ಮಗನಿಗೆ ಮತ ಹಾಕೋ ಅದೃಷ್ಟ ಕುಮಾರಸ್ವಾಮಿಗಿಲ್ಲ! ಅನಿತಾ ಅವರಿಗೂ ಇಲ್ಲ!
Recommended Video
ಮಗನಿಗೆ ವೋಟ್ ಹಾಕುವ ಅದೃಷ್ಟ ಅಪ್ಪ, ಅಮ್ಮನಿಗೆ ಇಲ್ಲ..! | Oneindia Kannada
ಬೆಂಗಳೂರು, ಏಪ್ರಿಲ್ 18: ಇಡೀ ರಾಷ್ಟ್ರದ ಗಮನ ಸೆಳೆದ ಮಂಡ್ಯದ ಚುನಾವಣಾ ಕಣದಲ್ಲಿರುವ ಪುತ್ರ ನಿಖಿಲ್ ಕುಮಾರಸ್ವಾಮಿ ಅವರಿಗೆ ಮತ ಹಾಕುವ ಅದೃಷ್ಟ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೇ ಇಲ್ಲ, ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರಿಗೂ ಇಲ್ಲ!
ಏಕೆಂದರೆ ಎಚ್ ಡಿ ಕುಮಾರಸ್ವಾಮಿ ಮತ್ತು ಅನಿತಾ ಕುಮಾರಸ್ವಾಮಿ ಇಬ್ಬರೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಮತದಾನದ ಹಕ್ಕು ಪಡೆದಿದ್ದಾರೆ. ಅವರು ರಾಮನಗರ ಜಿಲ್ಲೆಯ ಕಾತಗಾನಹಳ್ಳಿಯಲ್ಲಿ ಈಗಾಗಲೇ ಮತ ಚಲಾಯಿಸಿದ್ದು, ಅವರೊಂದಿಗೆ ಪುತ್ರ ನಿಖಿಲ್ ಕುಮಾರಸ್ವಾಮಿ ಅವರೂ ಜೊತೆಯಾಗಿದ್ದಾರೆ.
ಕಳೆದ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಎರಡೆರಡು ಕ್ಷೇತ್ರಗಳಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದ ಎಚ್ ಡಿ ಕುಮಾರಸ್ವಾಮಿಯವರು ತಮಗೇ ತಾವು ಮತಹಾಕಿಕೊಳ್ಳಲು ಸಾಧ್ಯವಾಗಿರಲಿಲ್ಲ!

ರಾಮನಗರ ಮತ್ತು ಚನ್ನಪಟ್ಟಣ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಕುಮಾರಸ್ವಾಮಿ ಅವರು ಬಿಡದಿಯಲ್ಲಿ ತಮ್ಮ ಮತದಾನದ ಹಕ್ಕನ್ನು ಹೊಂದಿದ್ದರು.












Click it and Unblock the Notifications