ವಿಕಲಚೇತನ ಮಹಿಳೆಯ ಸ್ವಾವಲಂಬಿ ಬದುಕಿಗೆ ಕುಮಾರಸ್ವಾಮಿ ಸಹಾಯ
ಬೆಂಗಳೂರು, ಜೂನ್ 03: ಸ್ವಾಲಂಬಿಯಾಗಿ ಬದುಕು ಕಟ್ಟಿಕೊಳ್ಳಲು ಬಯಸಿದ ಬೆಳಗಾವಿಯ ವಿಕಲಚೇತನ ಮಹಿಳೆಯೊಬ್ಬಳಿಗೆ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಸಹಾಯ ಹಸ್ತ ಚಾಚಿದ್ದಾರೆ.
ಎಂಥವರೂ ಮೆಚ್ಚಲೇಬೇಕು ವಿಕಲಚೇತನ ಸಮರ್ಥನ ಸಾಧನೆ!
ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಮಾಯಕ್ಕ ಎಂಬ ವಿಕಲಚೇತನ ಮಹಿಳೆಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸ್ವಯಂ ಉದ್ಯೋಗ ಕೈಗೊಳ್ಳಲು 50 ಸಾವಿರ ರೂ.ಗಳ ಚೆಕ್ ವಿತರಿಸಿದರು.
ಮಾಯಕ್ಕನ ಇಬ್ಬರು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸರ್ಕಾರಿ ವಿದ್ಯಾರ್ಥಿನಿಲಯದಲ್ಲಿ ಪ್ರವೇಶ ನೀಡಲು ವ್ಯವಸ್ಥೆ ಮಾಡಲು ಬೆಳಗಾವಿ ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಹಳ್ಳಿಯವರಗೆ ಮುಖ್ಯಮಂತ್ರಿಗಳು ಸೂಚಿಸಿದರು. ಜನತಾ ದರ್ಶನ ಸಂದರ್ಭದಲ್ಲೂ ಕೂಡ ನೆರವಿಗೆಂದು ಬಂದ ವಿಕಲಚೇತನರಿಗೆ ಮುಖ್ಯಮಂತ್ರಿಗಳು ಸಹಾಯ ಮಾಡಿದ್ದರು.