆವರಣದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತಣಾಡಿದ ಅವರು ಫೆ.8ರಂದು ಬಜೆಟ್ ಮಂಡನೆ ಮಾಡುವ ಉದ್ದೇಶವನ್ನು ಹೊಂದಿದ್ದೇನೆ.

   ಬಜೆಟ್ ವೇಳೆ ಸಾಲಮನ್ನಾ ಯೋಜನೆಯ ಪೂರ್ಣಮೊತ್ತ 46 ಸಾವಿರ ಕೋಟಿ ರೂವನ್ನು ಮುಂದಿನ ಆರ್ಥಿಕ ಸಾಲಿನಲ್ಲಿ ಚುಕ್ತಾ ಮಾಡುವ ಬಗ್ಗೆ ಪ್ರಕಟಿಸಲಾಗುವುದು, ರೈತರಲ್ಲಿ ಅವಿಶ್ವಾಸ ಮೂಡಿಸುವ ವಿಪಕ್ಷಗಳ ಹುನ್ನಾರಕ್ಕೆ ಯಾವುದೇ ಆಸ್ಪದ ನೀಡಬಾರದು ಎಂದು ಹೇಳಿದರು.

   ಕರ್ನಾಟಕ ಬಜೆಟ್ 2018 : ಕುಮಾರಸ್ವಾಮಿ ಆಯವ್ಯಯದ Highlights

   ಮುಂದಿನ ಬಜೆಟ್‌ನಲ್ಲಿ ಹಿರಿಯ ನಾಗರಿಕರ ವೃದ್ಧಾಪ್ಯ ವೇತನವನ್ನು ಒಂದು ಸಾವಿರ ರೂನಿಂದ ಎರಡು ಸಾವಿರ ರೂಗೆ ಹೆಚ್ಚಳ ಮಾಡುವ ಇಂಗಿತವನ್ನು ಕುಮಾರಸ್ವಾಮಿ ವ್ಯಕ್ತಪಡಿಸಿದರು.

   English summary
   Chief Minister H D Kumaraswamy said he would present the second Budget of the JD(S)-Congress coalition on February 8 . Addressing partymen on Thursday.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X