ನನಗೆ ಟೆಲಿಫೋನ್ ಕದ್ದಾಲಿಕೆ ರೂಢಿ ಇಲ್ಲ: ಎಚ್‌ಡಿ ಕುಮಾರಸ್ವಾಮಿ
ಬೆಂಗಳೂರು, ಆಗಸ್ಟ್ 29: ಸಮ್ಮಿಶ್ರ ಸರ್ಕಾರದಿಂದ ಬಿಜೆಪಿ ನಾಯಕರ ಟೆಲಿಫೋನ್ ಕದ್ದಾಲಿಕೆ ಆಗಿದೆ ಎಂಬ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಆರೋಪವನ್ನು ತಳ್ಳಿ ಹಾಕಿರುವ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ನನಗೆ ಟೆಲಿಫೋನ್ ಕದ್ದಾಲಿಸುವ ಹವ್ಯಾಸವಿಲ್ಲ ಎಂದಿದ್ದಾರೆ.
ಕೇಂದ್ರದಲ್ಲಿ ಅವರದ್ದೇ ಸರ್ಕಾರವಿದೆ, ಮೋದಿ ಭೇಟಿಯಾಗಿ ಯಾವ ಟೆಲಿಫೋನ್ ಎಲ್ಲಿ ಕದ್ದಾಲಿಕೆಯಾಗುತ್ತಿದೆ ಎಂದು ತನಿಖೆ ನಡೆಸಲಿ, ಅವರ ಸರ್ಕಾರ ಇದ್ದಾಗ ಮಾಡಿದ ಕೆಲಸ ನೆನೆಸಿಕೊಂಡು ಮಾತನಾಡಿರಬೇಕು, ಬೇರೆ ಯಾರ ಫೋನ್ ಕದ್ದಾಲಿಕ ಚಟ ನಮಗಿಲ್ಲ, ಈ ಬಗ್ಗೆ ಸಣ್ಣ ಸಾಕ್ಷ್ಯ ತಂದು ಕೊಟ್ಟರೂ ನಾನೇ ಕ್ರಮ ಕೈಗೊಳ್ಳುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಇದಕ್ಕೆ ಉಪಮುಖ್ಯಮಂತ್ರಿ ಜಿ ಪರಮೇಶ್ವರ್ ಕೂಡ ಹೇಳಿಕೆ ನೀಡಿದ್ದು, ಯಾವ ರಾಜಕೀಯ ನಾಯಕರ ಫೋನ್ ಟ್ರ್ಯಾಪ್ ಆಗಿಲ್ಲ, ದೆಹಲಿಯಿಂದ ಮಾಹಿತಿ ಬಂದರೆ ಪೊಲೀಸರು ಟ್ರ್ಯಾಪ್ ಮಾಡುತ್ತಾರೆ, ಒಂದೊಮ್ಮೆ ಈ ರೀತಿ ಟ್ರ್ಯಾಪ್ ಆಗಿದ್ದರೆ ಗೃಹಸಚಿವನಾಗಿ ನನಗೆ ಮಾಹಿತಿ ಇರುತ್ತಿತ್ತು ಎಂದು ಹೇಳಿದರು.











Click it and Unblock the Notifications